/newsfirstlive-kannada/media/post_attachments/wp-content/uploads/2025/02/Delhi-Meerut-highway-accident-video-recorded-1.jpg)
ನವದೆಹಲಿ: ಈ ಕಾರು ಚಾಲಕನ ಭಂಡ ಧೈರ್ಯಕ್ಕೆ ಏನು ಹೇಳಬೇಕೋ ಗೊತ್ತಿಲ್ಲ. ಇವನು ಮಾಡಿರೋ ಘನಂದಾರಿ ಕೆಲಸಕ್ಕೆ ಎಷ್ಟು ಶಿಕ್ಷೆ ಕೊಟ್ಟರೂ ಕಡಿಮೆನೇ ಅನ್ಸುತ್ತೆ. ಈ ಭಯಾನಕ ಅಪಘಾತದ ಲೈವ್ ದೃಶ್ಯ ನೋಡಿದ್ರೆ ಎಂತಥವರು ಒಂದು ಕ್ಷಣ ಗಾಬರಿಯಾಗುವಂತೆ ಮಾಡುತ್ತದೆ.
ಟ್ರಾಫಿಕ್ ರೂಲ್ಸ್ ಪಾಲಿಸಿ ಅಂತ ಪೊಲೀಸರು ಅದೆಷ್ಟೇ ಹೇಳಿದ್ರೂ ಸವಾರರು ಮಾತ್ರ ಡೋಂಟ್ ಕೇರ್ ಅಂತಾರೆ. ಅದರಲ್ಲೂ ಒನ್ ವೇ ಅಂತ ಗೊತ್ತಿದ್ರೂ ಕೆಲ ಸವಾರರು ರಾಂಗ್ ರೂಟ್ನಲ್ಲಿ ಬಂದು ಕಿರಿಕ್ ಮಾಡ್ತಾರೆ. ವಾಹನ ಸಂಚಾರದ ನಿಯಮಗಳನ್ನು ಪಾಲಿಸದೇ ಇದ್ದರೆ ಹೀಗೆ ಆ್ಯಕ್ಸಿಡೆಂಟ್ ಕೂಡ ಆಗುತ್ತೆ.
ಈ ಕಾರು ಚಾಲಕ ರಾಂಗ್ ರೂಟ್ನಲ್ಲಿ ಬಂದು ಎಂಥಾ ಅನಾಹುತ ಮಾಡಿದ್ದಾನೆ ಅನ್ನೋದು ಸಿಸಿಟಿವಿ ದೃಶ್ಯದಲ್ಲಿ ಸ್ಪಷ್ಟವಾಗಿ ಸೆರೆಯಾಗಿದೆ.
ಇದನ್ನೂ ಓದಿ: ಜೀವನದಲ್ಲೇ ಮರೆಯಲಾಗದ ಘಟನೆ… ತನ್ನ ಮದುವೆ ಮೆರೆವಣಿಗೆಗೆ ಟ್ರಾಫಿಕ್ನಲ್ಲಿ ಓಡೋಡಿ ಬಂದ ವರ
ದೆಹಲಿ-ಮೀರತ್ ಹೈವೇನಲ್ಲಿ ಒನ್ ವೇ ಅಂತ ಗೊತ್ತಿದ್ರೂ ಈ ಕಾರು ಚಾಲಕ ರಾಂಗ್ ರೂಟ್ನಲ್ಲಿ ಬಂದಿದ್ದ. ವಿರುದ್ಧ ದಿಕ್ಕಿನಲ್ಲಿ ಬಂದಿದ್ದ ಕಾರು ಚಾಲಕ ಫೋರ್ಸ್ ಆಗಿ ಬೈಕ್ಗೆ ಡಿಕ್ಕಿ ಹೊಡೆದಿದ್ದಾನೆ.
VIDEO DELHI MERUT EXPRESS HIGHWAY #Accident#CCTVpic.twitter.com/ymBWQW85K0
— RAHUL ARODHIA (@RAHULARODHIA)
VIDEO DELHI MERUT EXPRESS HIGHWAY #Accident#CCTVpic.twitter.com/ymBWQW85K0
— RAHUL ARORA (@rahularora940) February 9, 2025
">February 9, 2025
ಕಾರು ಗುದ್ದಿದ ರಭಸಕ್ಕೆ ಬೈಕ್ ಸವಾರ ಅಲ್ಲೇ ಬಿದ್ಬಿಟ್ಟಿದ್ದಾನೆ. ಅತ್ತ ಬೈಕ್ಗೆ ಗುದ್ದಿದ ಕಾರು ಬ್ಯಾಲೆನ್ಸ್ ತಪ್ಪಿ ಮುಂದೆ ಬರ್ತಿದ್ದ ಮತ್ತೊಂದು ಕಾರಿಗೂ ಡಿಕ್ಕಿ ಹೊಡೆದಿದೆ. ಡಿಕ್ಕಿಯಾದ ರಭಸಕ್ಕೆ ಎರಡೂ ಕಾರು ಪಲ್ಟಿ ಹೊಡೆದಿವೆ.
ಒಂದೇ ಒಂದು ವಾಹನದ ರಾಂಗ್ ರೂಟ್ 5 ವಾಹನ ಅಪಘಾತವಾಗಿ 2 ಕಾರು ಸಂಪೂರ್ಣ ಜಖಂ ಆಗುವಂತೆ ಮಾಡಿದೆ. ಒಬ್ಬೇ ಒಬ್ಬನ ಈ ಯಡವಟ್ಟಿಗೆ ಹಲವರ ಲೈಫೇ ರಾಂಗ್ ಟರ್ನ್ಗೆ ತಿರುಗುವಂತೆ ಮಾಡಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ