/newsfirstlive-kannada/media/post_attachments/wp-content/uploads/2025/07/DELHI_WOMAN_AI_PHOTO.jpg)
ಇತ್ತೀಚೆಗೆ ದೇಶದಲ್ಲಿ ಗಂಡಂದಿರನ್ನು ಹೆಂಡತಿಯರೇ ಮುಗಿಸುತ್ತಿರುವ ಕೇಸ್ಗಳು ಹೆಚ್ಚಾಗುತ್ತಿವೆ. ಅನೈತಿಕ ಸಂಬಂಧ, ಪತಿ- ಪತ್ನಿ ಜಗಳ, ವರದಕ್ಷಿಣೆ ಕಿರುಕುಳ, ಕೌಟುಂಬಿಕ ಕಲಹ ಸೇರಿದಂತೆ ಬೇರೆ ಬೇರೆ ಕಾರಣಗಳಿಗಾಗಿ ಗಂಡಂದಿರು ಹೆಂಡತಿಯರ ಜೀವ ತೆಗೆಯಲಾಗಿದೆ. ಇನ್ನೂ ಇದೇ ಕಾರಣಗಳಿಗಾಗಿ ಹೆಂಡತಿಯರು ಗಂಡಂದಿರ ಉಸಿರು ನಿಲ್ಲಿಸಲಾದ ಕೇಸ್ಗಳು ಸಾಕಷ್ಟಿವೆ. ಇವುಗಳ ಮಧ್ಯೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಇತ್ತೀಚೆಗೆ ವಿಚಿತ್ರ ಕಾರಣಕ್ಕಾಗಿ ಗಂಡನನ್ನ ಮುಗಿಸಲಾಗಿದೆ.
ಗಂಡನನ್ನ ಮುಗಿಸಿರುವ ಕಾರಣ ಕೇಳಿ ದೆಹಲಿ ಪೊಲೀಸರೇ ದಂಗಾಗಿ ಹೋಗಿದ್ದಾರೆ. ವಿವಾಹಿತ ಮಹಿಳೆಯೊಬ್ಬಳು ತನ್ನ ಗಂಡನನ್ನು ಮುಗಿಸಿದ್ದಳು. ಆರೋಪಿಯನ್ನು ದೆಹಲಿ ಪೊಲೀಸರು ಬಂಧಿಸಿದ್ದರು. ಇದಕ್ಕೆ ಕಾರಣವೇನೆಂದು ಆರೋಪಿ ಹೆಂಡತಿನ, ಪೊಲೀಸರು ಪ್ರಶ್ನಿಸಿದ್ದರು. ಈ ವೇಳೆ ಆ ವಿವಾಹಿತ ಮಹಿಳೆ, ತನ್ನ ಗಂಡ, ನನ್ನನ್ನು ಲೈಂಗಿಕವಾಗಿ ತೃಪ್ತಿಪಡಿಸಲು ವಿಫಲನಾಗಿದ್ದ. ಹೀಗಾಗಿ ಆತನನ್ನು ಮುಗಿಸಿದೆ ಎಂದು ಮಹಿಳೆ ಹೇಳಿದ್ದಳು. ದೆಹಲಿಯ ನಿಹಾಲ್ ವಿಹಾರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿತ್ತು.
ಸ್ಥಳೀಯ ಆಸ್ಪತ್ರೆಯಿಂದ ಪೊಲೀಸ್ ಠಾಣೆಗೆ ಕಾಲ್ ಬಂದಿತ್ತು. ಮಹಿಳೆಯೊಬ್ಬಳು ತನ್ನ ಗಂಡನನ್ನು ಗಾಯದ ಗುರುತುಗಳೊಂದಿಗೆ ಆಸ್ಪತ್ರೆಗೆ ಕರೆ ತಂದಿದ್ದಾಳೆ ಎಂದು ಆಸ್ಪತ್ರೆಯವರು ಪೊಲೀಸರಿಗೆ ತಿಳಿಸಿದ್ದರು. ಆಸ್ಪತ್ರೆಗೆ ಕರೆತರುವಾಗಲೇ ಗಂಡ ಮೊಹಮ್ಮದ್ ಶಾಹೀದ್ ಜೀವ ಬಿಟ್ಟಿದ್ದಾರೆ ಎಂದು ಪರೀಕ್ಷಿಸಿದ ವೈದ್ಯರು ಹೇಳಿದ್ದರು.
ತಾನೇ ಚಾಕು ಇರಿದುಕೊಂಡ ಎಂದ ಪತ್ನಿ
ಆಸ್ಪತ್ರೆಗೆ ಬಂದ ಪೊಲೀಸರು, ಮೃತ ಪತಿ ಮೊಹಮ್ಮದ್ ಶಾಹೀದ್ ಪತ್ನಿಯನ್ನು ವಿಚಾರಣೆ ನಡೆಸಿದ್ದರು. ಈ ವೇಳೆ ಮಹಿಳೆ, ತನ್ನ ಗಂಡನೇ ತಾನೇ ಇರಿದುಕೊಂಡು ಸಾವನ್ನಪ್ಪಿದ್ದಾನೆ ಎಂದು ಹೇಳಿದ್ದಳು. ಆದರೇ, ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ವ್ಯಕ್ತಿ ತಾನೇ ಚಾಕು ಇರಿದುಕೊಂಡು ಜೀವ ಬಿಟ್ಟಿಲ್ಲ. ಬದಲಿಗೆ ಮುಂಭಾಗದಿಂದ ಬೇರೆಯವರು ನಿರಂತರವಾಗಿ ಚಾಕುವಿನಿಂದ ಇರಿದಿದ್ದಾರೆ ಎಂದು ಶವದ ಮರಣೋತ್ತರ ಪರೀಕ್ಷೆಯ ವರದಿ ಹೇಳಿತ್ತು. ಹೀಗಾಗಿ ಬೇರೆಯವರು ಮೊಹಮ್ಮದ್ ಶಾಹೀದ್ ಜೀವ ತೆಗೆದಿದ್ದಾರೆ ಎಂಬ ತೀರ್ಮಾನಕ್ಕೆ ಬಂದ ಪೊಲೀಸರು ಮರ್ಡರ್ ಕೇಸ್ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದರು.
ಮಹಿಳೆಯ ವಿಚಾರಣೆ ವೇಳೆ ಹಾಗೂ ಪೋರೆನ್ಸಿಕ್ ತನಿಖೆ ವೇಳೆ ಕೆಲವೊಂದು ಅಂಶಗಳು ಪೊಲೀಸರ ಗಮನಕ್ಕೆ ಬಂದವು. ಮಹಿಳೆಯ ಮೊಬೈಲ್ ಪೋನ್ ಹಿಸ್ಟರಿಯಲ್ಲಿ ಚಾಟ್ ಹಿಸ್ಟರಿ ಡೀಲಿಟೀಂಗ್ ಬಗ್ಗೆ ಸರ್ಚ್ ಮಾಡಿರುವುದು ಗಮನಕ್ಕೆ ಬಂತು. ಜೊತೆಗೆ ಅಲ್ಯೂಮಿನಿಯಂ ಸಲ್ಪೋಸ್ ಬಗ್ಗೆಯೂ ಸರ್ಚ್ ಮಾಡಿರುವುದು ಪೊಲೀಸರ ಗಮನಕ್ಕೆ ಬಂತು.
ಇದನ್ನೂ ಓದಿ: ಟೀಮ್ ಇಂಡಿಯಾಕ್ಕೆ ಆಂಗ್ಲರ ನಾಡಲ್ಲಿ ಬಾರ್ಮಿ ಆರ್ಮಿ ಕಾಟ.. ಕೌಂಟರ್ಗೆ ರೆಡಿಯಾದ ಭಾರತ್ ಆರ್ಮಿ!
ಲೈಂಗಿಕವಾಗಿ ತೃಪ್ತಿ ಆಗುತ್ತಿರಲಿಲ್ಲ
ಈ ಸಾಕ್ಷ್ಯವನ್ನು ಮೃತ ಮೊಹಮ್ಮದ್ ಶಾಹೀದ್ ಪತ್ನಿ ಮುಂದಿಟ್ಟು ಪೊಲೀಸರು ಮತ್ತೊಮ್ಮೆ ಮಹಿಳೆಯನ್ನು ವಿಚಾರಣೆ ನಡೆಸಿದ್ದರು. ಈ ವೇಳೆ ಮಹಿಳೆಯು ಕೊಲೆಯನ್ನು ತಾನೇ ಮಾಡಿದ್ದಾಗಿ ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದಳು. ತಾನು ತನ್ನ ಪತಿಯ ಜೊತೆ ಲೈಂಗಿಕವಾಗಿ ತೃಪ್ತಿಯ ಭಾವನೆ ಹೊಂದಿರಲಿಲ್ಲ. ಪತಿಯು ನನ್ನನ್ನು ಲೈಂಗಿಕವಾಗಿ ತೃಪ್ತಿಪಡಿಸಲು ವಿಫಲನಾಗಿದ್ದ. ಹೀಗಾಗಿ ಇದನ್ನು ನಿರ್ಧರಿಸಿದೆ ಎಂದು ಹೇಳಿದ್ದಳು.
ಹೆಂಡತಿಯೇ ಗಂಡನಿಗೆ ಎದೆಗೆ ಮೂರು ಬಾರಿ ಚಾಕುವಿನಿಂದ ಇರಿದಿದ್ದಳು. ಬಳಿಕ ಆಸ್ಪತ್ರೆಗೆ ಕರೆದೊಯ್ದು ಆತ್ಮಹತ್ಯೆಯ ಕಥೆ ಕಟ್ಟಿದ್ದಳು. ಪೊಲೀಸರ ತನಿಖೆಯ ದಿಕ್ಕು ತಪ್ಪಿಸಲು ಯತ್ನಿಸಿದ್ದಳು. ಮಹಿಳೆಯನ್ನು ಬಂಧಿಸಿದ ಪೊಲೀಸರು ದೆಹಲಿಯ ತಿಹಾರ್ ಜೈಲಿಗೆ ಕಳಿಸಿದ್ದಾರೆ. ಕೊಲೆಯ ಸಂಪೂರ್ಣ ತನಿಖೆಯನ್ನು ನಿಹಾಲ್ ವಿಹಾರ್ ಪೊಲೀಸರು ಮುಂದುವರಿಸಿದ್ದಾರೆ. ಕೊಲೆಯ ಹಿಂದಿನ ನಿಖರ ಕಾರಣದ ಬಗ್ಗೆ ಪೊಲೀಸರ ತನಿಖೆ ಮುಂದುವರಿದಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ