ಡೆಂಘೀ ಜ್ವರದ ಶಂಕೆ, ಬಾಲಕಿ ಸಾವು; ಮಗಳ ಶವದ ಮುಂದೆ ನಿಂತು ಸರ್ಕಾರಕ್ಕೆ ಕಣ್ಣೀರಿಡುತ್ತಲೇ ಮನವಿ ಮಾಡಿದ ತಂದೆ

author-image
AS Harshith
Updated On
ಡೆಂಘೀ ಜ್ವರದ ಶಂಕೆ, ಬಾಲಕಿ ಸಾವು; ಮಗಳ ಶವದ ಮುಂದೆ ನಿಂತು ಸರ್ಕಾರಕ್ಕೆ ಕಣ್ಣೀರಿಡುತ್ತಲೇ ಮನವಿ ಮಾಡಿದ ತಂದೆ
Advertisment
  • ಚಿಕಿತ್ಸೆ ಫಲಿಸದೆ ಆರು ವರ್ಷದ ಬಾಲಕಿ ಸಾವು
  • ಬಾಲಕಿಯ ಮೃತದೇಹದ ಮುಂದೆ ನಿಂತು ರಾಜ್ಯ ಸರ್ಕಾರಕ್ಕೆ ಮನವಿ
  • ನನಗೆ ಯಾವುದೇ ಸಹಾಯ ಬೇಡ, ಸರ್ಕಾರಿ ಆಸ್ಪತ್ರೆ ಅಭಿವೃದ್ಧಿ ಮಾಡಿ

ಚಿಕ್ಕಮಗಳೂರು: ಡೆಂಘೀ ಜ್ವರದ ಶಂಕೆ, ಚಿಕಿತ್ಸೆ ಫಲಿಸದೆ ಆರು ವರ್ಷದ ಬಾಲಕಿ ಸಾವನ್ನಪ್ಪಿದ ಘಟನೆ ಕಡೂರು ತಾಲೂಕಿನ ಸಖರಾಯಪಟ್ಟಣದಲ್ಲಿ ನಡೆದಿದೆ.

ಆರು ವರ್ಷದ ಸಾನಿಯಾ ಸಾವನ್ನಪ್ಪಿದ ಬಾಲಕಿ. ಶಿವಮೊಗ್ಗದ ಖಾಸಗಿ ಆಸ್ಪತ್ರೆಯಲ್ಲಿ ‌ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾಳೆ.

ಮಗಳನ್ನು ಕಳೆದುಕೊಂಡ ತಂದೆ ಆಸಿಫ್ ರಾಜ್ಯ ಸರ್ಕಾರದ ವಿರುದ್ಧ ಬೇಸರ ಹೊರ ಹಾಕಿದ್ದು, ಬಾಲಕಿಯ ಮೃತದೇಹದ ಮುಂದೆ ನಿಂತು ರಾಜ್ಯ ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ.

publive-image

ಇದನ್ನೂ ಓದಿ: ನನ್ನ ಮದುವೆಯಾಗು..! ಗಂಡ ಮತ್ತು 3 ಮಕ್ಕಳನ್ನು ತೊರೆದು ಪ್ರಿಯಕರನ ಮನೆ ಸೇರಿದ ಮಹಿಳೆ!

ನನಗೆ ಯಾವುದೇ ಸಹಾಯ ಬೇಡ, ಸರ್ಕಾರಿ ಆಸ್ಪತ್ರೆ ಅಭಿವೃದ್ಧಿ ಮಾಡಿ. ಡೆಂಗ್ಯೂ ಕಾಯಿಲೆಗೆ ಸರ್ಕಾರಿ ಆಸ್ಪತ್ರೆಗಳಲ್ಲಿ ಸೂಕ್ತ ಚಿಕಿತ್ಸೆ ಸಿಕ್ತಿಲ್ಲ. ಸರ್ಕಾರಿ ಆಸ್ಪತ್ರೆಯಲ್ಲಿ ಬಡವರಿಗೆ ಹೆಚ್ಚಿನ ಸೌಲಭ್ಯ ಸಿಗಬೇಕು. ನನ್ನ ಮಗಳಿಗಾದ ಸ್ಥಿತಿ ಯಾರಿಗೂ ಆಗುವುದು ಬೇಡ ಎಂದು ಬೇಸರ ಹೊರಹಾಕಿದ್ದಾರೆ.

ಇದನ್ನೂ ಓದಿ: ರೈತರಿಗೆ ಖುಷಿ ಸುದ್ದಿ! ಒಂದೇ ದಿನಕ್ಕೆ 5 ಸಾವಿರ ಕ್ಯೂಸೆಕ್ ಒಳ ಹರಿವು ಹೆಚ್ಚಳ! ಇಂದು KRS ಡ್ಯಾಂನ ನೀರಿನ ಮಟ್ಟ ಎಷ್ಟಿದೆ?

ಆಸಿಫ್ ಸರ್ಕಾರಿ ಆಸ್ಪತ್ರೆಗಳ ನಿರ್ಲಕ್ಷಕ್ಕೆ ಸರ್ಕಾರದ ವಿರುದ್ಧ ಅಸಮಾಧಾನ ಹೊರಹಾಕಿ ಕಣ್ಣೀರು ಸುರಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment