ದೆಹಲಿ ಸುಲ್ತಾನರಿಂದ ಮೊಘಲರು, ಮೊಘಲರಿಂದ ಬ್ರಿಟಿಷರು.. ವಕ್ಫ್ ನಡೆದು ಬಂದ ಹಾದಿ ಹೇಗಿತ್ತು?

author-image
Gopal Kulkarni
Updated On
ದೆಹಲಿ ಸುಲ್ತಾನರಿಂದ ಮೊಘಲರು, ಮೊಘಲರಿಂದ ಬ್ರಿಟಿಷರು.. ವಕ್ಫ್ ನಡೆದು ಬಂದ ಹಾದಿ ಹೇಗಿತ್ತು?
Advertisment
  • ದೆಹಲಿ ಸುಲ್ತಾನರಿಂದ ಬ್ರಿಟಿಷರವರೆಗೆ ವಕ್ಫ್​​ ನಡೆದು ಬಂದ ಹಾದಿ ಹೇಗಿತ್ತು
  • ಸುಲ್ತಾನ, ಮೊಘಲ, ಬ್ರಿಟಿಷರ ಕಾಲದಲ್ಲಿದ್ದ ವಕ್ಫ್​ ಕಾಯಿದೆಯಲ್ಲಿ ಏನಿದ್ದವು?
  • ವಕ್ಫ್​ ಬೋರ್ಡ್ ವಿವಾದಕ್ಕೆ ಈಡಾಗುವಂತ ತಿದ್ದುಪಡಿ ಬಂದಿದ್ದು ಯಾವಾಗ?

ವಕ್ಫ್​ ಬೋರ್ಡ್ ತಿದ್ದುಪಡಿ ಮಸೂದೆ ಕೊನೆಗೂ ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಬಹುಮತ ಪಡೆದು ಕಾನೂನಾಗಿ ಜಾರಿಯಾಗಿದೆ. ವಕ್ಫ್​​ನ ಹಲವು ಕಾನೂನುಗಳಲ್ಲಿ ಮಹತ್ತರ ಬದಲಾವಣೆಗಳನ್ನು ಮಾಡಲಾಗಿದೆ. ಸದ್ಯ ಈಗ ವಕ್ಫ್ ಹಾಗೂ ವಕ್ಫ್​ಬೋರ್ಡ್ ಕಾಯ್ದೆಯ ಬಗ್ಗೆ ಜೋರಾದ ಚರ್ಚೆಗಳು ಮಾಧ್ಯಮಗಳಿಂದ ಹಿಡಿದು, ಸಾಮಾಜಿಕ ಜಾಲತಾಣಗಳಲ್ಲಿಯೂ ಜೋರಾಗಿ ಕೇಳಿ ಬರುತ್ತಿದೆ. ಹಾಗಿದ್ದರೆ ಏನಿದು ವಕ್ಫ್​ ಇದರ ಇತಿಹಾಸ ಶುರುವಾಗುವುದು ಎಲ್ಲಿಂದ. ದೆಹಲಿ ಸುಲ್ತಾನರಿಂದ ಹಿಡಿದು ಮೊಘಲರವರೆಗೂ, ಮೊಘಲರಿಂದ ಹಿಡಿದು ಬ್ರಿಟಿಷ್ ಸಾಮ್ರಾಜ್ಯದವರೆಗೂ ಆಮೇಲೆ ಸ್ವತಂತ್ರ ಭಾರತದವರೆಗೂ ಹೇಗೆ ವಿಕಸನಗೊಂಡು ಬಂದಿದೆ ಎಂಬುದನ್ನು ಸಂಕ್ಷಿಪ್ತವಾಗಿ ಹೇಳುತ್ತೇವೆ.

ಭಾರತದಲ್ಲಿ ವಕ್ಫ್​​ನ ಇತಿಹಾಸ ಸಂಪೂರ್ಣವಾಗಿ ಧಾರ್ಮಿಕ ವಿಚಾರಕ್ಕೆ ಸಂಬಂಧಿಸದ್ದು ಮತ್ತು ಕಾನೂನಾಗಿ ವಿಕಾಸ ಹೊಂದುತ್ತಾ ಬಂದಿರುವಂತಹದು ಮತ್ತು ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿಯ ಕೊಡುಗೆಯಾಗಿ ಬಂದಿರುವಂತದ್ದು. ಇದು ಮೊದಲು ಸೃಷ್ಟಿಯಾಗಿದ್ದು ಇಸ್ಲಾಂ ಸಾಮ್ರಾಜ್ಯ ಭಾರತದಲ್ಲಿ ಆಳ್ವಿಕೆ ಶುರು ಮಾಡಿದ ಕಾಲದಲ್ಲಿ ಅಂದೆ ಹೆಚ್ಚು ಕಡಿಮೆ 12ನೇ ಶತಮಾನದಲ್ಲಿ 13ನೇ ಶತಮಾದನಲ್ಲಿ ದೆಹಲಿಯ ಸುಲ್ತಾನರೊಂದಿಗೆ ಇದರ ಆಗಮನವಾಯ್ತು. ಶತಮಾನಗಳ ಕಾಲದಿಂದಲೂ ವಕ್ಫ್​ ಕೇವಲ ಒಂದು ದತ್ತಿ ವ್ಯವಸ್ಥೆಯಾಗಿ ಕಾರ್ಯನಿರ್ವಹಿಸಲಿಲ್ಲ. ಇದು ಒಂದು ರಾಜಕೀಯ ಗುರುತಾಗಿಯೂ ಅಂದಿನಿಂದ ಕಾರ್ಯನಿರ್ವಹಿಸುತ್ತಾ ಬಂದಿದೆ.

publive-image

ಇತಿಹಾಸಕಾರ ಗ್ರೆಗೊರಿ ಸಿ ಕೊಜ್ಲೋವ್ಸ್ಕಿ ತಮ್ಮ ಮುಸ್ಲಿಂ ಎಂಡೊವ್ಮೆಂಟ್ ಆ್ಯಂಡ್ ಸೊಸೈಟಿಯಲ್ಲಿ ಪುಸ್ತಕದಲ್ಲಿ ಹೇಳುವ ಪ್ರಕಾರ, ಬ್ರಿಟಿಷ್ ಆಡಳಿತದ ಭಾರತದಲ್ಲಿ ವಕ್ಫ್​ನ್ನು ಎರಡು ಉದ್ದೇಶಗಳಿಂದ ಸ್ಥಾಪಿಸಲಾಯ್ತು ಒಂದು ಧಾರ್ಮಿಕ ಉದ್ದೇಶ ಮತ್ತೊಂದು ರಾಜಕೀಯ ಉದ್ದೇಶ ಎಂದು ಹೇಳುತ್ತಾರೆ.

ಭಾರತವನ್ನು ಆಳಿದ ಮುಸ್ಲಿಂ ಸಣ್ಣ ಪುಟ್ಟ ಸಾಮ್ರಾಜ್ಯಗಳು ದತ್ತಿನಿಧಿಗಳನ್ನು ಸ್ಥಾಪಿಸಿದವು. 12ನೇ ಶತಮಾನದ ಮೊಹಮ್ಮದ್ ಇಬ್ನ್​ ಸಾಮ್​, ಘುದ್ರಿ ಸುಲ್ತಾನರಲ್ಲಿ ಒಬ್ಬನಾದ ಈತನ ಕಾಲದಲ್ಲಿ ವಕ್ಫ್​ ಎಂಬುದು ಭಾರತಕ್ಕೆ ಕಾಲಿಟ್ಟಿತ್ತು. ಪ್ರತಿಯೊಂದು ಹಳ್ಳಿಯಿಂದಲೂ ಮುಲ್ತಾನದ ಮಸೀದಿಯನ್ನು ಬೆಂಬಲಿಸಲು ಆದಾಯವನ್ನು ಸೃಷ್ಟಿಸಲಾಯ್ತು ಎಂದು ಕೊಜ್ಲೋವ್ಸ್ಕಿ ಬರೆಯುತ್ತಾರೆ.

ಇದನ್ನೂ ಓದಿ: ವಕ್ಫ್​ ತಿದ್ದುಪಡಿ ಮಸೂದೆ ಸ್ವಾಗತಿಸಿದ ದೇವೇಗೌಡ.. ಬಿಜೆಪಿ ಮೈತ್ರಿ ಪಕ್ಷ ಜೆಡಿಯುನ ಹಿರಿಯ ನಾಯಕ ರಾಜೀನಾಮೆ..!

ದೆಹಲಿ ಸುಲ್ತಾನರ ಕಾಲದಲ್ಲ ವಕ್ಫ್ ಮಂಡಳಿಗೆ ಆಡಳಿತಗಾರರು ಮತ್ತು ಗಣ್ಯರು ದತ್ತಿ ನೀಡುವ ಒಂದು ಕೇಂದ್ರವಾಗಿ ಗುರುತಿಸಿಕೊಂಡಿತು. ಮದರಸಾ, ಖಾನ್​ಕ್ವಾ ಮತ್ತು ಇತರ ಸಾರ್ವಜನಿಕ ಕಲ್ಯಾಣದ ಅಬಿವೃದ್ಧಿಗೆ ವಕ್ಫ್​ ತುಂಬಾ ಪ್ರಮುಖ ಪಾತ್ರವನ್ನು ನಿಭಾಯಿಸಿತು.

ಇನ್ನು ಡಾ, ಅಮಿರ್ ಅಫಕ್ ಫೈಜಿ ಅವರು ಹೇಳುವ ಪ್ರಕಾರ ದೆಹಲಿ ಸುಲ್ತಾನರ ಆಡಳಿತಾವಧಿಯಲ್ಲಿ ಈ ವಕ್ಫ್ ಅರಳಿಕೊಂಡಿತು. ಇದರ ಜೊತೆಗೆ ಅನೇಕ ವಕ್ಫ್​ಗಳು ಸೃಷ್ಟಿಯಾದವು. ಮಸೀದಿ, ಮಿನರ್​ ಮದರಸಾ, ಸ್ಮಶಾನಗಳ ನಿರ್ಮಾಣ ಮತ್ತು ಅಭಿವೃದ್ಧಿ ಹೀಗೆ ಅನೇಕ ಉದ್ದೇಶಗಳಿಗಾಗಿ ವಕ್ಫ್​​​ಗೆ ಬರುವ ದಾನವನ್ನು ಬಳಸಿಕೊಳ್ಳಲಾಗುತ್ತಿತ್ತು ಎಂದು ಹೇಳಿದ್ದಾರೆ.

publive-image

ಇನ್ನು 16ನೇ ಶತಮಾನದಲ್ಲಿ ಆರಂಭಗೊಂಡ ಮೊಘಲರ ಆಳ್ವಿಕೆಯಲ್ಲಿ ಶಜಹಾನ್ ಅನೇಕ ದತ್ತಿದಾನ ಪೀಠಗಳನ್ನು ಸೃಷ್ಟಿಸಿದನು 1640ರಲ್ಲಿ ತಾಜ್​ ಮಹಲ್ ನಿರ್ಮಾಣದ ವೇಳೆ. ಇದರ ಖರ್ಚು ವೆಚ್ಚಗಳನ್ನು ತೂಗುವಲ್ಲಿ ವಕ್ಫ್​ ಹಲವು ರೀತಿಯಲ್ಲಿ ಹಣಕಾಸಿನ ಮೂಲವಾಗಿ ಪಾತ್ರ ನಿಭಾಯಿಸಿತು.ಕೊಜ್ಲೋವ್ಸ್ಕಿ ಹೇಳುವ ಪ್ರಕಾರ ವಕ್ಫ್​ನ ನಿಧಿಯಿಂದ ಹಲವು ಸ್ಮಾರಕಗಳು, ಸಮಾಧಿಗಳು, ಮಿನಾರ್​ಗಳು ನಿರ್ಮಾಣಕ್ಕೆ ಹಾಗೂ ಅಭಿವೃದ್ಧಿಗೆ ಹಣವನ್ನು ಬಳಸಲಾಯ್ತು. ಇನ್ನು ಅಕ್ಬರ್ ಮತ್ತು ಜಹಾಂಗೀರ್ ಕಾಲದಲ್ಲಿಯೂ ಕೂಡ ವಕ್ಫ್ ರಾಜಕೀಯವಾಗಿ ಹಾಗೂ ಧಾರ್ಮಿಕವಾಗಿ ಹಲವು ರೀತಿಯಾಗಿ ಹಣಕಾಸು ಮೂಲವಾಗಿ ಪ್ರಧಾನ ಪಾತ್ರವಹಿಸಿತು. ಇನ್ನು ಇತಿಹಾಸದ ಪುಟಗಳನ್ನು ತೆರೆದು ನೋಡಿದಾಗ ಅಂದು ವಕ್ಫ್​​ನಲ್ಲಿ ಸಂಗ್ರಹವಾಗಿತ್ತಿದ್ದ ನಿಧಿ ಮತ್ತು ಭೂಮಿಗಳು ಕೇವಲ ಮುಸ್ಲಿಂರ ಅಭಿವೃದ್ಧಿಗೆ ಮಾತ್ರವಲ್ಲ ಮುಸ್ಲಿಂಮೇತರ ಅಭಿವೃದ್ಧಿಗಾಗಿಯೂ ಹಣ ಉಪಯೋಗಿಸಲಾಗುತ್ತಿತ್ತು ಎಂದು ಹೇಳಲಾಗುತ್ತದೆ.

publive-image

ಇನ್ನು ಬ್ರಿಟಿಷ್ ಆಡಳತದ ಕಾಲಕ್ಕೆ ವಕ್ಫ್​ ಹಲವು ರೀತಿಯಲ್ಲಿ ಬದಲಾವಣೆ ಪಡದುಕೊಂಡಿತು. ಹೊಸ ನಿಯಮಗಳನ್ನು ಅಳವಡಿಸಿ ಅದನ್ನು ಕಾನೂನು ಎಂದು ಘೋಷಿಸಲಾಯ್ತು. 1923ರ ವಕ್ಫ್ ಆ್ಯಕ್ಟ್​ನ ಪ್ರಕಾರ ವಕ್ಫ್​ನ ಆಸ್ತಿಯ ರಜಿಸ್ಟ್ರೇಷನ್ ಹಾಗೂ ಮೇಲ್ವಿಚಾರಣೆಯನ್ನು ಕಡ್ಡಾಯ ಮಾಡಿ ಹೊಸ ರೂಲ್ಸ್​ಗಳನ್ನು ಅಳವಡಿಸಿ ಹೊಸ ರೂಪದಲ್ಲಿ ಪರಿಚಯಿಸಿದರು. ಕಾನೂನು ಬದಲಾವಣೆಯ ಜೊತೆಗೆ ವಕ್ಫ್​ನ ನಿರ್ವಹಣೆಯ ವಿಚಾರದಲ್ಲಿಯೂ ಕೂಡ ಅನೇಕ ಬದಲಾವಣೆಗಳನ್ನು ಮಾಡಲಾಯ್ತು.

ಇದನ್ನೂ ಓದಿ:ಭಾರತದಲ್ಲಿ 9.40 ಲಕ್ಷ ಎಕರೆ! ಪಾಕಿಸ್ತಾನದಲ್ಲಿ ವಕ್ಫ್​ ಬೋರ್ಡ್​ ಅಧೀನದಲ್ಲಿರುವ ಭೂಮಿ ಎಷ್ಟು?

ಬ್ರಿಟಿಷ್ ಕಾಲದಲ್ಲಿಯೂ ಕೂಡ ವಕ್ಫ್​ ಭಾರತದ ಸಾಮಾಜಿಕ-ಆರ್ಥಿಕ ಕ್ಷೇತ್ರಗಳಿಗೆ ಹೊಸ ರೂಪ ನೀಡುವಲ್ಲಿ ಹಲವು ರೀತಿಯಲ್ಲಿ ಪ್ರಮುಖ ಪಾತ್ರವಹಿಸಿದೆ. ಆದರೆ ಸ್ವಾತಂತ್ರ್ಯಾ ನಂತರ ವಕ್ಫ್​ಗೆ ಸರ್ವಾಧಿಕಾರದ ರೀತಿಯಲ್ಲಿ ಸ್ವಾತಂತ್ರ್ಯ ನೀಡಲಾಯ್ತು. ಒಂದು ಬಾರಿ ವಕ್ಫ್​ ಆಸ್ತಿ ಅಂತ ಘೋಷಣೆಯಾದರೆ ಕೊನೆವರೆಗೂ ವಕ್ಫ್​ ಆಸ್ತಿ ಅನ್ನುವ ಮಟ್ಟಕ್ಕೆ ಅದರಲ್ಲಿ ಬದಲಾವಣೆಗಳನ್ನು ತರಲಾಯಿತು. ಹಲವು ಬಾರಿ ಹಲವು ರೀತಿಯಲ್ಲಿ ವಕ್ಫ್​ ಬೋರ್ಡ್​​ ನಿಯಮಗಳನ್ನು ಬದಲಾಯಿಸಿತು.

publive-image

ಸ್ವಾತಂತ್ರ್ಯ ನಂತರ ಭಾರತದಲ್ಲಿ 1964ರಲ್ಲಿ ಸೆಂಟ್ರಲ್ ವಕ್ಫ್​ ಬೋಡ್ಡ್ ಸ್ಥಾಪಿಸಲಾಯ್ತು. ಈ ಮೂಲಕ ಮುಸ್ಲಿಂರ ಆಸ್ತಿಗಳ ರಕ್ಷಣೆಗೆ ಹಾಗೂ ಆ ಬೋರ್ಡ್​ಗೆ ದಾನ ಮಾಡಲು ಅವಕಾಶ ನೀಡಲಾಯ್ತು. ಎಲ್ಲಾ ರಾಜ್ಯಗಳಲ್ಲಿಯೂ ಕೂಡ ವಕ್ಫ್​ ಬೋರ್ಡ್ ನಿರ್ಮಿಸುವ ಮೂಲಕ ವಕ್ಫ್​ ಬೋರ್ಡ್ ಕೇಂದ್ರೀಕರಣಕ್ಕೆ ಹೊಸ ಹಾದಿಯನ್ನು ಕಲ್ಪಿಸಲಾಯ್ತು. ಮುಂದೆ 1995ರಲ್ಲಿ ವಕ್ಫ್​ ಕಾಯಿದೆಯಲ್ಲಿ ಬದಲಾವಣೆ ಮಾಡಲಾಯ್ತು ಮುಂದೆ 2013ರಲ್ಲಿ ಹಲವು ತಿದ್ದುಪಡಿಗಳು ವಕ್ಫ್​ ಬೋರ್ಡ್​ನ್ನು ಮತ್ತಷ್ಟು ಬಲಶಾಲಿಯಾಗುಂತೆ ಮಾಡಿತು

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment