newsfirstkannada.com

VIDEO: ಈಕೆ ಮಾಡೋ ಪರಾಠಾ ಸಖತ್​ ಫೇಮಸ್; ಈ ಯುವತಿಗಾಗಿ ಯುವಕರ ಹುಡುಕಾಟ.. ಏನಿದರ ಸ್ಪೆಷಾಲಿಟಿ?

Share :

Published July 23, 2024 at 6:38am

Update July 23, 2024 at 6:40am

    ರಸ್ತೆ ಬದಿ ತಿಂಡಿಗಳನ್ನ ಮಾರಾಟ ಮಾಡೋ ಯುವತಿ, ಈಕೆಗೆ ಸಖತ್​ ಡಿಮ್ಯಾಂಡ್​​

    ವಡಾ ಪಾವ್ ಹುಡುಗಿ ರೀತಿಯಲ್ಲೇ ಈಕೆ ಕೂಡ ಸಖತ್​ ಫೇಮಸ್​ ಅಂದ್ರೆ ನಂಬ್ತೀರಾ?

    ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಯ್ತು ಯುವತಿಯ ವಿಡಿಯೋ

ಈ ಸೋಶಿಯಲ್ ಮೀಡಿಯಾ ಅನ್ನೋದೇ ಹಾಗೇ. ಯಾರು, ಯಾವಾಗಾ, ಏಕೆ ವೈರಲ್​ ಆಗುತ್ತಾರೆ ಎಂದು ಹೇಳುವುದು ಕಷ್ಟ. ಆದರೆ ಇದೀಗ ಇದೇ ಸೋಷಿಯಲ್ ಮೀಡಿಯಾದಲ್ಲಿ ರಸ್ತೆ ಬದಿ ವ್ಯಾಪಾರ ಮಾಡುವ ಯುವತಿಯೊಬ್ಬಳು ಸಖತ್​ ಸೆನ್ಸೇಷನ್ ಕ್ರಿಯೇಟ್ ಮಾಡಿಬಿಟ್ಟಿದ್ದಾಳೆ.

ಇದನ್ನೂ ಓದಿ: ತರುಣ್​​ ಕೈ ಹಿಡಿಯುತ್ತಿರುವ ಸೋನಲ್​ ಯಾರು? ಮೂಲತಃ ಎಲ್ಲಿಯವ್ರು? ಇಲ್ಲಿದೆ ಮಾಹಿತಿ

ಹೌದು, ಈ ಹಿಂದೆ ದೆಹಲಿಯ ರಸ್ತೆ ಬದಿ ವ್ಯಾಪಾರ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ವಡಾ ಪಾವ್ ಹುಡುಗಿ ಚಂದ್ರಿಕಾ ಗೆರಾ ದೀಕ್ಷಿತ್ ಸಖತ್​ ಫೇಮಸ್ ಆಗಿದ್ದಳು. ಚಂದ್ರಿಕಾಗೆ ಹಿಂದಿ ಬಿಗ್ ಬಾಸ್ OTTಯಿಂದ ಆಫರ್ ಕೂಡ ಬಂದಿತು. ಆದರೆ ಇದೀಗ ಚಂದ್ರಿಕಾಳಂತೆ ಮತ್ತೊಬ್ಬ ಯುವತಿ ಫೇಮಸ್​ ಆಗಿದ್ದಾಳೆ. ರಸ್ತೆ ಬದಿ ವ್ಯಾಪಾರ ಮಾಡಿಕೊಂಡು ಪರಾಠಾ ಮಾಡ್ತಾ ಇರೋ ಚೆಂದದ ಯುವತಿಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಆಕೆ ಮಾಡುವ ಬಾಳೆಹಣ್ಣಿನ ಪರಾಠಾ ಮತ್ತು ಮೊಟ್ಟೆ ಪರಾಠಾ ಕೂಡ ಫೇಮಸ್ ಆಗ್ತಿದೆ. ಹೀಗಾಗಿ ಪರಾಠಾ ಮಾಡೋ ಯುವತಿ ಯಾರು? ಈಕೆ ಪರಾಠಾ ಮಾರಾಟ ಮಾಡೋ ಸ್ಥಳ ಯಾವುದು ಅಂತ ಹುಡುಕಾಟ ನಡೆಸುತ್ತಿದ್ದಾರೆ.

View this post on Instagram

A post shared by PUY ROTI LADY (@puyrotilady)

ಈ ವಿಡಿಯೋವನ್ನು ಪುಯಿ ಎಂಬುವವರು ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಆಕೆಯ ಹೆಸರು ಪುಯಿ ಅಂತ. ಮೂಲತಃ ಥೈಲ್ಯಾಂಡ್​ನವರು. ಹೀಗೆ ರಸ್ತೆ ಬದಿ ಪರಾಠಾ ಸೇರಿದಂತೆ ಹಲವು ತಿಂಡಿಗಳನ್ನು ಮಾರಾಟ ಮಾಡುತ್ತಾ ಇರುತ್ತಾರೆ. ಪುಯಿಗೆ ಸಹಾಯ ಮಾಡಲೆಂದು ಅವರ ತಂಗಿ ಕೈ ಜೋಡಿಸಿದ್ದಾಳೆ. ಹೀಗೆ ಪುಯಿ ತಂಗಿ ಪರಾಠಾ ಮಾಡುತ್ತಿರೋ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದೆ. ಇದೇ ವಿಡಿಯೋ ನೋಡಿದ ನೆಟ್ಟಿಗರು ಪುಯಿ ತಂಗಿಯ ಸೌಂದರ್ಯಕ್ಕೆ ಮಾರು ಹೋಗಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

VIDEO: ಈಕೆ ಮಾಡೋ ಪರಾಠಾ ಸಖತ್​ ಫೇಮಸ್; ಈ ಯುವತಿಗಾಗಿ ಯುವಕರ ಹುಡುಕಾಟ.. ಏನಿದರ ಸ್ಪೆಷಾಲಿಟಿ?

https://newsfirstlive.com/wp-content/uploads/2024/07/china-1.jpg

Load More