/newsfirstlive-kannada/media/post_attachments/wp-content/uploads/2024/09/MAYANK-YADAV.jpg)
ದೆಹಲಿ ಪ್ರೀಮಿಯರ್ ಲೀಗ್ (DPL) ಫೈನಲ್ ಪಂದ್ಯವು ರೋಚಕವಾಗಿತ್ತು. ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ಈಸ್ಟ್ ಡೆಲ್ಲಿ ರೈಡರ್ಸ್ ಮೂರು ರನ್ಗಳಿಂದ ಸೌತ್ ಡೆಲ್ಲಿ ಸೂಪರ್ ಸ್ಟಾರ್ಸ್ ತಂಡವನ್ನು ಸೋಲಿಸಿತು. ಮಯಾಂಕ್ ರಾವತ್ ಇನ್ನಿಂಗ್ಸ್ನ ಕೊನೆಯ ಓವರ್ನಲ್ಲಿ 5 ಸಿಕ್ಸರ್ ಬಾರಿಸಿ ತಂಡವನ್ನು ದೊಡ್ಡ ಸ್ಕೋರ್ಗೆ ಕೊಂಡೊಯ್ದು ಗೆಲುವಿನ ಹೀರೋ ಆದರು.
ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ್ದ ರೈಡರ್ಸ್ 5 ವಿಕೆಟ್ ಕಳೆದುಕೊಂಡು 183 ರನ್ಗಳಿಸಿತು. ಮಯಾಂಕ್ ರಾವತ್ ಕೊನೆಯ ಓವರ್ನಲ್ಲಿ ಆಯುಷ್ ಬದೋನಿಗೆ 5 ಸಿಕ್ಸರ್ಗಳನ್ನು (6, 0, 6, 6, 6, 6) ಬಾರಿಸಿದರು. ಈ ಮೂಲಕ ಕೇವಲ 39 ಎಸೆತದಲ್ಲಿ 78 ರನ್ಗಳಿಸಿ ಅಜೇಯ ಇನ್ನಿಂಗ್ಸ್ ಆಡಿದರು.
ಇದನ್ನೂ ಓದಿ:ಪತ್ನಿಯ ಆಸ್ಪತ್ರೆ ಬಿಲ್ ಕಟ್ಟಲು 3 ವರ್ಷದ ಮಗುವನ್ನೇ ಮಾರಿದ ಪತಿ; ಕರುಳು ಹಿಂಡುವ ಕೆಲಸ
ಮಯಾಂಕ್ ಇನ್ನಿಂಗ್ಸ್ನಲ್ಲಿ ಒಟ್ಟು 6 ಸಿಕ್ಸರ್ಗಳನ್ನು ಬಾರಿಸಿದರು. ಇವರಲ್ಲದೇ ಹಾರ್ದಿಕ್ ಶರ್ಮಾ 21, ಹಾಗೂ ನಾಯಕ ಹಿಮ್ಮತ್ ಸಿಂಗ್ 20 ರನ್ಗಳಿಸಿದರು. ದಕ್ಷಿಣ ದೆಹಲಿ ಪರ ಕುಲ್ದೀಪ್ ಯಾದವ್ ಮತ್ತು ರಾಘವ್ ತಲಾ ಎರಡು ವಿಕೆಟ್ ಪಡೆದುಕೊಂಡರು
ಇನ್ನು ಡೈಡರ್ಸ್ ತಂಡದ ಇನ್ನಿಂಗ್ಸ್ನಲ್ಲಿ ಮಯಾಂಕ್ ರಾವತ್ ಆರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ಗೆ ಬಂದರು. ಇನ್ನಿಂಗ್ಸ್ನ ಕೊನೆಯ ಓವರ್ ಅನ್ನು ದಕ್ಷಿಣ ದೆಹಲಿಯ ನಾಯಕ ಆಯುಷ್ ಬದೋನಿ ಎಸೆಯಲು ಬಂದಿದ್ದರು. ಇದರ ಲಾಭ ಪಡೆದ ಮಯಾಂಕ್, 6 ಸಿಕ್ಸರ್ ಬಾರಿಸಿ 30 ರನ್ ಚಚ್ಚಿದರು. ಮಯಾಂಕ್ ಮೊದಲ ಮತ್ತು ಕೊನೆಯ 4 ಎಸೆತಗಳಲ್ಲಿ ಸಿಕ್ಸರ್ ಬಾರಿಸಿದರು.
ಡೈಡರ್ಸ್ ತಂಡವು ದಕ್ಷಿಣ ಡೆಲ್ಲಿಗೆ 184 ರನ್ಗಳ ಗುರಿಯನ್ನು ನೀಡಲಾಗಿತ್ತು. ಇದಕ್ಕೆ ಉತ್ತರವಾಗಿ 9 ವಿಕೆಟ್ ಕಳೆದುಕೊಂಡು 180 ರನ್ಗಳಿಸಿ ಫೈನಲ್ ಪಂದ್ಯದಲ್ಲಿ ಸೋಲನ್ನು ಅನುಭವಿಸಿತು. ತಂಡದ ಪರ ತೇಜಸ್ವಿ ದಹಿಯಾ 42 ಎಸೆತಗಳಲ್ಲಿ 68 ರನ್ ಬಾರಿಸಿದರು. ವಿಷನ್ ಪಾಂಚಾಲ್ 25, ಕುನ್ವರ್ ಬಿಧುರಿ 22 ರನ್ಗಳಿಸಿದರು.
ಇದನ್ನೂ ಓದಿ:ಆಸ್ಟ್ರೇಲಿಯಾ ವಿರುದ್ಧದ ಸರಣಿಗೆ ಆಯ್ಕೆ ಮಾಡದಿದ್ದಕ್ಕೆ ಬೇಸರ; ಸ್ಟಾರ್ ಆಲ್ರೌಂಡರ್ ಕ್ರಿಕೆಟ್ಗೆ ಗುಡ್ಬೈ
Mayank Rawat - remember the name 6️⃣6️⃣6️⃣6️⃣6️⃣#AdaniDPLT20#AdaniDelhiPremierLeagueT20#DilliKiDahaad | @delhi_cricket@JioCinema@Sports18pic.twitter.com/qzWNHwnPjy
— Delhi Premier League T20 (@DelhiPLT20) September 8, 2024
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್