ರಾಜ್ಯದಲ್ಲಿ ಮತ್ತೆ ಹೆಚ್ಚಾಯ್ತು ಡೆಂಗ್ಯೂ ಭಯ; 7ನೇ ತರಗತಿ ವಿದ್ಯಾರ್ಥಿನಿ ದಾರುಣ ಸಾವು

author-image
admin
Updated On
ರಾಜ್ಯದಲ್ಲಿ ಮತ್ತೆ ಹೆಚ್ಚಾಯ್ತು ಡೆಂಗ್ಯೂ ಭಯ; 7ನೇ ತರಗತಿ ವಿದ್ಯಾರ್ಥಿನಿ ದಾರುಣ ಸಾವು
Advertisment
  • ವೈರಲ್ ಫೀವರ್ ಅಂತ ಹೊಸಪೇಟೆ ಖಾಸಗಿ ಆಸ್ಪತ್ರೆಗೆ ದಾಖಲು
  • ಹೊಸಪೇಟೆ ವಿಜ್ಞಾನ ಇ-ಟೆಕ್ನೋ ಶಾಲೆಯಲ್ಲಿ 7ನೇ ತರಗತಿ ವಿದ್ಯಾರ್ಥಿನಿ
  • ಈಡಿಸ್ ಸೊಳ್ಳೆಗಳು ಸಾಮಾನ್ಯವಾಗಿ ಹಗಲು ಹೊತ್ತಿನಲ್ಲಿ ಕಚ್ಚುತ್ತವೆ

ವಿಜಯನಗರ: ರಾಜ್ಯದಲ್ಲಿ ಡೆಂಗ್ಯೂ ಆತಂಕ ಮತ್ತೆ ಹೆಚ್ಚಾಗಿದೆ. ಶಂಕಿತ ಡೆಂಗ್ಯೂಗೆ ಹೊಸಪೇಟೆ ವಿಜ್ಞಾನ ಇ-ಟೆಕ್ನೋ ಶಾಲೆಯಲ್ಲಿ ಓದುತ್ತಿದ್ದ ವಿದ್ಯಾರ್ಥಿನಿ ಸಾವನ್ನಪ್ಪಿದ್ದಾರೆ. ಜಾನ್ಹವಿ ಮೃತಪಟ್ಟ ಶಾಲಾ ಬಾಲಕಿ.

13 ವರ್ಷದ ಜಾನ್ಹವಿ ಹೊಸಪೇಟೆ ವಿಜ್ಞಾನ ಇ-ಟೆಕ್ನೋ ಶಾಲೆಯಲ್ಲಿ 7ನೇ ತರಗತಿ ವಿದ್ಯಾಭ್ಯಾಸ ಮಾಡ್ತಿದ್ದಳು. ವೈರಲ್ ಫೀವರ್ ಅಂತ ಹೊಸಪೇಟೆ ಖಾಸಗಿ ಆಸ್ಪತ್ರೆಗೆ ಜಾನ್ಹವಿಯನ್ನು ದಾಖಲು ಮಾಡಲಾಗಿತ್ತು. ಬಳಿಕ ವಿದ್ಯಾರ್ಥಿನಿಯನ್ನು ದಾವಣಗೆರೆಯ ಬಾಪೂಜಿ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿತ್ತು. ಮೃತ ಜಾನ್ಹವಿ ಟಿಬಿ ಡ್ಯಾಂನ ವಂಕಾಯಿ ಕ್ಯಾಂಪ್‌ನ ತಿರುಮಲೇಶ್ ಎಂಬುವವರ ಮಗಳು. ಈಕೆಯನ್ನು ಕಳೆದ ಸೆಪ್ಟೆಂಬರ್ 18ರಂದು ದಾವಣಗೆರೆಯ ಬಾಪೂಜಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಇಂದು ಜಾನ್ಹವಿ ಮೃತಪಟ್ಟಿದ್ದು ವೈರಲ್ ಫೀವರ್ ಅಥವಾ ಡೆಂಗ್ಯೂ ಅಂತ ವಿಜಯನಗರ ಆರೋಗ್ಯ ಇಲಾಖೆ ಸ್ಪಷ್ಟಪಡಿಸಬೇಕಿದೆ.

ಇದನ್ನೂ ಓದಿ: Breaking News: ಚೈತ್ರಾ ಕುಂದಾಪುರ ಕೇಸ್; ಅಭಿನವ ಹಾಲಶ್ರೀ ಸಿಸಿಬಿ ಕಸ್ಟಡಿಗೆ ನೀಡಿ ಕೋರ್ಟ್ ಆದೇಶ

ರಾಜ್ಯದಲ್ಲಿ ಡೆಂಗ್ಯೂ ಆತಂಕ ಹೆಚ್ಚಾಗಿರೋದು ಆರೋಗ್ಯ ಇಲಾಖೆಗೆ ಟೆನ್ಶನ್ ಹೆಚ್ಚಿಸಿದೆ. ಮುಂಜಾಗ್ರತಾ ದೃಷ್ಟಿಯಿಂದ ಆರೋಗ್ಯ ಇಲಾಖೆ ಕೆಲವೊಂದು ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಸೋಂಕಿತ ಈಡಿಸ್ ಸೊಳ್ಳೆ ಕಚ್ಚುವುದರಿಂದ ಡೆಂಘೀ ಜ್ವರ ಒಬ್ಬರಿಂದ ಮತ್ತೊಬ್ಬರಿಗೆ ಹರಡುತ್ತದೆ. ಈಡಿಸ್ ಸೊಳ್ಳೆಗಳು ಸಾಮಾನ್ಯವಾಗಿ ಹಗಲು ಹೊತ್ತಿನಲ್ಲಿ ಕಚ್ಚುತ್ತವೆ. ಸೊಳ್ಳೆ ಕಚ್ಚಿದ 5-7 ದಿನಗಳಲ್ಲಿ ರೋಗದ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಡೆಂಗ್ಯೂ ಜ್ವರಕ್ಕೆ ನಿರ್ದಿಷ್ಟವಾದ ಚಿಕಿತ್ಸೆ ಇರುವುದಿಲ್ಲ. ರೋಗ ಲಕ್ಷಣಗಳಿಗೆ ಅನುಗುಣವಾಗಿ ಚಿಕಿತ್ಸೆಯನ್ನು ನೀಡಲಾಗುತ್ತದೆ. ಈ ರೋಗ ಲಕ್ಷಣ ಕಂಡು ಬಂದ್ರೆ ಶೀಘ್ರವೇ ಆಸ್ಪತ್ರೆಗೆ ದಾಖಲಾಗಲು ಆರೋಗ್ಯ ಇಲಾಖೆ ಸಲಹೆ ಕೊಟ್ಟಿದೆ.

publive-image
ಡೆಂಗ್ಯೂ ರೋಗ ಲಕ್ಷಣಗಳು

ಇದ್ದಕ್ಕಿದಂತೆ ವಿಪರೀತ ಜ್ವರ, ಕಣ್ಣಿನ ಗುಡ್ಡೆಗಳ ಹಿಂಭಾಗದಲ್ಲಿ ನೋವು, ತೀವ್ರ

ತಲೆನೋವು, ಮೈ ಕೈ & ಕೀಲು ನೋವು, ವಾಕರಿಕೆ ವಾಂತಿ, ಇವುಗಳ ಜೊತೆಗೆ ತೀವ್ರ ಹೊಟ್ಟೆ ನೋವು

ಬಾಯಿ, ಮೂಗು & ವಸಡುಗಳಲ್ಲಿ ರಕ್ತಸ್ರಾವದ ಗುರುತುಗಳು

ಚರ್ಮದ ಮೇಲೆ ಅಲ್ಲಲ್ಲಿ ಕೆಂಪಾದ ಗಂಧೆಗಳು/ರಕ್ತಸ್ರಾವದ ಗುರುತುಗಳು ಕಪ್ಪು ಬಣ್ಣದ ಮಲ ವಿಸರ್ಜನೆ

ವಿಪರೀತ ಬಾಯಾರಿಕೆ

ತಣ್ಣನೆಯ ಬಿಳಿಚಿದ ಚರ್ಮ

ಜ್ಞಾನ ತಪ್ಪುವುದು

ರಕ್ತದ ಒತ್ತಡದ ಕುಸಿತ & ನಾಡಿ ಬಡಿತದ ಕುಸಿತ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

Advertisment