ವಿಷವಾದ ಗಾಳಿ, ದೆಹಲಿ ಜನರಿಗೆ ಪ್ರಾಣವಾಯು ಕಂಟಕ.. AQI ಮಟ್ಟ ಯಾವ ಪ್ರಮಾಣ ತಲುಪಿದೆ?

author-image
Bheemappa
Updated On
ವಿಷವಾದ ಗಾಳಿ, ದೆಹಲಿ ಜನರಿಗೆ ಪ್ರಾಣವಾಯು ಕಂಟಕ.. AQI ಮಟ್ಟ ಯಾವ ಪ್ರಮಾಣ ತಲುಪಿದೆ?
Advertisment
  • ದಟ್ಟ ಹೊಗೆ, ಮಧ್ಯಾಹ್ನ ಕಳೆದರೂ ಮಂಜು ಕರಗುವುದೇ ಇಲ್ಲ
  • ದೆಹಲಿಯ 14 ಪ್ರದೇಶದಲ್ಲಿ AQI450ಕ್ಕಿಂತ ಹೆಚ್ಚು ಮಾಲಿನ್ಯ
  • ವಾಹನಗಳ ಓಡಾಟದಿಂದಲೇ ಅತಿ ಹೆಚ್ಚಿನ ವಾಯುಮಾಲಿನ್ಯ

ಮಿತಿ ಮೀರಿದ ವಾಹನಗಳು, ಕೈಗಾರಿಕೆಗಳು, ಕೃಷಿ ತ್ಯಾಜ್ಯಗಳನ್ನು ಸುಡುವುದರ ಜೊತೆ ಮೈಕೊರೆಯುವ ಚಳಿ ದೆಹಲಿ ಜನರಿಗೆ ಕಂಟಕ ತಂದಿವೆ. ದೆಹಲಿಯ ವಾಯುಗುಣಮಟ್ಟ ಹೆಚ್ಚು ಕಳಪೆ ಮಟ್ಟಕ್ಕೆ ಕುಸಿದಿದೆ. ಸತತ 4 ದಿನಗಳ ಕಾಲ AQI (Air Quality Index) ಮಟ್ಟ 400 ದಾಟಿದ್ದು ಜನರ ಜೀವ ಹಿಂಡುತ್ತಿದೆ.

ಪತರುಗುಟ್ಟುವ ಚಳಿಗಾಲ.. ಅಂಕೆ ಮೀರಿದ ವಾಹನಗಳ ಓಡಾಟ. ಎಲ್ಲೆಲ್ಲೂ ಆವರಿಸಿರುವ ದಟ್ಟ ಹೊಗೆ. ಮಧ್ಯಾಹ್ನ ಕಳೆದರೂ ಮಂಜು ಕರಗುವುದಿಲ್ಲ. ರಾಷ್ಟ್ರರಾಜಧಾನಿ ನವದೆಹಲಿಯಲ್ಲಿ ಕೆಟ್ಟ ಗಾಳಿ ಜನರ ಬದುಕನ್ನ ಸಂಕಷ್ಟಕ್ಕೆ ತಳ್ಳುತ್ತಿದೆ. ವಿಷಮ ವಾತಾವರಣದಲ್ಲೇ ನಗರವಾಸಿಗಳು ಬದುಕು ಸಾಗಿಸುವಂತೆ ಆಗಿದೆ.

publive-image

400ರ ಗಡಿ ದಾಟಿದ ವಾಯುಗುಣಮಟ್ಟ.. ಆತಂಕ!

ನವದೆಹಲಿಯಲ್ಲಿ ತಿಂಗಳ ಆರಂಭದಲ್ಲಿ ಕೊಂಚ ತಗ್ಗಿದ್ದ ಮಾಲಿನ್ಯ ವರ್ಷಾಂತ್ಯದ ವೇಳೆಗೆ ಮಿತಿ ಮೀರಿದೆ. ಗಾಳಿಯ ಗುಣಮಟ್ಟ ತೀವ್ರ ಹದಗೆಟ್ಟಿದ್ದು ಸತತ 4ನೇ ದಿನ ವಾಯು ಸೂಚ್ಯಂಕ 400ರ ಗಡಿ ದಾಟಿದೆ. ನವದೆಹಲಿ ದೇಶದಲ್ಲೇ ಅತಿ ಹೆಚ್ಚು ಮಾಲಿನ್ಯ ನಗರಿ ಎಂಬ ಅಪಖ್ಯಾತಿಗೆ ಒಳಗಾಗಿದೆ. ನಿನ್ನೆ AQI 429 ದಾಖಲಾಗಿದ್ದು ಇಷ್ಟು ಕಳಪೆ ಸ್ಥಿತಿ ದೇಶದ ಬೇರೆ ಯಾವುದೇ ನಗರಗಳಲ್ಲಿ ದಾಖಲಾಗಿಲ್ಲ. ದೆಹಲಿಯ 36 ಮಾಲಿನ್ಯ ಮೇಲ್ವಿಚಾರಣಾ ಕೇಂದ್ರಗಳ ಪೈಕಿ 14 ಸ್ಥಳಗಳಲ್ಲಿ ವಾಯು ಸೂಚ್ಯಂಕ 450ಕ್ಕಿಂತ ಹೆಚ್ಚು AQI ಅಪಾಯಕಾರಿಯಾಗಿ ದಾಖಲಾಗಿದೆ.

ಪ್ರಾಣವಾಯು ಕಂಟಕ!

  • 3 ವರ್ಷದಲ್ಲಿ ಮೊದಲ ಬಾರಿಗೆ ಡಿಸೆಂಬರ್​​ನಲ್ಲಿ ಹೆಚ್ಚಿದ ಮಾಲಿನ್ಯ
  • ಸತತ 4 ದಿನಗಳವರೆಗೆ 400ಕ್ಕಿಂತ ಹೆಚ್ಚಿರುವ ವಾಯುಗುಣಮಟ್ಟ
  • 2021ರ ಡಿಸೆಂಬರ್​​ನಲ್ಲಿ 7 ದಿನಗಳ ಕಾಲ 400 ಇದ್ದ ಸೂಚ್ಯಂಕ
  • 2022ರಲ್ಲಿ ಎರಡು ದಿನ, 2023 ರಲ್ಲಿ 3 ದಿನಗಳು ಹೆಚ್ಚಿದ್ದ AQI
  • ವಾಹನಗಳ ಓಡಾಟದಿಂದಲೇ ಅತಿ ಹೆಚ್ಚಿನ ವಾಯುಮಾಲಿನ್ಯ
  • ದಿಲ್ಲಿಯಲ್ಲಿ ವಾಹನಗಳಿಂದಲೇ ಶೇ. 12.12ರಷ್ಟು ವಾಯುಮಾಲಿನ್ಯ
  • ಕಾರ್ಖಾನೆಗಳ ಹೊಗೆಯಿಂದ ಶೇ.6.15ರಷ್ಟು ಮಾಲಿನ್ಯ ದಾಖಲು

ಇದನ್ನೂ ಓದಿ: ಮಧ್ಯರಾತ್ರಿ ಗ್ರಾಮಗಳಿಗೆ ನುಗ್ಗಿದ ಗ್ಯಾಂಗ್.. 9 ಮನೆಯಲ್ಲಿ ಲಕ್ಷ ಲಕ್ಷ ಹಣ ಕಳ್ಳತನ; ಬೆಚ್ಚಿ ಬಿದ್ದ ಗ್ರಾಮಸ್ಥರು

publive-image

ಇನ್ನು ದೆಹಲಿಯ ಎನ್​​ಸಿಆರ್ ಪ್ರದೇಶಗಳಾದ ಗುರುಗ್ರಾಮ, ನೊಯ್ಡಾ ಹಾಗೂ ಗಾಜಿಯಾಬಾದ್‌ನಲ್ಲಿ ವಾಯುಗುಣಮಟ್ಟ ತೀರಾ ಕಳಪೆ ಹಂತ ತಲುಪಿದೆ ಗ್ರೇಟರ್ ನೋಯ್ಡಾ ಹಾಗೂ ಫರಿದಾಬಾದ್‌ನಲ್ಲಿ ಪರಿಸ್ಥಿತಿ ಶೋಚನೀಯವಾಗಿದೆ. ದಿಲ್ಲಿಯಲ್ಲಿ ಬೆಳಗ್ಗೆ ಹೊತ್ತು ಹೆಚ್ಚಿನ ಹೊಗೆ ಹಾಗೂ ಮಂಜು ಕಂಡುಬರುತ್ತಿದೆ. ದಿನವಿಡೀ ಸೂರ್ಯನ ಬೆಳಕು ಮಂಜಿನಲ್ಲಿ ಮರೆಯಾಗಿದ್ದು ಕಂಡು ಬಂದಿದೆ. ಶ್ರೀಮಂತ ಹಾಗೂ ವೈವಿಧ್ಯಮಯ ಸಂಸ್ಕೃತಿಗೆ ಹೆಸರಾಗಿರುವ ನವದೆಹಲಿ ಜನರನ್ನು ಅಪಾಯಕಾರಿ ಮಟ್ಟದ ವಾಯುಮಾಲಿನ್ಯ ಉಸಿರು ಕಟ್ಟಿಸುತ್ತಿರೋದು ದುರ್ದೈವದ ಸಂಗತಿ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment