Advertisment

ಬೆಂಗಳೂರಲ್ಲಿ ಸದ್ದಿಲ್ಲದೇ ಡೆಂಘೀ ಸವಾರಿ; ಕಡಿವಾಣ ಹಾಕೋ ಸಾಹಸದಲ್ಲೂ ಪಾಲಿಕೆ ಯಡವಟ್ಟು; ಆಗಿದ್ದೇನು?

author-image
admin
Updated On
ರಾಜ್ಯದ ಗಡಿ ಜಿಲ್ಲೆಯ ಜನರೇ ಎಚ್ಚರ.. ಡೆಂಘೀ ಜೊತೆ ಡೇಂಜರ್‌ ಝಿಕಾ ವೈರಸ್ ಎಂಟ್ರಿ!
Advertisment
  • ಬೆಂಗಳೂರಲ್ಲಿ ರಕ್ತ ಹಿರಿ ಹಾರಾಡ್ತಿರೋ ಸೊಳ್ಳೆ ಸದ್ದಿಲ್ಲದೆ ಸಾವಿನ ಸವಾರಿ
  • ಡೆಂಘೀಗೆ ಬ್ರೇಕ್ ಹಾಕ್ತೀವಿ ಅಂದ ಪಾಲಿಕೆ ವಿರುದ್ಧವೇ ಆರೋಪ
  • ವಿಐಪಿ ಲೇಔಟ್ಸ್ ಲಕಲಕ.. ಸಾಮಾನ್ಯರ ಲೇಔಟ್ಸ್​ ಫುಲ್​ ಕಸಕಸ

ಸಿಲಿಕಾನ್ ಸಿಟಿಯಲ್ಲಿ ಡೆಂಘೀ ಜ್ವರ ಮರಣ ನರ್ತನ ಆರಂಭಿಸಿ, ಕೇಕೆ ಹಾಕ್ತಿದೆ. ಬಾಲ ಬಿಚ್ಚಿರೋ ಮಾರಿ ರೆಕ್ಕೆ ಬಡಿದು ತಾಂಡವಾಡ್ತಿದೆ. ರಕ್ತ ಹಿರಿ ಹಾರಾಡ್ತಿರೋ ಸೊಳ್ಳೆ ಸದ್ದಿಲ್ಲದೆ ಸಾವಿನ ಸವಾರಿ ಹೊರಟಿದೆ. ಈ ಮಧ್ಯೆಯೇ ಡೆಂಘೀ ಹಾವಳಿಗೆ ಬ್ರೇಕ್ ಹಾಕ್ತೀವಿ ಅಂತಾ ಬೊಬ್ಬೆ ಹೊಡೆಯುತ್ತಿರುವ ಪಾಲಿಕೆ ವಿರುದ್ಧ ಗಂಭೀರ ಆರೋಪ ಕೇಳಿ ಬಂದಿದೆ.

Advertisment

publive-image

ಮಳೆಗಾಲದಲ್ಲಿ ಕರೆಯದೇ ಮನೆಗೆ ಬರೋ ಅತಿಥಿ ಅಂದ್ರೇ ಅದು ಡೆಂಘೀ ಮಹಾಮಾರಿ. ಬಿರುಗಾಳಿಯಂತೆ ಬೀಸಿ ಅಬ್ಬರ ಶುರು ಮಾಡಿರೋ ಡೆಂಘೀ ಸಾವಿನ ನರ್ತನ ಶುರುಮಾಡಿದ್ದಾಳೆ. ಈ ಮಧ್ಯೆಯೇ ಸಿಲಿಕಾನ್ ಸಿಟಿಯಲ್ಲಿ ದಾಖಲಾಗಿರುವ ಕೇಸ್​ಗಳು ಸಿಟಿ ಮಂದಿಯನ್ನ ಬೆಚ್ಚಿ ಬೀಳಿಸಿದೆ. ರಾಜ್ಯ ರಾಜಾಧಾನಿಯ ಎಂಟು ಝೋನ್​ಗಳಲ್ಲಿ ಎಷ್ಟೆಷ್ಟು ಡೆಂಘೀ ಕೇಸ್​ಗಳು ದಾಖಲಾಗಿವೆ ಅಂತ ನೋಡಿದ್ರೆ.

publive-image

publive-image

ಡೆಂಘೀ ಟೆಸ್ಟಿಂಗ್​ಗೆ ದರ ನಿಗದಿ ಮಾಡಿದ ಆರೋಗ್ಯ ಇಲಾಖೆ 
ಬೆಂಗಳೂರಿನ ಕೆಲ ಆಸ್ಪತ್ರೆಗಳು ಡೆಂಘೀ ಟೆಸ್ಟಿಂಗ್​ಗೆ ಒನ್​ ಟು ಡಬಲ್ ಹಣ ಪಡೆದು ವಸೂಲಿಗಿಳಿದಿದವು. ಈ ಬೆನ್ನಲ್ಲೆ ಹೆಚ್ವಿನ ಬೆಲೆ ವಿಧಿಸುತ್ತಿದ್ದ ಖಾಸಗಿ ಆಸ್ಪತ್ರೆಗಳಿಗೆ ಆರೋಗ್ಯ ಇಲಾಖೆ ರೇಟ್​ ಫಿಕ್ಸ್​ ಮಾಡಿದೆ. ಡೆಂಘೀ ಟೆಸ್ಟ್​ಗೆ 600 ರೂಪಾಯಿ ದರ ನಿಗದಿ ಮಾಡಿ ಆದೇಶ ಹೊರಡಿಸಿದೆ.

publive-image

ಅಧಿಕಾರಿಗಳೇ.. ಒಂದು ಕಣ್ಣಿಗೆ ಸುಣ್ಣಾ.. ಮತ್ತೊಂದಕ್ಕೆ ಬೆಣ್ಣೆನಾ?
ವಿಐಪಿ ಲೇಔಟ್ಸ್ ಲಕಲಕ.. ಸಾಮಾನ್ಯರ ಲೇಔಟ್ಸ್​ ಫುಲ್​ ಕಸಕಸ!
ಒಂದ್ಕಡೆ ಇರೋ ಏರಿಯಾ ಫುಲ್​ ಲಕಲಕ ಅಂತಿದ್ರೆ, ಮತ್ತೊಂದ್ಕಡೆ ರೋಡ್​ ಫುಲ್ ಕಸದ ರಾಶಿಯಿಂದ ತುಂಬಿದೆ. ವಿಪರ್ಯಾಸ ಅಂದ್ರೆ, ಇದೆರೆಡು ರೋಡ್​ಗಳಿರೋದು ಅಕ್ಕಪಕ್ಕಾನೇ. ಐಎಎಸ್​, ಐಪಿಎಸ್​ಗಳಿರೋ ಜಕ್ಕೂರಿನ ಎಂಸಿಹೆಚ್ಎನ್ ಲೇಔಟ್​ನ ಮಾತ್ರ ಬಿಬಿಎಂಪಿ ಪಳಪಳ ಅಂತಾ ಹೊಳೆಯುವಂತೆ ಕ್ಲೀನ್ ಮಾಡಿದೆ. ಆದ್ರೆ, ಅದ್ರ ಪಕ್ಕಾನೇ ಇರೋ ಲೇಔಟ್​ಗೆ ಸ್ವಚ್ಛತೆಯ ಭಾಗ್ಯ ಇಲ್ಲ. ಪಾಲಿಕೆ ತಾರತಮ್ಯ ಮಾಡ್ತಿದೆ ಅಂತಾ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

Advertisment

ಇದನ್ನೂ ಓದಿ: ಅಬ್ಬಾ.. 6,187 ಡೆಂಘೀ.. ಡೆಡ್ಲಿ ಕೇಸ್‌ನಲ್ಲಿ ಮಕ್ಕಳೇ ಟಾರ್ಗೆಟ್‌; ಪೋಷಕರು ಏನ್‌ ಮಾಡ್ಬೇಕು? 

ಅದೇನೆ ಹೇಳಿ ಡೆಂಘೀ ಮಾರಿ ಎಲ್ಲೆ ಮೀರಿ ಓಡ್ತಿದ್ದಾಳೆ. ರಾಜ್ಯದಲ್ಲಿ ರಣ ಕೇಕೆ ಹಾಕ್ತಾ ಸಾವಿನ ಸವಾರಿ ಹೊರಟಿದ್ದಾಳೆ. ಅಪಾಯದ ದರ್ಶನ ಆಗೋ ಮುನ್ನ ಪಾಲಿಕೆ ಎಚ್ಚೆತ್ತುಕೊಳ್ಳಬೇಕಿದೆ. ಶತಾಯಗತಾಯ ಡೆಂಘೀನ ಕಟ್ಟಾಗ್ತೀವಿ ಅಂತಾ ಬರೀ ಬಾಯಿ ಮಾತಿಗೆ ಹೇಳದೇ ಕಠಿಣ ಕ್ರಮದ ಅವಶ್ಯಕತೆ ಖಂಡಿತ ಇದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment