newsfirstkannada.com

BREAKING: ಒಂದಲ್ಲ ಎರಡು ಬಾರಿ ಸ್ಫೋಟ.. ಬೆಂಗಳೂರು ಬ್ಲಾಸ್ಟ್ ಬಗ್ಗೆ ದೆಹಲಿ ಇಂಟೆಲಿಜೆನ್ಸ್ ಅಲರ್ಟ್‌!

Share :

Published March 1, 2024 at 5:20pm

    ರಾಮೇಶ್ವರಂ ಕೆಫೆಗೆ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ದೌಡು

    ಸಾಫ್ಟ್​​ವೇರ್ ಕಂಪನಿ, ಟೆಕ್ಕಿಗಳೇ ಹೆಚ್ಚಿರುವ ಜಾಗ ಆಯ್ಕೆ ಯಾಕೆ?

    ಬೆಂಗಳೂರಿನ ಶಾಂತಿಗೆ ಭಂಗ ತರಲು ಮಾಡಿರುವ ಷಡ್ಯಂತ್ರವೇ?

ಬೆಂಗಳೂರು: ಇಂದಿರಾನಗರ ರಾಮೇಶ್ವರಂ ಕೆಫೆಯಲ್ಲಿ ಸಂಭವಿಸಿರೋ ಸ್ಫೋಟ ಪ್ರಕರಣ ಹಲವು ತಿರುವುಗಳನ್ನ ತೆಗೆದುಕೊಳ್ಳುತ್ತಿದೆ. ಬ್ಲಾಸ್ಟ್ ಆಗಿರೋದು ಒಂದು ಬಾರಿ ಅಲ್ಲ ಎರಡು ಬಾರಿ. ಹತ್ತು ನಿಮಿಷಗಳ ಅವಧಿಯಲ್ಲಿ ಎರಡು ಬಾರಿ ಸ್ಫೋಟ ಸಂಭವಿಸಿದೆ. ಮೊದಲ ಬಾರಿ ಬ್ಲಾಸ್ಟ್ ಆಗ್ತಿದ್ದಂತೆ ಎಲ್ಲರೂ ಹೊರಗೆ ಓಡಿ ಬಂದಿದ್ದಾರೆ ಎನ್ನಲಾಗಿದೆ. ರಾಮೇಶ್ವರಂ ಕೆಫೆಯಲ್ಲಿ ಅನುಮಾನಾಸ್ಪದ ಸ್ಫೋಟ ಸಂಭವಿಸಿದ ಹಿನ್ನೆಲೆಯಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿದ್ದರು.

ಇದನ್ನೂ ಓದಿ: ‘ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಬಾಂಬ್‌ ಸ್ಫೋಟ’- ಬಿಜೆಪಿ ಸಂಸದ ತೇಜಸ್ವಿ ಸೂರ್ಯ

ದೆಹಲಿಯ ಇಂಟೆಲಿಜೆನ್ಸ್ ಏಜೆನ್ಸಿಯಿಂದಲೂ ಈ ಬಗ್ಗೆ ಮಾಹಿತಿ ಬಂದಿದೆ. ಪ್ರಮುಖವಾಗಿ ಬೆಂಗಳೂರು ನಗರದಲ್ಲಿ ನೆಲೆಸಿರುವ ಸ್ಲೀಪರ್ ಸೆಲ್, ಟೆರರ್ ಸಿಂಪಥೈಝರ್‌ಗಳ ಬಗ್ಗೆ ಗಮನ ಹರಿಸಲು ಭಯೋತ್ಪಾದನಾ ವಿರೋಧಿ ಸೆಲ್‌ಗೆ ಹಿರಿಯ ಅಧಿಕಾರಿಗಳು ಸೂಚನೆ ನೀಡಿದ್ದಾರೆ. ಬೆಂಗಳೂರು ಪೊಲೀಸರು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ಎಲ್ಲಾ ಆಯಾಮಗಳಲ್ಲೂ ಪರಿಶೀಲನೆ ನಡೆಸುತ್ತಿದ್ದಾರೆ.

ಉತ್ತರ ಸಿಗದ 10 ಪ್ರಶ್ನೆಗಳು
01. ಡಸ್ಟ್​ ಬಿನ್​​ಗೆ ಸ್ಫೋಟಕ ತಂದು ಹಾಕಿದ ವ್ಯಕ್ತಿ ಯಾರು?
02. ಉದ್ದೇಶ ಪೂರ್ವಕವಾಗಿ ನಿಗೂಢ ವಸ್ತು ತಂದಿಟ್ಟಿದ್ದಾನಾ?
03. ಸಿಸಿಟಿವಿಯಲ್ಲಿ ಅಪರಿಚಿತ ವ್ಯಕ್ತಿ ವಿಡಿಯೋ ರೆಕಾರ್ಡ್​ ಆಗಿದೆಯಾ?
04. ಜನನಿಬಿಡ ಪ್ರದೇಶವಾಗಿದ್ದರೂ ಟಾರ್ಗೆಟ್ ಏಕೆ?
05. ಸಾಫ್ಟ್​​ವೇರ್ ಕಂಪನಿ, ಟೆಕ್ಕಿಗಳೇ ಹೆಚ್ಚಿರುವ ಜಾಗ ಆಯ್ಕೆ ಯಾಕೆ?
06. ಊಟದ ವೇಳೆಯಲ್ಲೇ ಬ್ಲಾಸ್ಟ್​​​ ಆಗಿದ್ದು ಯಾಕೆ?
07. ಇದು ಉಗ್ರರ ಕೃತ್ಯವೇ? ಯಾವ ಸಂಘಟನೆ ಸ್ಫೋಟ ನಡೆಸಿದೆ?
08. ಸ್ಫೋಟದ ಹಿಂದೆ ಇರುವ ವ್ಯಕ್ತಿ, ಸಂಘಟನೆಗಳ್ಯಾರು?
09. ಸ್ಫೋಟ ನಡೆಸಿದ ವ್ಯಕ್ತಿ, ಸಂಘಟನೆಗಳ ಉದ್ದೇಶ, ಗುರಿ ಏನು?
10. ಬೆಂಗಳೂರಿನ ಶಾಂತಿಗೆ ಭಂಗ ತಂದು ಭಯ ಭೀತಿ ಉಂಟು ಮಾಡುವ ಷಡ್ಯಂತ್ರವೇ?

ಪೊಲೀಸರಿಗೆ 10 ಸವಾಲು

01. ಯಾವ ಸ್ಫೋಟ ಎಂದು ಪತ್ತೆಯಾಗಬೇಕು
02. ಎನ್​​​ಐಎಗೆ ವರದಿ ಕೊಟ್ಟು ತನಿಖೆ ನಡೆಸಬೇಕಾ?
03. ಘಟನೆ ಹಿಂದೆ ಯಾರಿದ್ದಾರೆ?
04. ಅಪರಿಚಿತ ವ್ಯಕ್ತಿ ಯಾರೆಂಬುದರ ಪತ್ತೆ ಹಚ್ಚಬೇಕು
05. ಎಫ್​​ಎಸ್​​ಎಲ್ ವರದಿ ಬರೋವರಿಗೆ ತನಿಖೆಯಲ್ಲಿರಬೇಕು
06. ಸ್ಫೋಟ ನಡೆಸಿದ್ದು ಉಗ್ರ ಸಂಘಟನೆಯಾಗಿದ್ದರೆ, ಆ ಸಂಘಟನೆ ಪತ್ತೆ ಹಚ್ಚಬೇಕು?
07. ಉಗ್ರರು ಪರಾರಿಯಾಗಿದ್ದರೆ ಶೋಧ ನಡೆಸಿ ಪತ್ತೆ ಹಚ್ಚಬೇಕು
08. ಸ್ಫೋಟ ನಡೆಸಿ ಪರಾರಿಯಾದವರನ್ನು ಪತ್ತೆ ಹಚ್ಚಿ ಕೋರ್ಟ್‌ಗೆ ಹಾಜರುಪಡಿಸಬೇಕು
09. ಸ್ಫೋಟ ನಡೆಸಿದ ವ್ಯಕ್ತಿಗಳ ವಿರುದ್ಧ ಸಾಕ್ಷ್ಯ ಸಂಗ್ರಹಿಸಿ ಕೋರ್ಟ್‌ಗೆ ಹಾಜರುಪಡಿಸಬೇಕು
10. IED ಬ್ಲಾಸ್ಟ್‌ ಆಗಿದ್ದರೆ, ಆರೋಪಿಗಳಿಗೆ ಕಠಿಣ ಶಿಕ್ಷೆಯಾಗುವಂತೆ ಕೋರ್ಟ್‌ನಲ್ಲಿ ವಾದಿಸಬೇಕು

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

BREAKING: ಒಂದಲ್ಲ ಎರಡು ಬಾರಿ ಸ್ಫೋಟ.. ಬೆಂಗಳೂರು ಬ್ಲಾಸ್ಟ್ ಬಗ್ಗೆ ದೆಹಲಿ ಇಂಟೆಲಿಜೆನ್ಸ್ ಅಲರ್ಟ್‌!

https://newsfirstlive.com/wp-content/uploads/2024/03/Rameshwaram-Cafe-2-1.jpg

Load More