newsfirstkannada.com

ಬುದ್ಧಿಮಾಂದ್ಯನಿಂದ ಭತ್ತದ ಬಣವೆಗೆ ಬೆಂಕಿ; 9 ಲಕ್ಷಕ್ಕೂ ಅಧಿಕ ಮೌಲ್ಯದ ಮೇವು ಸುಟ್ಟು ಭಸ್ಮ

Share :

Published January 14, 2024 at 12:16pm

  40 ಟ್ರಾಕ್ಟರ್ ಹುಲ್ಲಿನ ಬಣವೆ ಸುಟ್ಟು ಕರಕಲು

  ಅಗ್ನಿಶಾಮಕದವರಿಂದ ಬೆಂಕಿ ನಂದಿಸಲು ಹರಸಾಹಸ

  ಮೂವರು ರೈತರಿಗೆ ಸೇರಿದ್ದ ದೊಡ್ಡ ಬಣವೆ ಭಸ್ಮ

ಬಳ್ಳಾರಿ: ಬುದ್ಧಿಮಾಂದ್ಯನಿಂದ ಭತ್ತದ ಹುಲ್ಲಿನ ಬಣವೆಗೆ ಬೆಂಕಿ ಹೊತ್ತಿಕೊಂಡ ಘಟನೆ ಬಳ್ಳಾರಿಯ ಸಿರಗುಪ್ಪ ತಾಲೂಕಿನ ನಿಟ್ಟೂರು ಗ್ರಾಮದಲ್ಲಿ ನಡೆದಿದೆ. ಅಂದಾಜು 40 ಟ್ರಾಕ್ಟರ್ ಹುಲ್ಲಿನ ಬಣವೆ ಸುಟ್ಟು ಕರಕಲಾಗಿದೆ.

ತಾಯಣ್ಣ, ರಾಘವೇಂದ್ರ, ಶೇಖರ್ ಎಂಬ ರೈತರಿಗೆ ಸೇರಿದ್ದ ಬಣವೆ ಇದಾಗಿದ್ದು, ರೈತರು ಗ್ರಾಮದ ಹೊರವಲಯದಲ್ಲಿ ದೊಡ್ಡ ಬಣವೆ ಹಾಕಿದ್ದರು. ಈ ಸಮಯದಲ್ಲಿ ಬುದ್ಧಿಮಾಂದ್ಯನಿಂದ ಬಣವೆಗೆ ಬೆಂಕಿ ಬಿದ್ದಿದೆ. ಪರಿಣಾಮ 9 ಲಕ್ಷಕ್ಕೂ ಅಧಿಕ ಮೌಲ್ಯದ ಮೇವು ನಾಶವಾಗಿದೆ.

ಬೆಂಕಿ ಹೊತ್ತಿಕೊಂಡ ಬಣವೆ

ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ದೌಡಾಯಿಸಿ ಬೆಂಕಿ ನಂದಿಸಲು ಹರಸಾಹಸ ಪಟ್ಟಿದ್ದಾರೆ. ಸತತ ನಾಲ್ಕು ಗಂಟೆಗಳ ಕಾಲ ಬೆಂಕಿ ನಂದಿಸಲು ಹರಸಾಹಸ ಪಟ್ಟಿದ್ದಾರೆ. ಕೊನೆಗೆ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ತೆಕ್ಕಲಕೋಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬುದ್ಧಿಮಾಂದ್ಯನಿಂದ ಭತ್ತದ ಬಣವೆಗೆ ಬೆಂಕಿ; 9 ಲಕ್ಷಕ್ಕೂ ಅಧಿಕ ಮೌಲ್ಯದ ಮೇವು ಸುಟ್ಟು ಭಸ್ಮ

https://newsfirstlive.com/wp-content/uploads/2024/01/Fire-2.jpg

Load More