/newsfirstlive-kannada/media/post_attachments/wp-content/uploads/2025/06/DELHI.jpg)
ದೇಶಕ್ಕೆ ಮುಂಗಾರಿನ ತುಂತುರು ಪರಿಚಯವಾಗುತ್ತಿದ್ದರೆ, ದೆಹಲಿಗೆ ಮಾತ್ರ ರಣರಣ ಬಿಸಿಲ ಬೇಗೆ ಬೆಂಬಿಡದೇ ಕಾಡ್ತಿದೆ. ರಾಷ್ಟ್ರ ರಾಜಧಾನಿ ದೆಹಲಿಗೆ ಐಎಂಡಿ ಯಿಂದ ಉಷ್ಣ ಅಲೆಯ ರೆಡ್ ಆಲರ್ಟ್ ಕೊಡಲಾಗಿದೆ.
ಬುಧವಾರದ ಒಂದೇ ದಿನದಲ್ಲಿ ದೆಹಲಿಯ ಕೆಲವು ಭಾಗಗಳಲ್ಲಿ 51.9 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದ್ದು, ಇನ್ನೂ ಕೆಲವು ಭಾಗಗಳಲ್ಲಿ ಮಧ್ಯಾಹ್ನ 2 ಗಂಟೆ ಸುಮಾರಿಗೆ 50.8 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿ ಬೆವರಿಳಿಸಿದೆ.
ಇದನ್ನೂ ಓದಿ: ‘ಮೇಡೇ, ಮೇಡೇ, ಮೇಡೇ’ ಎಂದು ಕೂಗಿದ ಪೈಲಟ್.. ಮಾರಣಾಂತಿಕ ‘ಎಮೆರ್ಜೆನ್ಸಿ ಕರೆ’ಯ ಅರ್ಥವೇನು..?
ಧೂಳು ದುಮ್ಮಾನಗಳೇ ಇರುವ ದೇಶ ರಾಜಧಾನಿಯಲ್ಲಿ ಬಿಸಿನ ಝಳ ಸಹ ಝಳಪಳಿಸಿದೆ. ಇದೇ ಕಾರಣಕ್ಕೆ ಗುರುವಾರ ದೆಹಲಿಗೆ ಭಾರತೀಯ ಹವಾಮಾನ ಇಲಾಖೆ ಉಷ್ಣ ಅಲೆಯ ರೆಡ್ ಆಲರ್ಟ್ ಘೋಷಣೆ ಮಾಡಿದೆ. ಹೀಗೆ ನಾಳೆಯವರೆಗೂ ಹೀಟ್ ವೇವ್ ಆಲರ್ಟ್ ಇರಲಿದ್ದು, ಎಚ್ಚರಿಕೆ ಗಂಟೆ ಬಾರಿಸಲಾಗಿದೆ.
ಅತ್ತ ದೆಹಲಿಯ ಹೃದಯ ಭಾಗದ ಸಪ್ಧರ್ ಜಂಗ್ನಲ್ಲಿ 43.3 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗುತ್ತಿದ್ದರೆ ಇತ್ತ ಎಸಿ, ಫ್ಯಾನ್, ಕೂಲರ್ ಗಳು ಇಲ್ಲದೇ ಜನ ಮನೆ ಒಳಗೆ ಇರೋಕೆ ಒದ್ದಾಡುವಂತಾಗಿದೆ. ಆದರೂ ದೆಹಲಿ, ಉತ್ತರ ಭಾರತದಲ್ಲಿ ಏರ್ ಕಂಡೀಷನ್, ಫ್ಯಾನ್, ಕೂಲರ್ಗಳ ಬಳಕೆ ಅನಿವಾರ್ಯವಲ್ಲ. ಪರ್ಯಾಯವೇ ಇಲ್ಲದಂತಾಗಿದೆ. ಸದ್ಯಕ್ಕೆ ಅಲ್ಲಿ ಮಧ್ಯಾಹ್ನದ ವೇಳೆಯಲ್ಲಿ, ಯಾರೂ ಕೂಡ ಮನೆಯಿಂದ ಹೊರಗೆ ಬರೋ ಧೈರ್ಯವೇ ಮಾಡ್ತಿಲ್ಲ. ಒಟ್ಟಿನಲ್ಲಿ ಆ ಭಾಗದಲ್ಲಿ ಉಷ್ಣಾಂಶ ಹೆಚ್ಚಾದಷ್ಚು ಹ್ಯೂಮಿಡಿಟಿ ಅಂದ್ರೆ ಮಳೆಯ ಆರ್ದ್ರತೆ ಕೂಡ ಹೆಚ್ಚಾಗುತ್ತೆ ಅನ್ನೋ ಆತಂಕ ಇದೆ.
ಇದನ್ನೂ ಓದಿ: ಭಾರತವನ್ನ ಬೆಚ್ಚಿಬೀಳಿಸಿದ 10 ಘೋರ ವಿಮಾನ ದುರಂತಗಳು.. ಒಂದಕ್ಕಿಂತ ಒಂದು ಕರಾಳ ಅಪಘಾತಗಳು..
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ