ಕಾಲ್ತುಳಿತಕ್ಕೆ ಸಾಕ್ಷಿಯಾದ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂ ಶಿಫ್ಟ್‌ ಆಗುತ್ತಾ? ಹೊಸ ಜಾಗ ಯಾವುದು?

author-image
admin
ಚಿನ್ನಸ್ವಾಮಿ ಸ್ಟೇಡಿಯಮ್​ಗೆ ಮ್ಯಾಚ್​​ ನೋಡಲು ಬಂದ ಆರ್​​ಸಿಬಿ ಫ್ಯಾನ್ಸ್​ಗೆ ಬಿಗ್​ ಶಾಕ್; ಏನಾಯ್ತು?​​
Advertisment
  • 11 ಆಟಗಾರರನ್ನ ನೋಡೋಕೆ ಬಂದು ಬಲಿಯಾಗಿದ್ದು 11 ಮಂದಿ
  • ಸಿಟಿ ಸೆಂಟರ್ ಒಳಗೆ ಗ್ರೌಂಡ್ ಬೇಕಾಗಿಲ್ಲ ಎಂದು ಜನರ ಆಕ್ರೋಶ
  • ಚಿನ್ನಸ್ವಾಮಿ ಸ್ಟೇಡಿಯಂನ ವಶಪಡಿಸಿಕೊಳ್ಳಿ ಅಂತ ಮೋದಿಗೆ ಪತ್ರ

ಜೂನ್ 4, 2025. ಕರ್ನಾಟಕದ ಪಾಲಿಗೆ ಕರಾಳ ದಿನ. ಫ್ರೀ ಪಾಸ್ ಪೋಸ್ಟ್​ ನೋಡಿ ಚಿನ್ನಸ್ವಾಮಿ ಸ್ಟೇಡಿಯಂಗೆ ನುಗ್ಗಿದ್ದ ಲಕ್ಷ ಲಕ್ಷ ಅಭಿಮಾನಿಗಳಿಗೆ ಆ ಜಾಗದಲ್ಲಿ ಅಕ್ಷರಶಃ ನರಕ ದರ್ಶನವಾಗಿತ್ತು. ಅದೇ ಜಾಗದಲ್ಲಿ 11 ಮಂದಿ ಒದ್ದಾಡಿ ಒದ್ದಾಡಿ ಪ್ರಾಣ ಬಿಟ್ಟಿದ್ರು. ಇಷ್ಟೆಲ್ಲಾ ದುರಂತಕ್ಕೆ ಸಾಕ್ಷಿಯಾದ ಚಿನ್ನಸ್ವಾಮಿ ಸ್ಟೇಡಿಯಂನ ಬೇರೆ ಕಡೆ ಶಿಫ್ಟ್ ಮಾಡಬೇಕು ಅನ್ನೋ ಆಗ್ರಹ ಕೇಳಿ ಬಂದಿದೆ.

‘ದುರಂತ’ಕ್ಕೆ ಸಾಕ್ಷಿಯಾದ ಚಿನ್ನಸ್ವಾಮಿ ಸ್ಥಳಾಂತರಕ್ಕೆ ಆಗ್ರಹ
ಸಿಟಿ ಒಳಗೆ ಗ್ರೌಂಡ್ ಬೇಕಾಗಿಲ್ಲ, ಶಿಫ್ಟ್ ಮಾಡಲು ಮನವಿ
IPL ಕಪ್ ಗೆದ್ದ 11 ಆಟಗಾರರನ್ನ ನೋಡೋಕೆ ಬಂದು ಬಲಿಯಾಗಿದ್ದು 11 ಮಂದಿ. ಎಂತಹ ದುರಂತ ಅಲ್ವಾ? ಕರಾಳ ಕಾಲ್ತುಳಿತದಲ್ಲಿ ಅದೆಷ್ಟು ಒದ್ದಾಡಿರಬೇಡ ಆ ಜೀವಗಳು. ರಕ್ತಚರಿತ್ರೆಗೆ ಸಾಕ್ಷಿಯಾದ ಚಿನ್ನಸ್ವಾಮಿ ಸ್ಟೇಡಿಯಂ ಎತ್ತಂಗಡಿ ಮಾಡೋಕೆ ಕೌಂಟ್​ಡೌನ್ ಶುರುವಾದಂತಿದೆ.

publive-image

ಕಬ್ಬನ್ ಪಾಕ್೯ ವಾಕರ್ಸ್ ಅಸೋಸಿಯೇಷನ್ ಅಧ್ಯಕ್ಷ ಉಮೇಶ್, ಚಿನ್ನಸ್ವಾಮಿ ಸ್ಟೇಡಿಯಂನ ವಶಪಡಿಸಿಕೊಳ್ಳಿ ಅಂತ ಮೋದಿಗೆ ಪತ್ರ ಬರೆಯೋಕೆ ಮುಂದಾಗಿದ್ದಾರೆ. ಸಿಟಿ ಸೆಂಟರ್ ಒಳಗೆ ಗ್ರೌಂಡ್ ಬೇಕಾಗಿಲ್ಲ. ಏರ್​ಪೋರ್ಟ್​ ಪಕ್ಕ KSCAಗೆ ಸೇರಿದ 100 ಎಕರೆ ಜಾಗ ಇದೆ. ಅಲ್ಲಿಗೆ ಸ್ಥಳಾಂತರ ಮಾಡಿ ಅಂತ ಲೆಟರ್​ ಬರೆಯೋಕೆ ತಯಾರಿ ಮಾಡಿಕೊಂಡಿದ್ದಾರೆ. ಚಿನ್ನಸ್ವಾಮಿ ಮಾತ್ರ ಅಲ್ಲ, ಜೊತೆಗೆ ಕಂಠೀರವ ಸ್ಟೇಡಿಯಂನೂ ಕೂಡ ಸ್ಥಳಾಂತರ ಮಾಡಬೇಕು. ಇದ್ರಿಂದ ಟ್ರಾಫಿಕ್ ಜಾಮ್ ಆಗ್ತಿದೆ ಎಂದು ಆಗ್ರಹಿಸಿದ್ದಾರೆ.

ಹೊಸ ಸ್ಥಳಕ್ಕೆ ಸ್ಟೇಡಿಯಂನ ಸ್ಥಳಾಂತರ ಮಾಡೋದಾಗಿ ಮಾಹಿತಿ
ಇಂತಹ ಘಟನೆ ಮುಂದೆದು ಆಗಬಾರದು ಎಂದ ಸಿಎಂ ಸಿದ್ದರಾಮಯ್ಯ
ಇದೇ ವಿಚಾರದ ಕುರಿತು ಮಾತನಾಡಿದ ಸಿಎಂ ಸಿದ್ದರಾಮಯ್ಯ, ಚಿನ್ನಸ್ವಾಮಿ ಸ್ಟೇಡಿಯಂ ಸ್ಥಳಾಂತರದ ಬಗ್ಗೆ ಪರಿಶೀಲನೆ ಮಾಡ್ತೀನಿ. ಹೊಸ ಜಾಗ ಸಿಗಬೇಕಲ್ಲ ಅಂತ ಹೇಳಿದ್ದಾರೆ.

publive-image

ಚಿನ್ನಸ್ವಾಮಿ ಸ್ಟೇಡಿಯಂ ಸ್ಥಳಾಂತರ ಮಾಡಬೇಕು ಅನ್ನೋ ಆಗ್ರಹ ಕೇಳಿ ಬಂದಿದೆ. ಅದು ಒಪ್ಪುವಂತಹದ್ದೇ. ಆದ್ರೆ, ಕಾಲ್ತುಳಿತದಲ್ಲಿ ಹಾರಿ ಹೋದ 11 ಜೀವಗಳು ವಾಪಸ್ ಬರುತ್ವಾ? ಇದು ಕಹಿ ಸತ್ಯ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment