/newsfirstlive-kannada/media/post_attachments/wp-content/uploads/2025/01/los-angeles-Delta-fish.jpg)
ಅಮೆರಿಕಾ ಚರಿತ್ರೆಯಲ್ಲಿ ಅತಿದೊಡ್ಡ ಅಗ್ನಿ ದುರಂತ ದಾಖಲಾಗಿದೆ. ಲಕ್ಷಾಂತರ ಕೋಟಿ ಆಸ್ತಿಪಾಸ್ತಿ ಸುಟ್ಟು ಬೂದಿ ಆಗಿದೆ. ಹಾಲಿವುಡ್ ನಟ ನಟಿಯರು ಅಕ್ಷರಶಃ ಸಹಾಯಕ್ಕಾಗಿ ಅಂಗಲಾಚುತ್ತಿದ್ದಾರೆ. ವಿಶ್ವದ ಹಿರಿಯಣ್ಣ ಹೀಗೆ ದೇನೇಸಿ ಸ್ಥಿತಿಗೆ ಬರೋದಕ್ಕೆ ಕಾಡ್ಗಿಚ್ಚು ಕಾರಣ. ಅಸಲಿಗೆ ಕಾಡ್ಗಿಚ್ಚಿಗೆ ಕಾರಣ ಅದೊಂದು ಮೀನು ಎನ್ನಲಾಗುತ್ತಿದೆ.
ಡೆಲ್ಟಾ ಸ್ಮೆಲ್ಟ್ ಮೀನು ಮಾಡಿದ್ದೇನು?
ಸ್ಯಾನ್ ಜೋಕ್ವಿನ್.. ಕ್ಯಾಲಿಫೋರ್ನಿಯಾದ ಜೀವನದಿ.. 589 ಕಿ.ಮೀ ಉದ್ದ ಹರಿಯುವ ಉದ್ದನೆಯ ನದಿ. ಇದೇ ನದಿ ಪಾತ್ರದಲ್ಲೇ ವಿಶಿಷ್ಟ ಅನಿಸೋ ಮೀನು ಜೀವಿಸುತ್ತದೆ. ಅದುವೇ ಡೆಲ್ಟಾ ಸ್ಮೆಲ್ ಅನ್ನೋ ಎಟಿಎಂ ಕಾರ್ಡ್ ಗಾತ್ರದ ಮೀನು. ಹೈಫೋಮೆಸಸ್ ಟ್ರಾನ್ಸ್ಪಾಸಿಫಿಕಸ್ ಅನ್ನೋ ವೈಜ್ಞಾನಿಕ ಹೆಸರಿನ ಮೀನಿನ ಸಂತತಿಯೇ ಕ್ಷೀಣವಾಗುತ್ತಿದೆ ಅಂತ ಕ್ಯಾಲಿಫೋರ್ನಿಯನ್ನರು ಇತ್ತೀಚೆಗೆ ಅಭಿಯಾನವನ್ನೇ ಮಾಡಿದ್ರು.. ಹಾಗಾಗಿಯೇ ಫೆಡರಲ್ ಸರ್ಕಾರ ಕ್ಯಾಲಿಫೋರ್ನಿಯಾಕ್ಕೆ ಹೆಚ್ಚುವರಿ ನೀರು ಸರಬರಾಜು ಮಾಡೋದಕ್ಕೆ ಕಡಿವಾಣ ಹಾಕಿತ್ತು. ಇದೇ ತಪ್ಪೇ ಇವತ್ತು ಹಾಲಿವುಡ್ ಸುಟ್ಟು ಬೂದಿ ಆಗುವಂಥಾ ಕಾಡ್ಗಿಚ್ಚು ಸೃಷ್ಟಿಯಾಗೋದಕ್ಕೆ ಕಾರಣ ಅಂತ ಖುದ್ದು ನೂತನ ಅಧ್ಯಕ್ಷರಾಗಿ ಆಯ್ಕೆ ಆಗಿರೋ ಡೋನಾಲ್ಡ್ ಟ್ರಂಪ್ ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ: ಇತಿಹಾಸ ಕಂಡು ಕೇಳರಿಯದ ಭಯಾನಕ ಅಗ್ನಿ ನರ್ತನ, ಸಿಕ್ಕಿದ್ದೆಲ್ಲವೂ ಸುಟ್ಟು ಭಸ್ಮ, 11 ಜನರ ದುರಂತ ಅಂತ್ಯ
ಬಿಸಿ ಸುಂಟರಗಾಳಿ ಕಿಚ್ಚು ಹಚ್ಚಿತ್ತಾ?
ಸ್ಯಾಂಟ ಅನ ಅನ್ನೋದು ಶರದೃತುವಿನಲ್ಲಿ ದಕ್ಷಿಣ ಕ್ಯಾಲಿಫೋರ್ನಿಯಾವನ್ನು ಅಕ್ಷರಶಃ ನಡುಗಿಸೋ ಒಣ ಹಬೆ ಗಾಳಿ.. ಇದೇ ಸ್ಯಾಂಟ ಅನ ಅನ್ನೋ ಒಣ ಹಬೆ ಗಾಳಿಗೆ ಅಮೆರಿಕನ್ನರು ಡೆವಿಲ್ ವಿಂಡ್ಸ್ ಅಂತಲೂ ಕರೀತಾರೆ. ವರ್ಷದಲ್ಲಿ ಕನಿಷ್ಟ 10-25 ಸಲ ಕರಾವಳಿ ಕ್ಯಾಲಿಫೋರ್ನಿಯಾ ಹಾಗೂ ದಕ್ಷಿಣ ಕ್ಯಾಲಿಫೋರ್ನಿಯಾವನ್ನು ಸುಟ್ಟು ಹಾಕೋ ಮಟ್ಟಿಗೆ ಅಬ್ಬರಿಸುತ್ತದೆ. 1957ರಲ್ಲೂ ಇದೇ ಸ್ಯಾಂಟ ಅನ ಅನ್ನೋ ಒಣ ಹಬೆಯ ಬಿಸಿ ಗಾಳಿ 25 ಸಾವಿರ ಎಕರೆ ಕಾಡನ್ನು ಮುಕ್ಕಿ ಕೆಡವಿತ್ತು. ಇದೀಗ ಮತ್ತೊಮ್ಮೆ ಇದೇ ಸ್ಯಾಂಟ ಅನ ಅನ್ನೋ ಬಿಸಿ ಗಾಳಿ ಲಾಸ್ ಏಂಜಲೀಸ್ ಪಾಲಿಗೆ ಭಸ್ಮಾಸುರನೇ ಆಗಿದೆ. ಮೀನು ಕಾಪಾಡೋದಕ್ಕೆ ನೀರು ಸಾಕು ಅಂದಿದ್ರು. ಬಿಸಿ ಸುಂಟರಗಾಳಿ ರಣಕೇಕೆ ಹಾಕಿದ್ದಾಗ ಬೆಂಕಿ ನಂದಿಸೋಕೆ ಕೊನೇ ಪಕ್ಷ ಸ್ಯಾಂಟ ಯೇಂಜ್ ಡ್ಯಾಮ್ನ್ನಾದ್ರೂ ಉಳಿಸಿಕೊಳ್ಳಬೇಕಿತ್ತು. ದುರಾದೃಷ್ಟವಶಾತ್ ಇತ್ತೀಚೆಗೆ ಇದೇ ಡ್ಯಾಮ್ ಅನ್ನೋ ಮುಚ್ಚಲಾಗಿತ್ತು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ