/newsfirstlive-kannada/media/post_attachments/wp-content/uploads/2024/12/MND-BADUTA-DEMAND.jpg)
ಮಂಡ್ಯದಲ್ಲಿ ಸಾಹಿತ್ಯ ಸಮ್ಮೆಳೆನದ ಹಿನ್ನೆಲೆ, ಸಮ್ಮೇಳನದಲ್ಲಿ ಬಾಡೂಟ ಮಾಡಿಸುವಂತೆ ಜಟಾಪಟಿ ಜೋರಾಗಿದೆ. ಬಾಡೂಟಕ್ಕೆ ಆಗ್ರಹಿಸಿ ಸಮಾನ ಮನಸ್ಕರ ವೇದಿಕೆಯಿಂದ ಪ್ರತಿಭಟನೆ ನಡೆದಿದೆ. ಮಂಡ್ಯದ ಜಿಲ್ಲಾಧಿಕಾರಿ ಕಚೇರಿ ಎದುರು ಬೇಯಿಸಿದ ಮೊಟ್ಟೆಯನ್ನು ಸೇವಿಸುವ ಮೂಲಕ ಪ್ರತಿಭಟನೆ ಮಾಡಲಾಗಿದೆ.
ಬೇಳೆಯ ಜೊತೆ ಮೂಳೆ ಬೇಕು, ಕೊಸಂಬರಿ ಜೊತೆ ಎಗ್​ಬುರ್ಜಿ ಬೇಕು, ಹಪ್ಪಳದ ಜೊತೆ ಕಬಾಬು ಬೇಕು, ಮಟನ್ ಕುರ್ಮಾ, ಚಿಕನ್ ಚಾಪ್ಸ್, ನಾಟಿಕೋಳಿ ಸಾರುಮ ಮಟನ್ ಬೇಕೆಂದು ಆಗ್ರಹ ಮಾಡಿದರು . ಮಂಡ್ಯ ಅಂದ್ರೆನೇ ಬಾಡೂಟಕ್ಕೆ ಫೇಮಸ್ ನಾವು ಬಾಡೂಟ ನೀಡಿ ಅತಿಥಿ ಸತ್ಕಾರ ಮಾಡಬೇಕು ಹೀಗಾಗಿ ವೆಜ್​ ಜೊತೆ ನಾನ್​ ವೆಜ್ ಸಹ ಇರಬೇಕು ಎಂದು ಆಗ್ರಹಿಸಿದರು.
ಬಾಡೂಟ ಕೊಡದಿದ್ದರೇ ನಾವೇ ಬಾಡೂಟ ಹಾಕಿಸುತ್ತೇವೆ. ಮನೆ ಮನೆಗೆ ತೆರಳಿ ಕೋಳಿ ಸಂಗ್ರಹ ಮಾಡುತ್ತೇವೆ ಎಂದು ಕಸಾಪ ಹಾಗೂ ಜಿಲ್ಲಾಡಳಿತಕ್ಕೆ ಸಮಾನ ಮನಸ್ಕ ವೇದಿಕೆಯಿಂದ ಎಚ್ಚರಿಕೆ ನೀಡಲಾಯ್ತು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us