newsfirstkannada.com

ಶುರುವಾಯ್ತು ಡೆಂಗ್ಯೂ ಕಾಟ​: ಇದನ್ನ ತಡೆಗಟ್ಟಲು ಪಾಲಿಕೆ ಮಾಡಿದ ಹೊಸ ಪ್ಲ್ಯಾನ್​ ಏನು?

Share :

Published July 20, 2023 at 8:17am

    ಡೆಂಗ್ಯೂ ಪ್ರಕರಣ ಕಡಿಮೆ ಮಾಡೋದಕ್ಕೆ ಬಿಬಿಎಂಪಿ ಮಾಸ್ಟರ್​ ಪ್ಲ್ಯಾನ್

    ಆರೋಗ್ಯ ಇಲಾಖೆ ಜೊತೆ ಸಭೆ ಮಾಡೋಕೆ ಮಹಾನಗರ ಪಾಲಿಕೆ ಸಜ್ಜು

    100 ಮೀ. ಒಳಗಡೆ ಇರೋ ಪ್ರದೇಶದಲ್ಲಿ ಸರ್ವಿಲೆನ್ಸ್​ ಮಾಡೋಕೆ ದೌಡು!

ಬೆಂಗಳೂರು: ಇಷ್ಟೊತ್ತಿಗೆಲ್ಲ ಬೆಂಗಳೂರು ಮಳೆರಾಯನ ಆರ್ಭಟ ಜೋರಾಗಿರಬೇಕಿತ್ತು. ಆದರೆ ಈ ಬಾರಿ ಯಾಕೋ ವರುಣನ ಕೃಪೆ ಅಷ್ಟಾಗಿಲ್ಲ. ಆದರೂ ಆಗಾಗ ಸುರೀತಿರೋ ಮಳೆ, ಅಲಲ್ಲೇ ನಿಲ್ಲೋ ನೀರು ಡೆಂಗ್ಯೂಗೆ ಆಹ್ವಾನ ನೀಡುತ್ತಿದೆ. ಶೇಖರಣೆಯಾದ ನೀರಿನಿಂದ ಉತ್ಪತ್ತಿಯಾಗ್ತಿರೋ ಸೊಳ್ಳೆ ಜನರನ್ನು ಅಟ್ಯಾಕ್​ ಮಾಡುತ್ತಿದೆ. ಒಂದು ಕಡೆ ಮಕ್ಕಳ ಪೋಷಕರಿಗೆ ಆತಂಕ ಶುರುವಾದ್ರೆ, ಇನ್ನೊಂದ್ಕಡೆ ಆರೋಗ್ಯ ಇಲಾಖೆಗೆ ಈ ಕೇಸ್​​​ ತಲೆನೋವಾಗಿ ಪರಿಣಮಿಸಿದೆ. ಹೀಗಾಗಿ ಪಾಲಿಕೆ ಡೆಂಗ್ಯೂ ವಿರುದ್ಧ ಸಮರ ಸಾರೋದಕ್ಕೆ ಮುಂದಾಗಿದೆ. ಹೌದು, ನಗರದಲ್ಲಿ ಟೊಮ್ಯಾಟೋ ರೇಟ್​​ ತರ ಏರಿಕೆಯಾಗ್ತಿರೋ ಡೆಂಗ್ಯೂ ಕೇಸ್​​ಗಳನ್ನ ಕಡಿಮೆ ಮಾಡೋದಕ್ಕೆ ಪಾಲಿಕೆ ಇಂಟೆನ್ಸ್ ಸರ್ವೆಲೆನ್ಸ್ ಶುರು ಮಾಡಿದೆ.

ಡೆಂಗ್ಯೂ ಪ್ರಕರಣ ಕಡಿಮೆ ಮಾಡೋದಕ್ಕೆ ಬಿಬಿಎಂಪಿ ಮಾಸ್ಟರ್​ ಪ್ಲ್ಯಾನ್​ ನಡೆಸಿದೆ. ಎಲೆಲ್ಲಿ ಡೆಂಗ್ಯೂ ಪ್ರಕರಣ ಪತ್ತೆಯಾಗಿದೆ ಹಾಗೂ ಡೆಂಗ್ಯೂಗೆ ತುತ್ತಾಗಿರೋ ವ್ಯಕ್ತಿಯ ಮನೆಯ ಸುತ್ತಮುತ್ತಲು ತೀವ್ರ ನಿಗಾ ಇರಿಸುವಂತೆ ಪಾಲಿಕೆ ಎಚ್ಚರಿಕೆ ನೀಡಿದೆ. ಹೀಗಾಗಿ ಡೆಂಗ್ಯೂಗೆ ತುತ್ತಾಗಿರೋ ಮನೆಯ 100 ಮೀಟರ್​ ಒಳಗಡೆ ಇರೋ ಪ್ರದೇಶದಲ್ಲಿ ಸರ್ವಿಲೆನ್ಸ್​ ಮಾಡೋಕೆ ಮುಂದಾಗಿದೆ. ಅಲ್ಲದೆ ಈ ಬಗ್ಗೆ ಆರೋಗ್ಯ ಇಲಾಖೆಯ ಜೊತೆಯೂ ಸಭೆ ಮಾಡೋದಕ್ಕೆ ಪಾಲಿಕೆ ಸಜ್ಜಾಗಿದೆ.

ಇನ್ನು, ಜನರು ಕೋವಿಡ್​ ಟೆಸ್ಟ್​ ರೀತಿಯಲ್ಲಿ ಡೆಂಗ್ಯೂ ಜ್ವರ ಟೆಸ್ಟ್​ ಮಾಡೋದಕ್ಕೂ ಕ್ರಮ ಕೈಗೊಳ್ಳಲಾಗಿದೆ. ಮೆಡಿಕಲ್​​ನಲ್ಲಿ ಡೆಂಗ್ಯೂ ಜ್ವರ ಟೆಸ್ಟ್​ ಮಾಡೋದಕ್ಕೆ ಱಪಿಡ್​ ಕಿಟ್​ಗಳು ಲಭ್ಯ ಇರೋದರಿಂದ, ಜನರು ಮನೆ, ಲ್ಯಾಬ್​ಗಳಲ್ಲಿ ಟೆಸ್ಟ್​ ಮಾಡಿಸಿ ಔಷಧಿ ಪಡೆದುಕೊಳ್ಳುತ್ತಿದ್ದಾರೆ. ಇದ್ರಿಂದ ಡೆಂಗ್ಯೂ ಪ್ರಕರಣಗಳ ಸಂಖ್ಯೆ ನಿಖರವಾಗಿ ಪತ್ತೆ ಹಚ್ಚೋದಕ್ಕೆ ಪಾಲಿಕೆಗೆ ಅಡ್ಡಿ ಉಂಟಾಗಿದೆ. ಒಟ್ಟಾರೆ ಜನರು ಆದಷ್ಟು ಸ್ವಚ್ಚತೆ ಕಾಪಾಡಿ. ಮನೆಯ ಸುತ್ತ ನೀರು ಕಟ್ಟಿ ನಿಲ್ಲದಂತೆ ಎಚ್ಚರಿಕೆ ವಹಿಸಿ. ಆರೋಗ್ಯವನ್ನ ಕಾಪಾಡಿಕೊಳ್ಳಿ ಅನ್ನೋದೇ ನಮ್ಮ ಕಳಕಳಿ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಶುರುವಾಯ್ತು ಡೆಂಗ್ಯೂ ಕಾಟ​: ಇದನ್ನ ತಡೆಗಟ್ಟಲು ಪಾಲಿಕೆ ಮಾಡಿದ ಹೊಸ ಪ್ಲ್ಯಾನ್​ ಏನು?

https://newsfirstlive.com/wp-content/uploads/2023/07/dengu.jpg

Load More