Video- ಭೀಕರ ಗಾಳಿ, ಮಳೆ; ಬೈಕ್​, ಕಾರುಗಳ ಮೇಲೆ ಬಿದ್ದ ಮರಗಳು.. ಜೀವ ಕಳೆದುಕೊಂಡ 5 ಜನ

author-image
Bheemappa
Updated On
Video- ಭೀಕರ ಗಾಳಿ, ಮಳೆ; ಬೈಕ್​, ಕಾರುಗಳ ಮೇಲೆ ಬಿದ್ದ ಮರಗಳು.. ಜೀವ ಕಳೆದುಕೊಂಡ 5 ಜನ
Advertisment
  • ಭೀಕರ ಗಾಳಿಗೆ ಮುಂದೆ ಸಾಗಲು ಹರಸಾಹಸ ಪಟ್ಟ ಬೈಕ್​, ಕಾರುಗಳು
  • ನಗರದ ಸುತ್ತಮುತ್ತ ಬಿದ್ದಿರುವ ಭಾರೀ ಮಳೆಗೆ ಉಸಿರು ಚೆಲ್ಲಿದ 5 ಜನ
  • ಮಗರಗಳು, ವಿದ್ಯುತ್ ಕಂಬಗಳು ಧರೆಗುರುಳಿ ದೊಡ್ಡ ಮಟ್ಟದ ಹಾನಿ

ನವದೆಹಲಿ: ಸಿಲಿಕಾನ್ ಸಿಟಿ ಮಾತ್ರವಲ್ಲ, ರಾಷ್ಟ್ರ ರಾಜಧಾನಿ ದೆಹಲಿಯಲ್ಲೂ ವರುಣಾರ್ಭಟ ಜೋರಾಗಿದೆ. ದೆಹಲಿ ಹಾಗೂ ರಾಷ್ಟ್ರೀಯ ರಾಜಧಾನಿ ಪ್ರದೇಶ (ಎನ್​ಸಿಆರ್​) ದ ಸುತ್ತ ಸುರಿದ ಜೋರಾದ ಆಲಿಕಲ್ಲು ಮಳೆಗೆ ಮರಗಳು, ಕರೆಂಟ್ ಕಂಬಗಳು ಉರುಳಿ ಬಿದ್ದು ಐವರು ಜೀವ ಕಳೆದುಕೊಂಡಿದ್ದಾರೆ. ಜೊತೆಗೆ ಸಾಕಷ್ಟು ಹಾನಿ ಕೂಡ ಸಂಭವಿಸಿದೆ ಎಂದು ಹೇಳಲಾಗುತ್ತಿದೆ.

publive-image

ದೆಹಲಿಯ ಲೋಧಿ ರಸ್ತೆಯ ಬಳಿ ಕರೆಂಟ್ ಕಂಬವೊಂದು ರಿಕ್ಷಾ ಮೇಲೆ ಉರುಳಿ ಬಿದ್ದ ಪರಿಣಾಮ ಓರ್ವ ಪ್ರಾಣ ಬಿಟ್ಟಿದ್ದಾನೆ. ಗೋಕಾಪುರಿ ಬಳಿ ಜೋರು ಆಲಿಕಲ್ಲು ಮಳೆಯಲ್ಲಿ ಮರ ಬಿದ್ದು ಅಝಾರ್ ಎನ್ನುವರು ಬದುಕು ಕಳೆದುಕೊಂಡಿದ್ದಾರೆ. ಹಾಪುರ್​ ಚುಂಗಿ ಬಳಿ ಬೈಕ್​ ಮೇಲೆ ಮರ ಬಿದ್ದ ಪರಿಣಾಮ ಸವಾರ ಇನ್ನಿಲ್ಲವಾಗಿದ್ದಾನೆ. ಇನ್ನಿಬ್ಬರು ಎನ್​​ಸಿಆರ್ ಪ್ರದೇಶದಲ್ಲಿ ಜೀವ ಕಳೆದುಕೊಂಡಿದ್ದಾರೆ. ಇನ್ನುಳಿದಂತೆ 11 ಜನರು ಗಾಯಗೊಂಡಿದ್ದಾರೆ ಎಂದು ಹೇಳಲಾಗಿದೆ.

publive-image

ದೆಹಲಿಯಲ್ಲಿ ನಿನ್ನೆ ಮಧ್ಯಹ್ನಾದವರೆಗೆ ಶೇಕಡಾ 50.2 ಡಿಗ್ರಿ ಸೆಲ್ಸಿಯಸ್​ ಬಿಸಿ ವಾತಾವರಣ ಇತ್ತು. ಆದರೆ ಇದ್ದಕ್ಕಿದ್ದಾಗೆ ಜೋರಾದ ಆಲಿಕಲ್ಲು ಮಳೆ ಜೊತೆಗೆ 79 ಕಿಲೋ ಮೀಟರ್ ವೇಗದಲ್ಲಿ ಬೀಸಿದ ಗಾಳಿಯಿಂದ ದೆಹಲಿ ಜನ ಅಕ್ಷರಶಃ ನಲುಗಿ ಹೋಗಿದ್ದಾರೆ. ಗಾಳಿ ಬೀಸುವ ವೇಗಕ್ಕೆ ಜನರು ರಸ್ತೆ ಬದಿಯಲ್ಲಿ ಅಡಗಿಕೊಂಡರೇ, ಕೆಲವರು ಕಂಬಗಳನ್ನು ಹಿಡಿದುಕೊಂಡು ನಿಂತಿರುವುದು ಕಂಡು ಬಂದಿದೆ.

ಇದನ್ನೂ ಓದಿ:ರಾಯಲ್ ಚಾಲೆಂಜರ್ಸ್​ ಮುಂದೆ 5 ಚಾಲೆಂಜ್​ಗಳು.. RCB ಟಾರ್ಗೆಟ್ ಏನು ಗೊತ್ತಾ?

publive-image

ಇದರಿಂದ ದೆಹಲಿ ನಗರದಲ್ಲಿ ಇಬ್ಬರು ಸಾವನ್ನಪ್ಪಿದ್ದು ಎನ್​ಸಿಆರ್​ನಲ್ಲಿ ಮೂವರು ಜೀವ ಬಿಟ್ಟಿರುವ ಬಗ್ಗೆ ವರದಿಯಾಗಿದೆ. ಇದ್ದಕ್ಕಿದ್ದಾಗ ಆಲಿಕಲ್ಲು ಮಳೆ ಜೊತೆಗೆ ಗಾಳಿಯು ಬೀಸಿದ್ದರಿಂದ ಸಾಕಷ್ಟು ಹಾನಿಯಾಗಿದೆ. ವಾಹನಗಳ ಮೇಲೆ ಮರಗಳು ಉರುಳಿ ಬಿದ್ದಿವೆ. ಕರೆಂಟ್ ಕಂಬಗಳು ಧರೆಗುರುಳಿದ್ದು ವಿದ್ಯುತ್ ಸಂಪರ್ಕ ಕಡಿತವಾಗಿದೆ. ಟೋಲ್ ಬಳಿ ಇದ್ದ ಬೋರ್ಡ್​ವೊಂದು ಬಿದ್ದಿದೆ. ವೇಗದ ಗಾಳಿಗೆ ವಾಹನಗಳು ಮುಂದೆ ಹೋಗಲು ಹರಸಾಹಸ ಪಟ್ಟಿವೆ. ಹವಾಮಾನದಲ್ಲಿ ಹಠಾತ್ ಬದಲಾವಣೆಯಿಂದ ಅರೇಬಿಯನ್ ಸಮುದ್ರ ಮತ್ತು ಬಂಗಾಳ ಕೊಲ್ಲಿಯಿಂದ ಹವಾಮಾನವು ಪ್ರಕ್ಷುಬ್ಧವಾಗಿದೆ ಎಂದು ಭಾರತದ ಹವಾಮಾನ ಇಲಾಖೆ (ಐಎಂಡಿ) ಹೇಳಿದೆ.


">May 21, 2025


">May 21, 2025

ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment