ಮೆಟ್ರೋದಲ್ಲಿ ಎಣ್ಣೆ ಹೊಡೀಬಹುದಾ? ಪೆಗ್‌ ಮೇಲೆ ಪೆಗ್ ಕುಡಿದು ಮೊಟ್ಟೆ ತಿನ್ನುತ್ತಾ ಜಾಲಿ ಪ್ರಯಾಣ! VIDEO

author-image
admin
Updated On
ಮೆಟ್ರೋದಲ್ಲಿ ಎಣ್ಣೆ ಹೊಡೀಬಹುದಾ? ಪೆಗ್‌ ಮೇಲೆ ಪೆಗ್ ಕುಡಿದು ಮೊಟ್ಟೆ ತಿನ್ನುತ್ತಾ ಜಾಲಿ ಪ್ರಯಾಣ! VIDEO
Advertisment
  • ಎಣ್ಣೆ ಹೊಡೀತಾ, ಮೊಟ್ಟೆ ತಿನ್ನುತ್ತಾ ಪ್ರಯಾಣ ಮಾಡಿದ ವ್ಯಕ್ತಿ!
  • ಬಾಯಿಲ್ಡ್ ಎಗ್​ನ ಸಿಪ್ಪೆ ಸುಲಿಯಲು ಟ್ರೇನ್​ನ ರಾಡ್ ಬಳಕೆ
  • ಮೆಟ್ರೋದಲ್ಲಿ ಒಬ್ಬ ಗ್ರಾಹಕ 2 ಮದ್ಯದ ಬಾಟಲಿಗಳನ್ನು ಸಾಗಿಸಬಹುದಾ?

ದೆಹಲಿ ಮೆಟ್ರೋದಲ್ಲಿ ಎಣ್ಣೆ ಕೂಡ ಕುಡೀಬಹುದಾ? ಈ ವಿಡಿಯೋ ನೋಡಿದ ಎಂತಹವರಿಗೂ ಈ ಪ್ರಶ್ನೆ ಕಾಡದೇ ಇರೋದಿಲ್ಲ. ವ್ಯಕ್ತಿಯೊಬ್ಬ ಎಣ್ಣೆ ಹೊಡೀತಾ, ಮೊಟ್ಟೆ ತಿನ್ನುತ್ತಾ ಪ್ರಯಾಣ ಮಾಡಿರೋ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಮೆಟ್ರೋದಲ್ಲೇ ಎಣ್ಣೆ ಬಾಟಲಿ ಓಪನ್ ಮಾಡಿರೋ ಆಸಾಮಿ ಮೊದಲಿಗೆ ಪೆಗ್ ಮಾಡ್ಕೊಂಡು ಕುಡಿದಿದ್ದಾನೆ. ನಂತರ ಮತ್ತೊಂದು ಪೆಗ್ ಹೀರಿದ್ದಾನೆ. ಎಣ್ಣೆ ಹೊಡೆಯುತ್ತಾ ಮೊಟ್ಟೆ ತಿನ್ನುವ ಯುವಕ ಬಾಯಿಲ್ಡ್ ಎಗ್​ನ ಸಿಪ್ಪೆ ಸುಲಿಯಲು ಟ್ರೇನ್​ನ ರಾಡ್​ ಅನ್ನೇ ಬಳಸಿದ್ದಾನೆ.

publive-image

ದೆಹಲಿ ಮೆಟ್ರೋ ರೈಲಿನಲ್ಲಿ ಈ ಯುವಕ ನಿಯಮಗಳನ್ನ ಗಾಳಿಗೆ ತೂರಿ ಹುಚ್ಚಾಟ ಮೆರೆದಿದ್ದಾನೆ. ಹಿರಿಯ ನಾಗರಿಕರು, ವಿಶೇಷ ಚೇತನರ ಸೀಟ್​ನಲ್ಲಿ ಕುಳಿತು ಎಣ್ಣೆ ಹೊಡೆದಿರೋದು ಕೆಂಗಣ್ಣಿಗೆ ಗುರಿಯಾಗಿದೆ.

ಇದನ್ನೂ ಓದಿ: ಈಗ ನನ್ನ ಬಳಿಗೆ ಬಂದಿದ್ದೀಯಾ.. ರಿಷಬ್ ಶೆಟ್ಟಿಗೆ ಪಂಜುರ್ಲಿ ದೈವ ಎಚ್ಚರಿಕೆ; ಕಾಂತರ ನಟನಿಗೆ ಗಂಡಾಂತರ!  

ದೆಹಲಿ ಮೆಟ್ರೋದಲ್ಲಿರೋ ರೂಲ್ಸ್ ಏನು?
ಸದ್ಯ ದೆಹಲಿ ಮೆಟ್ರೋದಲ್ಲಿ ಪ್ರಯಾಣಿಕರಿಗೆ ಮದ್ಯದ ಬಾಟಲಿಯನ್ನು ಒಯ್ಯುವುದಕ್ಕೆ ಅವಕಾಶ ಇದೆ. ಒಬ್ಬ ಗ್ರಾಹಕ ಸೀಲ್ ಆಗಿರುವ 2 ಬಾಟಲಿಗಳನ್ನು ಮೆಟ್ರೋದಲ್ಲಿ ಒಯ್ಯಬಹುದು.


">April 7, 2025

ದೆಹಲಿ ಮೆಟ್ರೋದಲ್ಲಿ ಮದ್ಯದ ಬಾಟಲಿಯನ್ನು ತೆಗೆದುಕೊಂಡು ಹೋಗಬಹುದು. ಆದ್ರೆ ಮೆಟ್ರೋ ರೈಲಿನಲ್ಲಿ ಮದ್ಯವನ್ನ ಸೇವಿಸುವಂತಿಲ್ಲ. ಮದ್ಯ ಸೇವಿಸಿ ಮೆಟ್ರೋನಲ್ಲಿ ಪ್ರಯಾಣವೂ ಮಾಡುವ ಹಾಗಿಲ್ಲ. ಅಷ್ಟೇ ಅಲ್ಲ ದೆಹಲಿ ಮೆಟ್ರೋನಲ್ಲಿ ಊಟ, ಆಹಾರ ಸೇವನೆಯೂ ಬ್ಯಾನ್ ಆಗಿದೆ. ಈ ನಿಯಮವನ್ನು ಉಲ್ಲಂಘನೆ ಮಾಡಿದ್ರೆ ದಂಡ ವಿಧಿಸುವುದಕ್ಕೆ ಅವಕಾಶ ಇದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment