Advertisment

DPL- 2 ಎಂಟ್ರಿಗೆ ‘ಆರ್ಯವೀರರು’ ಸಜ್ಜು.. ಕಿಂಗ್​ ಕೊಹ್ಲಿ, ಸೆಹ್ವಾಗ್​ ಆಸೆ ನೆರವೇರಿಸ್ತಾರಾ..?

author-image
Bheemappa
DPL- 2 ಎಂಟ್ರಿಗೆ ‘ಆರ್ಯವೀರರು’ ಸಜ್ಜು.. ಕಿಂಗ್​ ಕೊಹ್ಲಿ, ಸೆಹ್ವಾಗ್​ ಆಸೆ ನೆರವೇರಿಸ್ತಾರಾ..?
Advertisment
  • ಒಬ್ಬನರದ್ದು ಚಿಕ್ಕಪ್ಪನ ಹಾದಿ, ಮತ್ತೊಬ್ಬರದ್ದು ತಂದೆ ಹಾದಿ, ಯಶಸ್ಸು ಸಿಗುತ್ತಾ?
  • 2025ರ ಡಿಪಿಎಲ್ ಹರಾಜಿನ ಕಣದಲ್ಲಿ ಕೊಹ್ಲಿ- ಸೆಹ್ವಾಗ್ ಕಡೆಯವರು ಎಂಟ್ರಿ!
  • ಆರ್ಯವೀರಗೆ ಕೋಚ್ ರಾಜ್​​ಕುಮಾರ್ ಶರ್ಮಾ ಅವರಿಂದ ಮಾರ್ಗದರ್ಶನ

ಯುವ ಆಟಗಾರರ ಬಾಳಿಗೆ ಬೆಳಕಾಗ್ತಿರುವುದೇ ಸ್ಟೇಟ್ ಲೀಗ್ಸ್​. ಈ ಸ್ಟೇಟ್ ಲೀಗ್​​​ಗಳಲ್ಲಿ ಮಿಂಚಿನ ಪ್ರದರ್ಶನ ನೀಡಿದ್ರೆ ಸಾಕು, ರಾಜ್ಯದ ತಂಡದ ಜೊತೆಗೆ ಐಪಿಎಲ್ ಆಡುವ ಭಾಗ್ಯವೂ ಸಿಗುತ್ತೆ. ಇದೀಗ ಇದೇ ಹಾದಿಯಲ್ಲೇ ಇಬ್ಬರು ಆರ್ಯವೀರ್ ಸಾಗಿದ್ದಾರೆ. ಈ ಇಬ್ಬರಿಗೂ ವಿರೇಂದ್ರ ಸೆಹ್ವಾಗ್​, ವಿರಾಟ್​​ ಕೊಹ್ಲಿಯ ನಂಟಿದೆ. ಈ ಆರ್ಯವೀರ್​ಗಳು ಯಾರು?.

Advertisment

ದೇಶಾದ್ಯಂತ ಟಿ20 ಲೀಗ್​​ಗಳದ್ದೇ ದರ್ಬಾರ್​. ಐಪಿಎಲ್ ಮಾದರಿಯಲ್ಲೇ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ಸ್​ ನಡೆಸ್ತಿರುವ ಟಿ20 ಲೀಗ್​ಗಳು, ಅಭಿಮಾನಿಗಳ ಹೃದಯ ಗೆಲ್ಲುತ್ತಿವೆ. ಈ ಪೈಕಿ ದೆಹಲಿ ಪ್ರೀಮಿಯರ್ ಲೀಗ್ ಕೂಡ ಒಂದಾಗಿದೆ. ಇದೀಗ 2ನೇ ಆವೃತ್ತಿಯ ಹರಾಜು ಪ್ರಕ್ರಿಯೆ ಕೌಂಟ್​ಡೌನ್ ಶುರುವಾಗಿದ್ದು, ಈ ಹರಾಜು ಕಣದಲ್ಲಿ ಆರ್ಯವೀರ್ ಕಾಣಿಸಿಕೊಂಡಿದ್ದಾರೆ. ಆದ್ರೆ, ಒಬ್ಬರಲ್ಲ ಇಬ್ಬರು ಆರ್ಯವೀರ್.

publive-image

ಸೀಸನ್​​-2 ದೆಹಲಿ ಪ್ರೀಮಿಯರ್ ಲೀಗ್​ನ ಹರಾಜು ಪ್ರಕ್ರಿಯೆಗೆ ಕೌಂಟ್​ಡೌನ್ ಶುರುವಾಗಿದೆ. ಇದೇ ಜುಲೈ 5ಕ್ಕೆ ಹರಾಜು ಪ್ರಕ್ರಿಯೆ ನಡೆಯಲಿದೆ. ಈ ಹರಾಜಿನ ಕಣದಲ್ಲಿ ದಿಗ್ಗಜ ವಿರಾಟ್​ ಕೊಹ್ಲಿಯ ಅಣ್ಣನ ಮಗ ಆರ್ಯವೀರ್ ಕೊಹ್ಲಿ, ವೀರೇಂದ್ರ ಸೆಹ್ವಾಗ್​ ಪುತ್ರರಾದ ಆರ್ಯವೀರ್ ಸೆಹ್ವಾಗ್, ವೇದಾಂತ್ ಸೆಹ್ವಾಗ್ ಇದ್ದಾರೆ. ಇದು ಸಹಜವಾಗೇ ಕ್ರಿಕೆಟ್ ಅಭಿಮಾನಿಗಳ ಕುತೂಹಲ ಹೆಚ್ಚಿಸಿದೆ. ಯಾರು ಎಷ್ಟು ಮೊತ್ತಕ್ಕೆ ಸೇಲ್ ಆಗ್ತಾರೆ ಅನ್ನೋ ಲೆಕ್ಕಾಚಾರಗಳು ನಡೀತಿವೆ.

ಆರ್ಯವೀರ್ ಕೊಹ್ಲಿ ಹಿನ್ನಲೆ ಏನು..?

  • ವಿರಾಟ್​ ಕೊಹ್ಲಿ ಅಣ್ಣ ವಿಕಾಸ್ ಕೊಹ್ಲಿಯ ಮಗ ಆರ್ಯವೀರ್
  • ಲೆಗ್ ಸ್ಪಿನ್ನರ್ ಆಗಿರುವ 15 ವರ್ಷದ ಆರ್ಯವೀರ್ ಕೊಹ್ಲಿ
  • ಕೋಚ್ ರಾಜ್​​ಕುಮಾರ್ ಶರ್ಮಾ ಮಾರ್ಗದರ್ಶನದಲ್ಲಿ ತರಬೇತಿ
  • ದೆಹಲಿ ಅಂಡರ್​​ -16 ತಂಡದ ಪರ ಆಡಿರುವ ಆರ್ಯವೀರ್ ಕೊಹ್ಲಿ
  • DPL ಸಿ ಗ್ರೂಪ್​ ಹರಾಜಿನ ಕಣದಲ್ಲಿ ಆರ್ಯವೀರ್ ಕೊಹ್ಲಿಗೆ ಸ್ಥಾನ
Advertisment

ಇದು ವಿರಾಟ್ ಕೊಹ್ಲಿ ಅಣ್ಣನ ಮಗ ಆರ್ಯವೀರ್ ಕೊಹ್ಲಿಯ ಹಿನ್ನಲೆಯಾಗಿದೆ. ಇನ್ನು, ಡೆಲ್ಲಿ ಡ್ಯಾಶರ್ ವೀರೇಂದ್ರ ಸೆಹ್ವಾಗ್ ಪುತ್ರ ಆರ್ಯವೀರ್ ಕಥೆ ಇಂಟರೆಸ್ಟಿಂಗ್​ ಇದೆ. ಯಾಕಂದ್ರೆ, ಈತ ತಂದೆಯನ್ನೇ ಮೀರಿಸಬಲ್ಲ ಅಗ್ರೆಸ್ಸಿವ್ ಬ್ಯಾಟರ್.

ತಂದೆಗೆ ತಕ್ಕ ಮಗ..!

  •  17 ವರ್ಷದ ಆರ್ಯವೀರ್ ಸೆಹ್ವಾಗ್​ ಬ್ಯಾಟ್ಸ್​ಮನ್
  • ತಂದೆಯಂತೆ ಅಗ್ರೆಸ್ಸಿವ್ ಬ್ಯಾಟಿಂಗ್​ಗೆ ಹೆಸರುವಾಸಿ
  • ದೆಹಲಿ ಪರ ಕೂಚ್ ಬಿಹಾರ್, ವಿನೂ ಮಂಕಡ್​​ನಲ್ಲಿ ಆಟ
  • ಕೂಚ್ ಬಿಹಾರ್​​ನಲ್ಲಿ ಮೇಘಾಲಯ ಎದುರು 297 ರನ್
  • ಡೆಲ್ಲಿ ಅಂಡರ್​-17 & ಅಂಡರ್​​-19 ಟೂರ್ನಿಗಳಲ್ಲಿ ಆಟ
  • ಗ್ರೂಪ್​​-B ಹರಾಜು ಕಣದಲ್ಲಿದ್ದಲ್ಲಿ ಆರ್ಯವೀರ್​ಗೆ ಸ್ಥಾನ

ಇದನ್ನೂ ಓದಿ: 19 ಕೋಟಿ ಹಣ ಗೆದ್ದರೂ ಕೊಟ್ಟಿಲ್ಲ.. ಆನ್‌ಲೈನ್ ಬೆಟ್ಟಿಂಗ್‌ಗೆ ಯುವಕ ಬಲಿ

Advertisment

publive-image

ಆರ್ಯವೀರ್ ಸೆಹ್ವಾಗ್​ ಬ್ಯಾಟಿಂಗ್​ನಲ್ಲಿ ಕಮಾಲ್ ಮಾಡಿದ್ರೆ, ಸೆಹ್ವಾಗ್​ರ ಇನ್ನೊಬ್ಬ ಪುತ್ರ ವೇದಾಂತ್​ ಬೌಲಿಂಗ್​ನಲ್ಲಿ ಶೈನ್ ಆಗಿದ್ದಾರೆ. ಆಫ್​ ಸ್ಪಿನ್ನರ್ ಆಗಿರುವ ವೇದಾಂತ್, ದೆಹಲಿ ಅಂಡರ್ -16 ತಂಡಕ್ಕಾಗಿ ಆಡಿದ್ದಾರೆ. ಪಂಜಾಬ್ ಎದುರು 40 ಓವರ್ ಬೌಲಿಂಗ್ ಮಾಡಿ, 4 ವಿಕೆಟ್ ಬೇಟೆಯಾಡಿ 140 ರನ್ ನೀಡಿದ್ರು. ಇದೀಗ ಹರಾಜಿನ ಕಣದಲ್ಲಿರುವ ಆರ್ಯವೀರ್​​​​​​​​​​​​​​​, ವೇದಾಂತ್​, ಬಿಡ್ಡಿಂಗ್​ನಲ್ಲಿ ಸೇಲ್ ಆಗಿ ಸಾಲಿಡ್ ಆಟವಾಡುವ ಕನಸಿನಲ್ಲಿದ್ದಾರೆ.

ಐಪಿಎಲ್‌ಗೆ ದಾರಿ ಮಾಡಿಕೊಟ್ಟಿದ್ದ ಡಿಪಿಎಲ್ ಸೀಸನ್​-1

ಡಿಪಿಎಲ್‌ನ ಫಸ್ಟ್​ ಸೀಸನ್​​, ಯುವ ಆಟಗಾರರ ಪಾಲಿಗೆ ದೊಡ್ಡ ವೇದಿಕೆಯಾಗಿತ್ತು. ಪ್ರಮುಖವಾಗಿ 10 ಪಂದ್ಯಗಳಿಂದ 608 ರನ್ ಗಳಿಸಿದ್ದ ಪ್ರಿಯಾಂಶ್ ಆರ್ಯ, 14 ವಿಕೆಟ್ ಬೇಟೆಯಾಡಿ ಗಮನ ಸೆಳೆದಿದ್ದ ಎಡಗೈ ಸ್ಪಿನ್ನರ್ ದಿಗ್ವೇಶ್ ರಾಠಿ, ಐಪಿಎಲ್​ ಫ್ರಾಂಚೈಸಿಗಳ ಗಮನ ಸೆಳೆದಿದ್ದರು. ಈ ಸೀಸನ್​ ಐಪಿಎಲ್​ನಲ್ಲಿ ಮಿಂಚು ಹರಿಸಿದ್ರು. ಇದೀಗ ಸ್ವತಃ ವಿರೇಂದ್ರ ಸೆಹ್ವಾಗ್​​, ಬ್ರ್ಯಾಂಡ್ ಅಂಬಾಸಿಡರ್ ಆಗಿರುವ ದೆಹಲಿ ಪ್ರೀಮಿಯರ್​ ಲೀಗ್​ನಲ್ಲಿ ಆರ್ಯವೀರ್ ಸೆಹ್ವಾಗ್​, ವೇದಾಂತ್ ಸೆಹ್ವಾಗ್​​ ಬಿಡ್ಡಿಂಗ್​ ಕಣದಲ್ಲಿದ್ದಾರೆ. ಟ್ಯಾಲೆಂಟ್​ ಇರೋದ್ರಿಂದ ಸೇಲ್​ ಆಗೋದು ಪಕ್ಕಾ. ಆದ್ರೆ, ಎಷ್ಟು ಮೊತ್ತಕ್ಕೆ ಬಿಕರಿಯಾಗ್ತಾರೆ ಅನ್ನೋದು ಸಾಕಷ್ಟು ಕುತೂಹಲ ಹುಟ್ಟಿಸಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment
Advertisment
Advertisment
Advertisment