newsfirstkannada.com

ಧರ್ಮಸ್ಥಳದಿಂದ ಅಯೋಧ್ಯೆಗೆ ಪೂಜಾ ಪರಿಕರಗಳ ರವಾನೆ.. ರಾಮಮಂದಿರ ಉದ್ಘಾಟನೆಗೆ ತೆರಳಲಿರುವ ವೀರೇಂದ್ರ ಹೆಗ್ಗಡೆ

Share :

Published January 18, 2024 at 7:25am

  ಜನವರಿ 22ರಂದು ಶ್ರೀರಾಮನ ಪ್ರಾಣಪ್ರತಿಷ್ಠಾಪನೆ

  ಧರ್ಮಸ್ಥಳದಿಂದ ಬೆಳ್ಳಿ ಪೂಜಾ ಪರಿಕರಗಳ ರವಾನೆ

  ಮಂದಿರ ಉದ್ಘಾಟನೆಗೆ ವೀರೇಂದ್ರ ಹೆಗ್ಗಡೆ ಅವರಿಗೆ ಆಹ್ವಾನ

ಅಯೋಧ್ಯೆಯಲ್ಲಿ ಜನವರಿ 22ರಂದು ಶ್ರೀರಾಮನ ಪ್ರಾಣಪ್ರತಿಷ್ಠಾಪನೆ ನಡೆಯಲಿದೆ. ಈ ಹಿನ್ನೆಲೆ ದಕ್ಷಿಣ ಕನ್ನಡ ಜಿಲ್ಲೆಯ ಶ್ರೀಕ್ಷೇತ್ರ ಧರ್ಮಸ್ಥಳದಿಂದ ಬೆಳ್ಳಿ ಪೂಜಾ ಪರಿಕರಗಳನ್ನು ವೀರೇಂದ್ರ ಹೆಗ್ಗಡೆ ಅವರು ಪೇಜಾವರ ಶ್ರೀಗಳಿಗೆ ತಲುಪಿಸಿದ್ದಾರೆ.

ಉದ್ಘಾಟನಾ ಸಮಾರಂಭಕ್ಕೆ ವಿವಿಐಪಿ ಅತಿಥಿಯಾಗಿ ವೀರೇಂದ್ರ ಹೆಗ್ಗಡೆ ಅವರಿಗೆ ಆಹ್ವಾನ ನೀಡಲಾಗಿದೆ. ಈ ಕುರಿತಾಗಿ ಪ್ರತಿಕ್ರಿಯೆ ನೀಡಿರುವ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ, ಪ್ರಾಣಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಭಾಗಿಯಾಗುವೆ ಎಂದು ಹೇಳಿದ್ದಾರೆ.

ಬಳಿಕ ಅಯೋಧ್ಯೆಗೆ ಏನಾದರೂ ಸಮರ್ಪಿಸಬೇಕು ಎನ್ನುವ ಆಸೆಯಿತ್ತು. ಹಾಗಾಗಿ ಕ್ಷೇತ್ರದಲ್ಲಿದ್ದ ಅನೇಕ ಪರಿಕರವನ್ನು ಅಯೋಧ್ಯೆಗೆ ರವಾನಿಸಿದ್ದೇವೆ. ದಕ್ಷಿಣ ಭಾರತ ಶೈಲಿಯ ಪೂಜೆಗೆ ಅನುಕೂಲವಾಗುವ ನಿಟ್ಟಿನಲ್ಲಿ ಅಯೋಧ್ಯೆಗೆ ಹಲವು ಪೂಜಾ ಪರಿಕರ ನೀಡಿದ್ದೇವೆ. ಆರತಿ ತಟ್ಟೆಗಳು, ನೆಲಾರತಿ, ನಾಗಾರತಿ, ಶಂಖ, ಚಾಮರ, ಘಂಟೆ, ಕುಂಬಗಳನ್ನು ಅಯೋಧ್ಯೆಗೆ ರವಾನಿಸಿದ್ದೇವೆ ಎಂದು ತಿಳಿಸಿದ್ದಾರೆ. ಶ್ರೀರಾಮನ ಪ್ರಾಣಪ್ರತಿಷ್ಠಾಪನೆ ಕಾರ್ಯಕ್ರಮಕ್ಕೆ ಆಹ್ವಾನ ಬಂದಿದೆ. ಕಾರ್ಯಕ್ರಮದಲ್ಲಿ ಭಾಗಿಯಾಗಲು ಅಯೋಧ್ಯೆಗೆ ತೆರಳುತ್ತೇನೆ ಎಂದಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಧರ್ಮಸ್ಥಳದಿಂದ ಅಯೋಧ್ಯೆಗೆ ಪೂಜಾ ಪರಿಕರಗಳ ರವಾನೆ.. ರಾಮಮಂದಿರ ಉದ್ಘಾಟನೆಗೆ ತೆರಳಲಿರುವ ವೀರೇಂದ್ರ ಹೆಗ್ಗಡೆ

https://newsfirstlive.com/wp-content/uploads/2024/01/Dharmatala.jpg

Load More