ವರನಿಗೆ ಹೆಲಿಕಾಪ್ಟರ್ ಗಿಫ್ಟ್‌.. 3 ಸಾವಿರ ಅತಿಥಿಗಳಿಗೆ ಕೈ ತುಂಬಾ ಉಡುಗೊರೆ; ಇದು ದೆಹಲಿಯ ದುಬಾರಿ ಮದುವೆ!

author-image
Gopal Kulkarni
Updated On
ವರನಿಗೆ ಹೆಲಿಕಾಪ್ಟರ್ ಗಿಫ್ಟ್‌.. 3 ಸಾವಿರ ಅತಿಥಿಗಳಿಗೆ ಕೈ ತುಂಬಾ ಉಡುಗೊರೆ; ಇದು ದೆಹಲಿಯ ದುಬಾರಿ ಮದುವೆ!
Advertisment
  • ರಾಷ್ಟ್ರ ರಾಜಧಾನಿ ದೆಹಲಿ ಕಂಡ ಅದ್ಧೂರಿ ಮದುವೆಯಿದು
  • ವರನಿಗೆ ಹೆಲಿಕಾಪ್ಟರ್, ಅತಿಥಿಗಳಿಗೆ ಬೆಳ್ಳಿ ಬಿಸ್ಕೆಟ್​ ಗಿಫ್ಟ್​​
  • ಹರಿಯಾಣದಲ್ಲೂ ನಡೆದಿತ್ತು ಇದೇ ಮಾದರಿಯ ಮದುವೆ

ಭಾರತದ ರಾಜಧಾನಿ ದೆಹಲಿ ಹಿಂದೆಂದೂ ಕಾಣದ ಅತ್ಯಂತ ಅದ್ಧೂರಿ ಮದುವೆಗೆ ಒಂದೊಮ್ಮೆ ಸಾಕ್ಷಿಯಾಗಿತ್ತು ಆ ಒಂದು ಮದುವೆ ಇಂದಿಗೂ ಕೂಡ ಚರ್ಚೆಯನ್ನು ಹುಟ್ಟು ಹಾಕುತ್ತಿದೆ. 2011ರಲ್ಲಿ ಬೆಂಗಳೂರಿನಲ್ಲಿ ಮಾಜಿ ಸಚಿವ ಹಾಗೂ ಉದ್ಯಮಿ ಗಾಲಿ ಜನಾರ್ದನ್ ರೆಡ್ಡಿ ಪುತ್ರಿಯ ಮದುವೆಯೂ ಕೂಡ ಇದೇ ರೀತಿ ಸದ್ದು ಮಾಡಿತ್ತು. ಅಂತಹುದೇ ಅದ್ದೂರಿ ಮದುವೆಗೆ ರಾಷ್ಟ್ರ ರಾಜಧಾನಿಯೂ ಸಾಕ್ಷಿಯಾಗಿತ್ತು. ಯಾವುದು ಆ ಮದುವೆ. ವಧು, ವರ ಯಾರು ಎಂಬುದರ ಬಗ್ಗೆ ಡಿಟೇಲ್ಸ್ ಇಲ್ಲಿದೆ

ಕಾಂಗ್ರೆಸ್ ನಾಯಕ ಕನ್ವರ್ ಸಿಂಗ್​ ತನ್ವರ್​ ಅವರ ಮಗ ಲಲೀತ್, ಜೌನಾಪುರಿಯ ಮಾಜಿ ಎಂಎಲ್​ಎ ಸುಖಬೀರ್ ಸಿಂಗ್ ಅವರ ಪುತ್ರಿ ಯೋಗಿತಾ ಮಾರ್ಚ್ 2011ರಲ್ಲಿ ದೆಹಲಿಯಲ್ಲಿ ಹಸೆಮಣೆ ಏರಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಆ ಒಂದು ಮದುವೆ ಇಂದಿಗೂ ಕೂಡ ನೆನಪಿಡುವಂತಹ, ಜನರು ನೆನಪಿಟ್ಟಿರುವಂತಹ ಮದುವೆ. ಅದರಲ್ಲೂ ಈ ಅದ್ಧೂರಿ ಮದುವೆಯಲ್ಲಿ ನೀಡಲಾದ ದುಬಾರಿ ಉಡುಗೊರೆಗಳು ಭಾರೀ ಸದ್ದು ಮಾಡಿದ್ದವು.

ಇದನ್ನೂ ಓದಿ:ಚೀನಾ ನಂಬರ್​ ಒನ್.. ವಿಶ್ವದ ಎರಡನೇ ಮಹಾಗೋಡೆ ಯಾವ ದೇಶದಲ್ಲಿದೆ? ಇದು ಬಹುತೇಕರಿಗೆ ಗೊತ್ತಿಲ್ಲದ ವಿಷಯ

ಈ ಒಂದು ಮದುವೆಯನ್ನು ಅಕ್ಷರಶಃ ಒಂದು ಹಬ್ಬದಂತೆ ಆಚರಿಸಲಾಗಿತ್ತು. ಅದರಲ್ಲೂ ಹುಡುಗಿಯ ಮನೆಯವರು ಹುಡುಗನಿಗೆ ನೀಡಿದ ಬೆಲ್​ 429 ಹೆಲಿಕಾಪ್ಟರ್ ಗಿಫ್ಟ್​ ದೇಶದ ಎಲ್ಲ ಜನರ ಗಮನವನ್ನು ಸೆಳೆದಿತ್ತು. ಆ ಕಾಲದಲ್ಲಿ ಅದು 5 ಜನ ಕುಳಿತಕೊಂಡು ಪ್ರಯಾಣಿಸಬಹುದಾದ ಫೈವ್ ಸೀಟರ್ ಕಾಪ್ಟರ್​. ಅದರ ಬೆಲೆ ಬರೋಬ್ಬರಿ 33 ಕೋಟಿ ರೂಪಾಯಿಯಿತ್ತು. ಆದರೆ ಈ ಬಗ್ಗೆ ಮಾತನಾಡಿದ್ದ ಕನ್ವರ್ ಹೆಲಿಕಾಪ್ಟರ್​ ಉಡುಗೊರೆಯನ್ನೆನೋ ನೀಡಲಾಗಿದೆ. ಆದರೆ ಇದೊಂದು ಸರಳವಾದ ವಿವಾಹ ಎಂದಿದ್ದು ಎಲ್ಲರನ್ನೂ ಅಚ್ಚರಿಗೆ ತಳ್ಳಿತ್ತು.

publive-image

ತನ್ವರ್ ಕುಟುಂಬ ಈ ಒಂದು ಮದುವೆಯನ್ನು ದೆಹಲಿ ಅಸೋಲಾ ಫಾರ್ಮ್​ಹೌಸ್​​ನಲ್ಲಿ ಏರ್ಪಡಿಸಿತ್ತು. ಸುಮಾರು 2 ರಿಂದ 3 ಸಾವಿರ ಜನರು ಮದುವಗೆ ಸಾಕ್ಷಿಯಾಗಿದ್ದರು. ಬಂದ ಅತಿಥಿಗಳಿಗೆಲ್ಲಾ 30 ಗ್ರಾಂನ ಬೆಳ್ಳಿ ಬಿಸ್ಕೇಟ್, ಒಂದು ಜೊತೆ ಸಫಾರಿ ಸೂಟ್​ ಮತ್ತು 2100 ರೂಪಾಯಿ ನಗದನ್ನು ಉಡುಗೊರೆಯಾಗಿ ನೀಡಲಾಗಿತ್ತು. ಮದುಮಗನ ಟಿಕಾ ಕಾರ್ಯಕ್ರಮಕ್ಕೆ ನೀಡಲಾದ ಉಡುಗೊರೆಯ ಮೊತ್ತವೇ ಸುಮಾರು 2.5 ಕೋಟಿ ರೂಪಾಯಿಯಷ್ಟು ಆಗಿತ್ತು ಎಂದರೆ ನೀವು ನಂಬಲೇಬೇಕು.

ಇದನ್ನೂ ಓದಿ: ಇದು ಭಾರತದ ಬಡವರ ರಾಜಧಾನಿ ಎಕ್ಸ್​ಪ್ರೆಸ್.. AC ಕೋಚ್​​ನಲ್ಲಿ ಪ್ರಯಾಣಿಕರಿಗೆ ಪ್ರತಿ ಕಿ.ಮೀಗೆ 68 ಪೈಸೆ ಖರ್ಚು

ಇನ್ನು ಇದೇ ಮಾದರಿಯ ಇನ್ನೊಂದು ಅದ್ಧೂರಿ ಮದುವೆ ಹರಿಯಾಣದ ಜೌನ್​ಪುರದಲ್ಲಿ ಗ್ರಾಮದಲ್ಲಿ ನಡೆದಿತ್ತು. ಮಾಧ್ಯಮಗಳ ವರದಿ ಪ್ರಕಾರ ಈ ಮದುವೆಗೆ ಸುಮಾರು 15 ಸಾವಿರ ಜನ ಅತಿಥಿಗಳು ಬಂದಿದ್ದರಂತೆ. ಬಂದ ಎಲ್ಲ ಅತಿಥಿಗಳಿಗೂ 11 ಸಾವಿರ ರೂಪಾಯಿ ಉಡುಗೊರೆಯನ್ನು ನೀಡಲಾಗಿತ್ತಂತೆ. ಈ ಮದುವೆಯಲ್ಲಿ 100ಕ್ಕೂ ಹೆಚ್ಚು ವಿವಿಧ ಭಕ್ಷ್ಯಗಳ ತಯಾರಿಸಲಾದ್ದು. ಅಡುಗೆ ಸರ್ವ್​ ಮಾಡಲು ಸುಮಾರು 1 ಸಾವಿರ ಜನ ಕೆಲಸಗಾರರು ಬಂದಿದ್ದರಂತೆ. ಇಷ್ಟು ಮಾತ್ರವಲ್ಲ ಈ ಮದುವೆ ಸುಮಾರು 12 ಎಲ್​ಸಿಡಿ ಸ್ಕ್ರೀನ್​ಗಳಲ್ಲಿ ಅತಿಥಿಗಳಿಗೆ ತೋರಿಸಲಾಗಿತ್ತಂತೆ.

publive-image

ಇನ್ನು ದೆಹಲಿಯಲ್ಲಿ ನಡೆದ ಮತ್ತೊಂದು ಅದ್ಧೂರಿ ಮದುವೆ ಅಂದ್ರೆ ಅದು ಬಾಲಿವುಡ್ ನಟಿ ನೇಹಾ ದುಪಿಯಾರದ್ದು  ಖಾಸಗಿ ಹೋಟೆಲ್​ನಲ್ಲಿ . ದೆಹಲಿಯ ಲಕ್ಸುರಿ ಹೋಟೆಲ್​ನಲ್ಲಿ ಹಮ್ಮಿಕೊಂಡಿದ್ದ ಮದುವೆಗೆ ಅಂದಿ ಪ್ರಧಾನಿ ದಿವಂಗತ ಮನಮಹೋನ್​ ಸಿಂಗ್ ಅವರು ಕೂಡ ಭೇಟಿ ನೀಡಿದ್ದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment