ದೆಹಲಿಯ ಕರ್ನಾಟಕ ಭವನದ ನೌಕರ ಆತ್ಮಹತ್ಯೆ.. ಹುಣಸೆ ಮರಕ್ಕೆ ನೇಣುಬಿಗಿದುಕೊಂಡಂತೆ ಪತ್ತೆ

author-image
AS Harshith
Updated On
ದೆಹಲಿಯ ಕರ್ನಾಟಕ ಭವನದ ನೌಕರ ಆತ್ಮಹತ್ಯೆ.. ಹುಣಸೆ ಮರಕ್ಕೆ ನೇಣುಬಿಗಿದುಕೊಂಡಂತೆ ಪತ್ತೆ
Advertisment
  • ದೆಹಲಿಯಿಂದ ಸ್ವಗ್ರಾಮಕ್ಕೆ ಆಗಮಿಸಿದ್ದ ಕರ್ನಾಟಕ ಭವನದ ನೌಕರ
  • ಪತ್ನಿ ಮಕ್ಕಳನ್ನು ಪತ್ನಿಯ ತವರು ಮನೆಗೆ ಬಿಟ್ಟು ಬಂದು ಆತ್ಮಹತ್ಯೆ
  • ತಂದೆ- ತಾಯಿಯನ್ನು ನೋಡಿಕೊಂಡು ಬರುವೆ ಎಂದವ ಹುಣಸೆ ಮರದಲ್ಲಿ ಪತ್ತೆ

ವಿಜಯನಗರ: ದೆಹಲಿಯ ಕರ್ನಾಟಕ ಭವನದ ನೌಕರ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಮಾರುತಿ (35) ಆತ್ಮಹತ್ಯೆಗೆ ಶರಣಾದ ನೌಕರ ಎಂದು ಗುರುತಿಸಲಾಗಿದೆ.

ಸಾವನ್ನಪ್ಪಿದ ಮಾರುತಿ ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಎಂ.ಬಿ‌. ಅಯ್ಯನಹಳ್ಳಿ ಗ್ರಾಮದವರು. ಎರಡ್ಮೂರು ದಿನಗಳ ಹಿಂದೆ ದೆಹಲಿಯಿಂದ ಸ್ವಗ್ರಾಮಕ್ಕೆ ಆಗಮಿಸಿದ್ದರು. ಪತ್ನಿ ಮಕ್ಕಳನ್ನು ಪತ್ನಿಯ ತವರು ಮನೆಗೆ ಬಿಟ್ಟು ತಂದೆ, ತಾಯಿಯನ್ನು ನೋಡಿಕೊಂಡು ಬರುವೆ ಎಂದು ಅಯ್ಯನಹಳ್ಳಿಗೆ ಬಂದಿದ್ದರು.

ಇದನ್ನೂ ಓದಿ: ನಾಯಿಗೆ ಡಿಕ್ಕಿ ಹೊಡೆದಿದ್ದೀರಿ ಎಂದು ಹಲ್ಲೆ.. ಕಣ್ಣಿಗೆ ಖಾರದ ಪುಡಿ ಎರಚಿ ಲಕ್ಷಾಂತರ ರೂಪಾಯಿ ದರೋಡೆ

ಮನೆಗೆ ಬಂದ ಮಾರುತಿ ಕಾನಾಹೊಸಳ್ಳಿ ಹೊರವಲದ ಹುಣಸೆ ಮರಕ್ಕೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ದೆಹಲಿಯ ಕರ್ನಾಟಕ ಭವನದ ಕಿಚನ್ ವಿಭಾಗದಲ್ಲಿ ಮಾರುತಿ ಕೆಲಸ ಮಾಡ್ತಿದ್ದರು.  ಪತ್ನಿ ನೀಡಿದ ದೂರಿನ ಆಧಾರದ ಮೇಲೆ ಕಾನಾಹೊಸಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment