/newsfirstlive-kannada/media/post_attachments/wp-content/uploads/2025/05/DENGUE-2.jpg)
ಬೆಂಗಳೂರು: ಕರ್ನಾಟಕದಲ್ಲಿ ಕೊರೊನಾ ಹಾವಳಿ ಮತ್ತೆ ಉಲ್ಬಣ ಆಗುವ ಸಾಧ್ಯತೆ ಇದೆ. ಈ ಸಮಸ್ಯೆ ಮಧ್ಯೆ ಆರೋಗ್ಯ ಇಲಾಖೆಗೆ ಮತ್ತೊಂದು ಆತಂಕ ಶುರುವಾಗಿದೆ.
ಒಂದು ಕಡೆ ಕೊರೊನಾ ಮತ್ತೆ ಬಂದರೆ, ಮತ್ತೊಂದು ಕಡೆಯಲ್ಲಿ ಡೆಂಘೀ ಭೀತಿ ಶುರುವಾಗಿದೆ. ಪೂರ್ವ ಮುಂಗಾರಿನಲ್ಲಿ ಜಲಾವೃತವಾದ ಏರಿಯಾಗಳಲ್ಲಿ ಡೆಂಘೀ ಭೀತಿ ಆವರಿಸಿದೆ. ಕೊರಮಂಗಲ, ಇಂದಿರಾನಗರ, ಹೆಚ್ಬಿಆರ್ ಲೇಔಟ್, ಸಾಯಿ ಲೇಔಟ್, ಹೆಚ್ಎಸ್ಆರ್ ಲೇಔಟ್ನಲ್ಲಿ ಡೆಂಘೀ ಭೀತಿ ಶುರುವಾಗಿದೆ.
ಇದೇ ಕಾರಣಕ್ಕೆ ಸಾಯಿ ಲೇಔಟ್ನಿಂದ ಜನರು ವಲಸೆ ಹೋಗಿದ್ದಾರೆ. ಇಂದಿರಾನಗರಲ್ಲಿ ಬಿಬಿಎಂಪಿಯಿಂದ ಫಾಗಿಂಗ್ ವ್ಯವಸ್ಥೆ ಮಾಡಲಾಗ್ತಿದೆ. ಜೊತೆಗೆ ಸಾಮೂಹಿಕ ಟೆಸ್ಟ್ಗೆ ಬಿಬಿಎಂಪಿ ಆರೋಗ್ಯ ಇಲಾಖೆ ಮುಂದಾಗಿದೆ. ಮಳೆ, ರಾಜಕಾಲುವೆ ನೀರು 3-4 ದಿನ ನಿಂತ ಏರಿಯಾದ ಜನರಿಗೆ ಸಾಮೂಹಿಕ ಟೆಸ್ಟಿಂಗ್ ನಡೆಸಲಾಗುತ್ತಿದೆ.
ಇದನ್ನೂ ಓದಿ: ಮೇ 29ರಿಂದ ಶಾಲೆಗಳು ಪುನರ್ ಆರಂಭ ಆಗೋದು ಡೌಟ್.. ಪೋಷಕರು ಓದಲೇಬೇಕಾದ ಸ್ಟೋರಿ!
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ