/newsfirstlive-kannada/media/post_attachments/wp-content/uploads/2024/04/DELHI_YOU_TUBE.jpg)
ನವದೆಹಲಿ: ಮಹಿಳಾ ಯೂ ಟ್ಯೂಬರ್​ರೊಬ್ಬರು ಪಿಜಿಯ 2ನೇ ಮಹಡಿಯಿಂದ ಜಂಪ್ ಮಾಡಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ದೆಹಲಿಯ ಮುಖರ್ಜಿನಗರದಲ್ಲಿ ನಡೆದಿದೆ. ಆದರೆ ಇದು ಆತ್ಮಹತ್ಯೆಯೋ, ಕೊಲೆಯೋ ಎಂಬುವುದು ನಿಖರವಾಗಿ ತಿಳಿದು ಬಂದಿಲ್ಲ.
ಯೂಟ್ಯೂಬರ್ ಸ್ವಾತಿ ಗೋದಾರ (29) ಆತ್ಮಹತ್ಯೆ ಮಾಡಿಕೊಂಡ ಮಹಿಳೆ. ಈಕೆಯ ಸಾವಿಗೆ ಕಾರಣ ಏನು ಎಂಬುವುದು ಇನ್ನೂ ತಿಳಿದು ಬಂದಿಲ್ಲ. ಈಕೆ ಮೂಲತಹ ಉತ್ತರಪ್ರದೇಶದ ಮೀರತ್​ ಮೂಲದವರಾಗಿದ್ದು ಕಳೆದ 10 ವರ್ಷದಿಂದ ದೆಹಲಿಯಲ್ಲಿ ವಾಸವಿದ್ದು ಯುಪಿಎಸ್‌ಸಿ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದರು. ಆದರೆ ಆತ್ಮಹತ್ಯೆ ಯಾಕೆ ಮಾಡಿಕೊಂಡಳು ಎಂಬುದಕ್ಕೆ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಹೀಗಾಗಿ ಪ್ರತ್ಯಕ್ಷದರ್ಶಿಗಳು ಮತ್ತು ಆಕೆಯ ಸ್ನೇಹಿತರನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ಆತ್ಮಹತ್ಯೆ ಮಾಡಿಕೊಂಡ ಸ್ವಾತಿ ಪಿಜಿ ರೂಮ್​ನಲ್ಲಿ ಸ್ನೇಹಿತೆ ಪ್ರಿಯಾಮ ಜೊತೆ ಇರುವಾಗ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಇದರಿಂದಾಗಿ ಪೊಲೀಸರು ಪ್ರಿಯಾಮಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಸ್ವಾತಿ 4 ತಿಂಗಳ ಹಿಂದೆ ಪಿಜಿಯಿಂದ ಹೊರ ಬಂದು ರೂಮ್ ಮಾಡಿದ್ದಳು. ಓದು ಎಲ್ಲ ಮುಗಿಸಿದ್ದೇನೆ. ಈಗ ಪೂರ್ಣ ಅವಧಿಯ ಯೂ ಟ್ಯೂಬರ್ ಆಗಿದ್ದೇನೆ ಎಂದು ಮನೆಯ ಮಾಲೀಕರಿಗೆ ಹೇಳಿದ್ದಳು. UPSC ಮತ್ತು SSC ಪರೀಕ್ಷೆಯಲ್ಲಿ ಪಾಸ್ ಆಗದ ಕಾರಣ ಎಕ್ಸಾಂ ಮೇಲೆ ಹೋಪ್ ಕಳೆದುಕೊಂಡಿದ್ದರಿಂದ ಯೂಟ್ಯೂಬ್ ಪ್ರಾರಂಭಿಸಿದ್ದಳು. ಆದರೆ ಈಗ ಆತ್ಮಹತ್ಯೆ ಮಾಡಿಕೊಂಡಿರುವುದು ಹಲವು ಅನುಮಾನಗಳನ್ನ ಉಂಟು ಮಾಡಿದೆ ಎನ್ನಲಾಗಿದೆ.
​
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us