newsfirstkannada.com

20 ಸಿಕ್ಸರ್ 241 ಜೊತೆಯಾಟ.. ಅನುಜ್ ರಾವತ್ ವಿಧ್ವಂಸಕಾರಿ ಬ್ಯಾಟಿಂಗ್​​.. RCBಗೆ ಬಿಗ್ ಮೆಸೇಜ್..!

Share :

Published September 1, 2024 at 8:51am

Update September 2, 2024 at 8:15am

    ಬಿಸಿಸಿಐಗೆ ದೊಡ್ಡ ಮೆಸೇಜ್ ಕೊಟ್ಟ RCBಯ ಅನುಜ್ ರಾವತ್

    ದೆಹಲಿ ಪ್ರೀಮಿಯರ್ ಲೀಗ್​ನಲ್ಲಿ ಅಭಿಮಾನಿಗಳಿಗೆ ಸಖತ್ ಮನರಂಜನೆ

    66 ಎಸೆತದಲ್ಲಿ 121 ರನ್​ ಚಚ್ಚಿದ ಅನುಜ್ ರಾವತ್

ದೆಹಲಿ ಪ್ರೀಮಿಯರ್ ಲೀಗ್​ನಲ್ಲಿ ಕ್ರಿಕೆಟ್ ಅಭಿಮಾನಿಗಳಿಗೆ ಸಖತ್​ ಎಂಟರ್ಟೈನ್ಮೆಂಟ್ ಸಿಕ್ತಿದೆ. ನಿನ್ನೆ ಈಸ್ಟ್​ ಡೆಲ್ಲಿ ರೈಡರ್ಸ್ ಹಾಗೂ ಓಲ್ಡ್​ ಡೆಲ್ಲಿ (ಪುರಾಣಿ ಡೆಲ್ಲಿ) ನಡುವೆ ರಣ ರೋಚಕ ಪಂದ್ಯ ನಡೆಯಿತು.

ರೈಡರ್ಸ್ ತಂಡದ ಆರಂಭಿಕ ಜೋಡಿ ಅನುಜ್ ರಾವತ್ ಮತ್ತು ಸುಜಲ್ ಸಿಂಗ್ ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಟಾಸ್ ಸೋತು ಬ್ಯಾಟ್ ಮಾಡಿದ್ದ ರೈಡರ್ಸ್​, ಯಾವುದೇ ವಿಕೆಟ್ ನಷ್ಟವಿಲ್ಲದೇ 241 ರನ್​ಗಳಿಸಿತ್ತು. 24 ವರ್ಷದ ಅನುಜ್ ರಾವತ್ 66 ಎಸೆತಗಳಲ್ಲಿ ಅಜೇಯ 121 ರನ್​ಗಳ ಅದ್ಭುತ ಇನ್ನಿಂಗ್ಸ್ ಆಡಿದರು. ಈ ವೇಳೆ ಅನುಜ್ ರಾವತ್ 11 ಸಿಕ್ಸರ್, 6 ಬೌಂಡರಿ ಬಾರಿಸಿದರು.

ಅವರ ಸ್ಟ್ರೈಕ್​ ರೇಟ್​ 183.33 ಆಗಿತ್ತು. ಮತ್ತೊಂದೆಡೆ ಸುಜಲ್ ಸಿಂಗ್ 57 ಎಸೆತದಲ್ಲಿ 108 ರನ್​ಗಳಿಸಿದರು. ಅವರು ಕೂಡ 9 ಸಿಕ್ಸರ್ ಬಾರಿಸಿದರು. ಅವರ ಸ್ಟ್ರೈಕ್ ರೇಟ್ 189.47 ಆಗಿತ್ತು.ಇದಕ್ಕೆ ಪ್ರತ್ಯುತ್ತರವಾಗಿ ಓಲ್ಡ್ ಡೆಲ್ಲಿ, 8 ವಿಕೆಟ್ ಕಳೆದುಕೊಂಡು 215 ರನ್​ಗಳಿಸಿ 26 ರನ್​ಗಳಿಂದ ಸೋಲನ್ನು ಒಪ್ಪಿಕೊಳ್ತು. ಅದರಲ್ಲಿ ವಂಶ್ ಬೇಡಿ ತಂಡದ ಪರ 41 ಎಸೆತದಲ್ಲಿ 96 ರನ್​ಗಳಿಸಿದರು. ನಾಯಕ ಅರ್ಪಿತ್ ರಾಣಾ 26 ರನ್​ಗಳಿಸಿತ್ತು, ಡೆಲ್ಲಿ ರೈಡರ್ಸ್​ ಪರ ಬೌಲಿಂಗ್​ನಲ್ಲಿ ಸ್ಪಿನ್ನರ್ ಹರ್ಷ ತ್ಯಾಗಿ ಮೂರು ವಿಕೆಟ್ ಪಡೆದರು. ಮಯಾಂಕ್ ರಾವತ್, ಭಗವಾನ್ ಸಿಂಗ್ ತಲಾ 2 ವಿಕೆಟ್ ಪಡೆದುಕೊಂಡರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

20 ಸಿಕ್ಸರ್ 241 ಜೊತೆಯಾಟ.. ಅನುಜ್ ರಾವತ್ ವಿಧ್ವಂಸಕಾರಿ ಬ್ಯಾಟಿಂಗ್​​.. RCBಗೆ ಬಿಗ್ ಮೆಸೇಜ್..!

https://newsfirstlive.com/wp-content/uploads/2024/09/ANUJ-RAWAT.jpg

Load More