/newsfirstlive-kannada/media/post_attachments/wp-content/uploads/2025/06/police3.jpg)
ತಮಿಳುನಾಡು ಎಡಿಜಿಪಿ ಜಯರಾಂ ಬಂಧನ ಪ್ರಕರಣವು ಇದೀಗ ಸುಪ್ರೀಂ ಕೋರ್ಟ್​ ಮೆಟ್ಟಿಲೇರಿದೆ. ವಿಚಾರಣೆ ವೇಳೆ ಮದ್ರಾಸ್​​ ಹೈಕೋರ್ಟ್​ ಎಡಿಜಿಪಿ ಬಂಧನಕ್ಕೆ ಸೂಚಿಸಿರುವುದೇ ಶಾಕಿಂಗ್ ಆದೇಶ ಅಂತಾ ಸುಪ್ರೀಂ ಕೋರ್ಟ್​ ಅಭಿಪ್ರಾಯಪಟ್ಟಿದೆ.
ತಮ್ಮ ಬಂಧನಕ್ಕೆ ಹೈಕೋರ್ಟ್ ನೀಡಿದ್ದ ಆದೇಶವನ್ನು ಪ್ರಶ್ನಿಸಿ ಎಡಿಜಿಪಿ ಜಯರಾಂ ಸುಪ್ರೀಂ ಕೋರ್ಟ್​ ಮೆಟ್ಟಿಲೇರಿದ್ದಾರೆ. ನಾನು ಕಳೆದ 18 ವರ್ಷಗಳಿಂದ ನ್ಯಾಯಮೂರ್ತಿ ಆಗಿದ್ದೇನೆ. ನನಗೆ ಬಂಧನಕ್ಕೆ ಆದೇಶ ನೀಡುವ ಅಧಿಕಾರವಿದೆಯೇ ಎಂದು ಗೊತ್ತಿಲ್ಲ ಅಂತಾ ಜಸ್ಟೀಸ್ ಮನಮೋಹನ್ ಹೇಳಿದ್ದಾರೆ.
ಇದನ್ನೂ ಓದಿ: ಕೊಟ್ಟಿಯೂರು ದೇವಸ್ಥಾನಕ್ಕೆ ಭೇಟಿ ಕೊಟ್ಟ ನಟ ದರ್ಶನ್ ದಂಪತಿ; ವಿಶೇಷತೆ ಏನು?
ನೀವು ಹೀಗೆ ಎಡಿಜಿಪಿ ಅಧಿಕಾರಿಯನ್ನು ಸಸ್ಪೆಂಡ್ ಮಾಡಲು ಸಾಧ್ಯವಿಲ್ಲ. ಇದು ಅಧಿಕಾರಿಗಳ ನೈತಿಕ ಸ್ಥೈರ್ಯವನ್ನು ಕುಗ್ಗಿಸುತ್ತದೆ. ಅವರ ಮೇಲೆ ರಾಜ್ಯ ಸರ್ಕಾರ ಶಾಕಿಂಗ್ ಕ್ರಮ ತೆಗೆದುಕೊಂಡಿದೆ ಎಂದು ಸುಪ್ರೀಂ ಕೋರ್ಟ್​ ಹೇಳಿದೆ.
ಜಯರಾಂ ಏನಂದ್ರು..?
ಪ್ರಕರಣದಲ್ಲಿ ನಾನು ಪಾರ್ಟಿಯೇ ಅಲ್ಲ. ಬೇರೊಬ್ಬ ಆರೋಪಿ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಗೆ ನಾನು ಪಾರ್ಟಿಯೇ ಅಲ್ಲ. ನಾನು ಎಡಿಜಿಪಿಯಾಗಿ ಸೇವೆ ಸಲ್ಲಿಸುತ್ತಿದ್ದೇನೆ ಎಂದು ಜಯರಾಂ ಕೋರ್ಟ್​ಗೆ ತಿಳಿಸಿದರು. ಆಗ ಸುಪ್ರೀಂ ಕೋರ್ಟ್​, ರಾಜ್ಯ ಸರ್ಕಾರದ ಅಭಿಪ್ರಾಯ ತಿಳಿಸಲು ಸರ್ಕಾರಿ ವಕೀಲರಿಗೆ ಸೂಚಿಸಿತು.
ಇದನ್ನೂ ಓದಿ: ಒಂದೇ ವೇದಿಕೆ ಮೇಲೆ ಮಿಂಚಿದ ಬಿಗ್​ಬಾಸ್​ ಖ್ಯಾತಿಯ ಮೋಕ್ಷಿತಾ ಪೈ, ಉಗ್ರಂ ಮಂಜು.. PHOTOS
ಎಡಿಜಿಪಿ ಜಯರಾಂ ತನಿಖೆಗೆ ಸಹಕಾರ ನೀಡಿದ ಮೇಲೆ ಸಸ್ಪೆಂಡ್ ಮಾಡುವ ಪ್ರಶ್ನೆ ಎಲ್ಲಿಂದ ಉದ್ಭವಿಸಿತು ಅಂತಾ ಪ್ರಶ್ನೆ ಮಾಡಿರುವ ಕೋರ್ಟ್, ನೀವು ಈ ರೀತಿ ಮಾಡಲು ಸಾಧ್ಯವಿಲ್ಲ. ಈ ರೀತಿಯ ಆದೇಶಗಳು ಶಾಕಿಂಗ್. ನಿನ್ನೆ ಸಂಜೆ 5 ಗಂಟೆಗೆ ಎಡಿಜಿಪಿ ಜಯರಾಮರನ್ನು ಬಿಡುಗಡೆ ಮಾಡಲಾಗಿದೆ. ಆದರೆ ಎಡಿಜಿಪಿಯನ್ನು ಅಮಾನತು ಮಾಡಲಾಗಿದೆ. ಮತ್ತೊಂದು ಕಡೆ ರಾಜ್ಯ ಸರ್ಕಾರ ಜಯರಾಮರನ್ನು ಬಂಧಿಸಿಲ್ಲ ಎಂದು ತಿಳಿಸಿದೆ. ಹೈಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಸಸ್ಪೆಂಡ್ ಮಾಡಿರುವುದನ್ನು ಹಿಂತೆಗೆದುಕೊಳ್ಳಲು ಸಾಧ್ಯವೇ ಅನ್ನೋದ್ರ ಬಗ್ಗೆ ತಿಳಿಸಬೇಕು. ಜಯರಾಮರನ್ನು ಸೇವೆಯಿಂದ ಸಸ್ಪೆಂಡ್ ಮಾಡುವುದು ಅಗತ್ಯವೇ ಎಂದು ಸುಪ್ರೀಂ ಕೋರ್ಟ್ ಪ್ರಶ್ನೆ ಮಾಡಿದೆ. ಜೊತೆಗೆ ರಾಜ್ಯ ಸರ್ಕಾರದ ಪರ ವಕೀಲರು ಅಭಿಪ್ರಾಯ ತಿಳಿಸಬೇಕು ಎಂದಿರುವ ಕೋರ್ಟ್​, ವಿಚಾರಣೆಯನ್ನು ನಾಳೆಗೆ ಮುಂದೂಡಿದೆ.
ಏನಿದು ಆರೋಪ ಪ್ರಕರಣ..?
ತಮಿಳುನಾಡಿನ ಥೇಣಿ ಜಿಲ್ಲೆಯಲ್ಲಿ ಪೋಷಕರ ವಿರೋಧದ ಮಧ್ಯೆಯೂ 2025ರ ಮೇ ತಿಂಗಳಲ್ಲಿ ಯುವಕ-ಯುವತಿ ಮದುವೆಯಾಗಿದ್ದರು. ಮದುವೆ ನಂತರ ಯುವತಿಯ ಪೋಷಕರು ಶಾಸಕ ಪೂವೈ ಜಗನ್ ಮೂರ್ತಿಯ ಬೆಂಬಲಿಗರ ಸಹಾಯದೊಂದಿಗೆ ಮದುಮಗನ ಅಪ್ರಾಪ್ತ ಸಹೋದರನನ್ನು ಕಿಡ್ನ್ಯಾಪ್ ಮಾಡಿಸಿದ್ದರು. ಮದುಮಗನ ಕಿಡ್ನ್ಯಾಪ್ ಮಾಡುವ ಬದಲಿಗೆ ಆತನ ಸಹೋದರನ ಅಪಹರಣ ಮಾಡಲಾಗಿತ್ತು. ಈ ಪ್ರಕರಣದಲ್ಲಿ ಅಮಾನತುಗೊಂಡಿದ್ದ ಕಾನ್ಸ್​ಟೇಬಲ್ ಮಹೇಶ್ವರಿ ಹಾಗೂ ಎಡಿಜಿಪಿ ಜಯರಾಂ ಅವರು ಸಹಕಾರ ನೀಡಿದ್ದಾರೆ ಎಂಬ ಆರೋಪ ಇದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ