ಸಿಗರೇಟ್ ಕೊಟ್ಟಿಲ್ಲವೆಂದು ಹಲ್ಲೆ.. ಚಾಕು ಇರಿದು ಇಬ್ಬರು ಯುವಕರ ಕೊಂದ ಪಾಪಿಗಳು

author-image
Bheemappa
Updated On
ಸಿಗರೇಟ್ ಕೊಟ್ಟಿಲ್ಲವೆಂದು ಹಲ್ಲೆ.. ಚಾಕು ಇರಿದು ಇಬ್ಬರು ಯುವಕರ ಕೊಂದ ಪಾಪಿಗಳು
Advertisment
  • ಮೊದಲು ಯುವಕನ ಮೇಲೆ ಹಲ್ಲೆ ಮಾಡಿ ಚಾಕುವಿನಿಂದ ಇರಿತ
  • ಓರ್ವ ಸ್ಥಳದಲ್ಲೇ ಮೃತಪಟ್ಟರೇ ಇನ್ನೊಬ್ಬ ಆಸ್ಪತ್ರೆಯಲ್ಲಿ ಸಾವು
  • ಸಂಬಂಧಿಯ ಆರತಕ್ಷತೆಗೆ ಬಂದ ಯುವಕರು ಮಸಣ ಸೇರಿದರು

ನವದೆಹಲಿ: ಸಿಗರೇಟ್​ ಸೇದಲು ಕೊಟ್ಟಿಲ್ಲ ಎಂದು ಇಬ್ಬರು ಯುವಕರ ಮೇಲೆ ಹಲ್ಲೆ ಮಾಡಿ ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ತಡರಾತ್ರಿ ದೆಹಲಿಯ ಭಾಲ್ಸವಾ ಡೈರಿ ಬಳಿ ನಡೆದಿದೆ.

ಭಾಲ್ಸವಾ ಡೈರಿ ನಿವಾಸಿಗಳಾದ ಸಮೀರ್ ಮತ್ತು ಫರ್ದೀನ್ ಮೃತ ದುರ್ದೈವಿಗಳು. ಆರೋಪಿಗಳಾದ ಅಬ್ದುಲ್ ಸಮ್ಮಿ (19), ವಿಕಾಸ್ (20) ಮತ್ತು ಅರ್ಶ್ಲಾನ್ (20)ನನ್ನ ಪೊಲೀಸರು ಅರೆಸ್ಟ್ ಮಾಡಿದ್ದು ವಿಚಾರಣೆ ಕೈಗೊಂಡಿದ್ದಾರೆ. ಓರ್ವ ಯುವಕ ಸ್ಥಳದಲ್ಲೇ ಮೃತಪಟ್ಟರೇ ಇನ್ನೊಬ್ಬ ಯುವಕ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ.

ಇದನ್ನೂ ಓದಿ:ರಾಡ್‌ನಿಂದ ‘ಕೈ’ ಕಾರ್ಯಕರ್ತರ ಮೇಲೆ ಹಲ್ಲೆ ಆರೋಪ.. ವೋಟಿಂಗ್ ಮುಗೀತಿದ್ದಂತೆ ಹಾಸನ ಜಿಲ್ಲೆಯಲ್ಲಿ ಏನಾಯಿತು?

ಸಂಬಂಧಿಯೊಬ್ಬರ ಆರತಕ್ಷತೆಗೆಂದು ಫರ್ದೀನ್ ಮತ್ತು ಸಮೀರ್ ಆಗಮಿಸಿದ್ರು. ಈ ವೇಳೆ ತಡರಾತ್ರಿ ಸಿಗರೇಟ್ ಸೇದಲೆಂದು ಅಂಗಡಿಯೊಂದರ ಬಳಿ ಬಂದಿದ್ದಾರೆ. ಆಗ ಅಲ್ಲಿದ್ದ ಮೂವರು ಯುವಕರು ಸಿಗರೇಟ್ ಕೇಳಿದ್ದಾರೆ. ಅದಕ್ಕೆ ಇವರು ಇಲ್ಲವೆಂದು ಹೇಳಿದ್ದಾರೆ. ಇಷ್ಟಕ್ಕೆ ಇವರ ನಡುವೆ ಗಲಾಟೆ ಶುರವಾಗಿದೆ. ಈ ವೇಳೆ ಆರೋಪಿಗಳು ಚಾಕುವಿನಿಂದ ಇಬ್ಬರಿಗೆ ಇರಿದು ಕೊಲೆ ಮಾಡಿದ್ದಾರೆ. ಈ ಸಂಬಂಧ ಭಾಲ್ಸವಾ ಡೈರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದ್ದು ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿ ತನಿಖೆ ಕೈಗೊಂಡಿದ್ದಾರೆ ಎಂದು ತಿಳಿದು ಬಂದಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment