/newsfirstlive-kannada/media/post_attachments/wp-content/uploads/2025/02/DELHI-CM.jpg)
ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಬಹುದೊಡ್ಡ ವಿಜಯಗಳಿಸಿದ ಬಿಜೆಪಿ, ಆಮ್ ಆದ್ಮಿ ಪಕ್ಷದ ದಶಕದ ಆಡಳಿತಕ್ಕೆ ಇತಿಶ್ರೀ ಹಾಡಿತು. ಸದ್ಯ ಬಿಜೆಪಿ ಹೈಕಮಾಂಡ್ ಸಿಎಂ ಆಯ್ಕೆಯ ವಿಚಾರದಲ್ಲಿ ಮಗ್ನವಾಗಿದೆ. ಚುನಾವಣೆ ಆರಂಭದಿಂದ ಹಿಡಿದು ಇಲ್ಲಿಯವರೆಗೂ ಬಿಜೆಪಿ ತನ್ನ ಸಿಎಂ ಅಭ್ಯರ್ಥಿ ಯಾರು ಎಂದು ಘೋಷಿಸಿಲ್ಲ. ಪ್ರತಿ ರಾಜ್ಯದಲ್ಲಿಯೂ ಇದೇ ಮಾದರಿಯ ಚುನಾವಣೆಯನ್ನು ಮಾಡಿಕೊಂಡು ಬಂದಿದೆ ಬಿಜೆಪಿ.
ಚುನಾವಣೆ ಫಲಿತಾಂಶದ ಬಳಿಕ ಸಿಎಂ ವಿಚಾರದಲ್ಲಿ ಅತಿ ಹೆಚ್ಚು ಹೆಸರು ಕೇಳಿ ಬಂದಿದ್ದು ಪರ್ವೇಶ್ ವರ್ಮಾ ಅವರದ್ದು ನವದೆಹಲಿ ಕ್ಷೇತ್ರದಲ್ಲಿ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನೇ ಮಣ್ಣು ಮುಕ್ಕಿಸಿದ ಪರ್ವೇಶ್ ವರ್ಮಾ ಅವರನ್ನ ದೈತ್ಯ ವಿಜಯಿ ಎಂದೇ ಬಣ್ಣಿಸಲಾಗಿತ್ತು. ಅದರಲ್ಲೂ ಪರ್ವೇಶ್ ವರ್ಮಾ ಮಾಜಿ ಸಿಎಂ ಅವರ ಪುತ್ರ ಎಂಬ ಕಾರಣಕ್ಕೂ ಅವರ ಹೆಸರು ಮುನ್ನೆಲೆಗೆ ಬಂದಿತ್ತು.ಇವರ ಜೊತೆಗೆ ಅನೇಕ ಹೆಸರುಗಳು ಕೇಳಿ ಬಂದಿದ್ದವು. ಮಾಲವಿಯಾ ನಗರದ ಶಾಸಕ ಸತೀಶ್ ಉಪಾಧ್ಯಾಯ, ಪಕ್ಷದ ಹಿರಿಯ ನಾಯಕ ವಿಜಯೇಂದರ ಗುಪ್ತಾ. ಹೊಸದಾಗಿ ಶಾಸಕಾರಿಗ ಆಯ್ಕೆಯಾಗಿದ್ದ ಆಶೀಶಸ್ ಸೂಡ್, ಉತ್ತಮ ನಗರದ ಸಾಸಕ ಪವನ್ ಶರ್ಮ ಹೀಗೆ ಸಾಲು ಸಾಲು ಹೆಸರುಗಳು ಕೇಳಿ ಬಂದಿದ್ದವು. ಆದ್ರೆ ಈಗ ಬಿಜೆಪಿ ಅಚ್ಚರಿಯ ಹಾಗೂ ಆಶ್ಚರ್ಯಗರ ಅಭ್ಯರ್ಥಿಯನ್ನು ಸಿಎಂ ಪಟ್ಟಕ್ಕೆ ತಂದು ಕೂರಿಸುವ ಸಾಧ್ಯತೆಗಳು ಇವೆ ಎನ್ನಲಾಗುತ್ತಿದೆ.
ಇದನ್ನೂ ಓದಿ:300 ಕಿ.ಮೀ ಟ್ರಾಫಿಕ್ ಜಾಮ್; ವಿಶ್ವದಾಖಲೆ; ಮಹಾಕುಂಭಮೇಳಕ್ಕೆ ಕಾರಲ್ಲಿ ಹೋದ್ರೆ ನಿಮ್ಮ ಕಥೆ ಮುಗೀತು!
ಬಿಜೆಪಿ ಮೂಲಗಳು ಹೇಳುವ ಪ್ರಕಾರ ದೆಹಲಿ ಸಿಎಂ ಸ್ಥಾನಕ್ಕೆ ಮಹಿಳಾ ಎಂಎಲ್ಎಯನ್ನು ತಂದು ಕೂರಿಸುವ ಪ್ಲ್ಯಾನ್ ಇದೆಯಂತೆ. ದೆಹಲಿಯಲ್ಲಿ ಗೆದ್ದ 48 ಶಾಸಕರಲ್ಲಿ ನಾಲ್ವರು ಮಹಿಳೆಯರು ಇದ್ದಾರೆ. ನೀಲಮ್ ಪೆಹಲ್ವಾನ್, ರೇಖಾ ಗುಪ್ತಾ, ಪೂನಮ್ ಶರ್ಮಾ ಹಾಗೂ ಶೀಖಾ ರಾಯ್. ನೀಲಮ್ ಪಹಲ್ವಾನ್ ಮೊದಲಬಾರಿ ನಜಫಘರ್ ಕ್ಷೇತ್ರದಿಂದ ಶಾಸಕಿಯಾಗಿ ಆಯ್ಕೆಯಾಗಿದ್ದಾರೆ. ಇವರು ದೆಹಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿ ಹಾಗೂ ಯುನಿಯನ್ ಪ್ರೆಸಿಡೆಂಟ್ ಕೂಡ ಆಗಿದ್ದವರು. ಪೂನಮ್ ಶರ್ಮಾ ವಾಜಿಪುರ್ದಲ್ಲಿ ಗೆದ್ದರೆ. ಶೀಖಾ ರಾಯ್ ಆಪ್ನ ಮಾಜಿ ಸಚಿವ ಸೌರಭ್ ಜೈನ್ರನ್ನು ಸೋಲಿಸಿ ಗೆದ್ದು ಬಂದವರು.
ಇದನ್ನೂ ಓದಿ: 73 ಬಾರಿ ಚಾಕು ಇರಿತ.. ಖ್ಯಾತ ಉದ್ಯಮಿ ಜನಾರ್ಧನ್ ರಾವ್ ದುರಂತ ಅಂತ್ಯ; ಕಾರಣ ಕೇಳಿದ್ರೆ ಶಾಕ್ ಆಗ್ತೀರಾ!
ಮತ್ತೊಂದು ಮೂಲಗಳು ಹೇಳುವ ಪ್ರಕಾರ ಬಿಜೆಪಿ ಈ ಬಾರಿ ಜಾತಿ ಸಮೀಕರಣದ ಮೇಲೆ ಸಿಎಂ ಅಭ್ಯರ್ಥಿಯನ್ನು ಆಯ್ಕೆ ಮಾಡಲಿದೆ ಎಂದು ಹೇಳಲಾಗುತ್ತಿದೆ. ಎಸ್ಸಿ ಸಮಾಜದ ಒಟ್ಟು ನಾಲ್ಕು ಜನ ಶಾಸಕರು ಬಿಜೆಪಿಯಲ್ಲಿ್ದಾರೆ ರಾಜುಕುಮಾರ್ ಚೌಹಾಣ್, ರವಿಕಾಂತ್ ಉಜೈನ್, ರವಿಂದರ್ ಇಂದ್ರಜಾ ಸಿಂಗದ್ ಹಾಗೂ ಕೈಲಾಶ್ ಗಂಗ್ವಾಲಾ. ಇವರಲ್ಲಿ ಯಾರಿಗಾದರೂ ಸಿಎಂ ಸ್ಥಾನ ಒಲಿಯವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
27 ವರ್ಷಗಳ ಬಳಿಕ ಬಿಜೆಪಿ ದೆಹಲಿಯಲ್ಲಿ ದೊಡ್ಡ ಬಹುಮತದೊಂದಿಗೆ ಗೆದ್ದು ಬೀಗಿದೆ. ಸದ್ಯ ಪ್ರಧಾನಿ ನರೇಂದ್ರ ಮೋದಿ ಪ್ಯಾರಿಸ್ ಹಾಗೂ ಯುಎಸ್ ಪ್ರವಾಸದಲ್ಲಿದ್ದಾರೆ. ಅವರು ವಾಪಸ್ ಭಾರತಕ್ಕೆ ಬಂದ ಮೇಲೆ ಪ್ರಧಾನಿ ಮೋದಿ, ಅಮಿತ್ ಶಾ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಸೇರಿ ಸಿಎಂ ಆಯ್ಕೆಯ ಕಾರ್ಯವನ್ನು ಮುಗಿಸಲಿದ್ದಾರೆ ಎಂದು ಹೇಳಲಾಗುತ್ತಿದ್ದು. ಒಟ್ಟಿನಲ್ಲಿ ಅಚ್ಚರಿಯ ಅಭ್ಯರ್ಥಿ ದೆಹಲಿಯ ಸಿಎಂ ಸ್ಥಾನವನ್ನು ಅಲಂಕರಿಸುವ ಸಾಧ್ಯತೆ ದಟ್ಟವಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ