ಏನಾದ್ರೂ ಆಗ್ಲಿ.. ಜೀವನೋತ್ಸಾಹ ಹೀಗೆ ಇರಲಿ; ಈ ಜೋಡಿ ಖುಷಿಯ ವಿಡಿಯೋ ಒಮ್ಮೆ ನೋಡಿ!

author-image
admin
Updated On
ಏನಾದ್ರೂ ಆಗ್ಲಿ.. ಜೀವನೋತ್ಸಾಹ ಹೀಗೆ ಇರಲಿ; ಈ ಜೋಡಿ ಖುಷಿಯ ವಿಡಿಯೋ ಒಮ್ಮೆ ನೋಡಿ!
Advertisment
  • ಈ ವಿಡಿಯೋ ನೋಡಿದವರಿಗೆ ಜೀವನೋತ್ಸಾಹ ಬೂಸ್ಟ್ ಆಗುತ್ತೆ!
  • ಪತ್ನಿ ಜೊತೆ ಒಂದೆರಡು ಸ್ಟೆಪ್ಸ್ ಹಾಕಿ ಎಂಜಾಯ್ ಮಾಡಿದ ಪತಿ
  • ಜೀವನದಲ್ಲಿ ಸಿಗೋ ಇಂಥಾ ಚಿಕ್ಕ ಚಿಕ್ಕ ಕ್ಷಣಗಳನ್ನ ಅನುಭವಿಸಲೇಬೇಕು

ಇವತ್ತಿನ ಕಾಲದಲ್ಲಿ ಜನರಿಗೆ ನೂರೆಂಟು ಟೆನ್ಷನ್​​.. ಟೆನ್ಷನ್. ಸದಾ ಕಾಲ ಇಂತಾ ಟೆನ್ಷನ್​ಗಳಲ್ಲೇ ಕಾಲ ಕಳೆಯೋರಿಗೆ ಈ ವಿಡಿಯೋ ಸ್ವಲ್ಪ ಜೀವನೋತ್ಸಾಹ ಬೂಸ್ಟ್ ಮಾಡ್ಬಹುದು. ಲೈಫ್​ನಲ್ಲಿ ಏನಾದ್ರೂ ಆಗ್ಲಿ ಜೀವನೋತ್ಸಾಹ ಅನ್ನೋದು ತುಂಬಾನೇ ಮುಖ್ಯ. ಅದಕ್ಕೆ ಬೆಸ್ಟ್ ಎಕ್ಸಾಂಪಲ್​ ಈ ಸ್ವೀಟ್​ ಸಿಕ್ಸ್‌ಟೀನ್ ಕಪಲ್.

ಮುದ್ದು ಮುದ್ದಾಗಿ ಕುಣಿದ್ರು ಮುದ್ದಾದ ಜೋಡಿ!
ರಾಷ್ಟ ರಾಜಧಾನಿಯ ದೆಹಲಿಯ ಪಾರ್ಕ್ ಒಂದ್ರಲ್ಲಿ ಹುಡುಗರ ಗುಂಪೊಂದು ಹಾಡು ಹಾಡ್ತಾ ಕೂತಿತ್ತು. ಒಂದಿಷ್ಟು ಹುಡುಗ ಹುಡುಗಿ ಹಿಂದಿಯ ಹೋನಾ ತಾ ಪ್ಯಾರ್ ಅನ್ನೋ ಸಾಂಗ್​ ಹಾಡ್ತಿದ್ರು. ಇದೇ ಟೈಮ್​ನಲ್ಲಿ ಹುಡುಗರ ಹಿಂದೆ ಮುದ್ದಾದ ಕ್ಯೂಟ್ ಜೋಡಿ ಒಂದು ಸಾಗ್ತಿತ್ತು.

publive-image

ಈ ಹುಡುಗರ ಹಾಡು ಕೇಳಿದ್ದೆ ತಡ ಅಜ್ಜನಿಗೆ ಡ್ಯಾನ್ಸ್ ಮಾಡ್ಬೇಕಂತ ಅನಿಸಿದೆ. ಹಾಗೆ ಸಾಗ್ತಿದ್ದವರು ತಮ್ಮ ಪತ್ನಿ ಜೊತೆ ಒಂದೆರಡು ಸ್ಟೆಪ್ಸ್ ಹಾಕಿದ್ದಾರೆ. ಪಾರ್ಕ್​ನಲ್ಲೇ ಕೈ ಕೈ ಹಿಡಿದು ಮುದ್ದು ಮುದ್ದಾಗಿ ಕುಣಿದಿದ್ದಾರೆ.

ಇದನ್ನೂ ಓದಿ: ಬರೋಬ್ಬರಿ 300 ಮದುವೆ ಆಫರ್ ​ರಿಜೆಕ್ಟ್.. ವೈಷ್ಣವಿ ಗೌಡ ಕನಸಿನಂತೆಯೇ ಸಿಕ್ಕನಾ ಈ ರಾಜಕುಮಾರ! 

ಇದನ್ನೇ ಅಲ್ವಾ ಜೀವನೋತ್ಸಾಹ ಅಂತ ಅನ್ನೋದು. ಲೈಫ್​ನಲ್ಲಿ ಏನೇ ಬರಲಿ ಏನೇ ಹೋಗಲಿ ಜೀವನದಲ್ಲಿ ಸಿಗೋ ಇಂಥಾ ಚಿಕ್ಕ ಚಿಕ್ಕ ಕ್ಷಣಗಳನ್ನ ಅನುಭವಿಸಲೇಬೇಕು. ಆಗ್ಲೇ ಲೈಫ್​ಗೂ ಒಂದು ಅರ್ಥ.

ಕಷ್ಟ, ಸಮಸ್ಯೆ ಅನ್ನೋದು ಬದುಕಲ್ಲಿ ಮಾಮೂಲಿ. ಅವೆಲ್ಲವನ್ನೂ ಬದಿಗೊತ್ತಿ ಜೀವನದ ಅಮೂಲ್ಯ ಕ್ಷಣ ಅನುಭವಿಸಿದ ಈ ಜೋಡಿ ವಿಡಿಯೋ ಈಗ ಸಿಕ್ಕಾಪಟ್ಟೆ ವೈರಲ್ ಆಗ್ತಿದೆ. ವಿಡಿಯೋ ನೋಡಿದವರೆಲ್ಲಾ ರೀಲ್ಸ್ ನೋಡಿ ಖುಷಿ ವ್ಯಕ್ತಪಡಿಸ್ತಿದ್ದಾರೆ. ಇಂಥಾ ಪ್ರೀತಿ ಈ ಕಾಲದಲ್ಲೂ ನೋಡೋಕೆ ಸಿಗುತ್ತಲಾ ಅಂತ ಕಮೆಂಟ್ ಹಾಕಿ ಬದುಕಿದ್ರೆ ಹಿಂಗ್ ಬದುಕ್ಬೇಕು ಅಂತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment