newsfirstkannada.com

Dengue Fever: ಪ್ಲೇಟ್ಲೆಟ್​​ ​ವೇಗವಾಗಿ ಹೆಚ್ಚಿಸಲು 5 ಹಣ್ಣುಗಳನ್ನು ಸೇವಿಸಿ.. ಆಮೇಲೆ ಮ್ಯಾಜಿಕ್​​ ನೋಡಿ

Share :

Published August 29, 2024 at 9:48am

    ಕರ್ನಾಟಕದಲ್ಲಿ ಹೆಚ್ಚಾಗುತ್ತಿವೆ ಡೆಂಗ್ಯೂ ಪ್ರಕರಣಗಳು

    ಜ್ವರ ಬಂದ್ರೆ ಪ್ಲೇಟ್ಲೆಟ್​​ ಸಮಸ್ಯೆ ಎದುರಿಸುತ್ತಾರೆ ಹಲವರು

    ಯಾವ ಹಣ್ಣು ಬೆಸ್ಟ್​? ಅದರಲ್ಲಿರೋ ಅಂಶಗಳ ಬಗ್ಗೆ ಮಾಹಿತಿ ಇಲ್ಲಿದೆ

ಡೆಂಗ್ಯೂ ಸದ್ಯ ರಾಜ್ಯದ ಜನರನ್ನು ಕಾಡುತ್ತಿರುವ ಬೇತಾಳ ಎಂಬಂತಾಗಿದೆ. ಕರ್ನಾಟಕದಲ್ಲಿ ಡೆಂಗ್ಯೂ ಪ್ರಕರಣಗಳು ಹೆಚ್ಚಾಗುತ್ತಿವೆ. ಸರ್ಕಾರ ಎಷ್ಟೇ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಂಡರು ಡೆಂಗ್ಯೂ ಪ್ರಕರಣಗಳು ದಿನದಿಂದ ದಿನಕ್ಕೆ ಏರುತ್ತಿದೆ.

ಮಾಹಿತಿ ಪ್ರಕಾರ, ಆಗಸ್ಟ್​ 12ರವರೆಗೆ ಕರ್ನಾಟಕದಲ್ಲಿ 22,442 ಡೆಂಗ್ಯೂ ಪ್ರಕರಣಗಳು ಬೆಳಕಿಗೆ ಬಂದಿವೆ. ಕಳೆದ ವರ್ಷವನ್ನು ಗಮನಿಸಿದರೆ ಈ ವರ್ಷ ಪ್ರಕರಣಗಳ ಸಂಖ್ಯೆ ಹೆಚ್ಚಿದೆ. ಡೆಂಗ್ಯೂ ಸೊಳ್ಳೆಯಿಂದ ಹರಡುವ ರೋಗವಾಗಿದ್ದರು, ಅದರ ಪರಿಣಾಮ ಕೊಂಚ ಜಾಸ್ತಿ ಇದೆ.

ಇದನ್ನೂ ಓದಿ: ಜಸ್ಟ್ 11 ನಿಮಿಷ ಅಷ್ಟೇ.. ನೀವು ಅಕಾಲಿಕ ಸಾವಿನಿಂದ ಬಚಾವ್ ಆಗ್ತೀರಿ.. ಹೆಂಗೆ ಅಂತೀರಾ ಈ ಸ್ಟೋರಿ ಓದಿ

ಡೆಂಗ್ಯೂ ಜ್ವರಕ್ಕೆ ತುತ್ತಾದ ಹಲವರು ಪ್ಲೇಟ್ಲೆಟ್​​ ಸಮಸ್ಯೆ ಎದುರಿಸುತ್ತಾರೆ. ಕೆಲವರು ಸಾವು-ಬದುಕಿನ ಮಧ್ಯೆ ಹೋರಾಡಿ ಬಂದ ಕತೆಗಳು ಇವೆ. ಆದರೆ ಡೆಂಗ್ಯೂ ಬಂದಾಗ ಕೆಲವು ಹಣ್ಣಗಳನ್ನು ಸೇವಿಸುವುದರಿಂದ ಕಡಿಮೆಯಾದ ಪ್ಲೇಟ್ಲೆಟ್ ಹೆಚ್ಚಿಸಿಕೊಳ್ಳಬಹುದು. ಅದಕ್ಕಾಗಿ ಯಾವ ಹಣ್ಣು ಸೇವಿಸೋದು ಬೆಸ್ಟ್​? ಎಂಬ ಕುರಿತಾಗಿ ಮಾಹಿತಿ ಇಲ್ಲಿದೆ.

ಪ್ಲೇಟ್ಲೆಟ್​​ ಹೆಚ್ಚಿಸಲು ಯಾವ ಹಣ್ಣು ಬೆಸ್ಟ್​?

ಕಿವಿ ಹಣ್ಣು

ಒಂದು ಬಾರಿ ಡೆಂಗ್ಯೂ ಜ್ವರ ಬಾಧಿಸಿದಾಗ ಪ್ಲೇಟ್ಲೆಟ್​​ ಕಡಿಮೆಯಾಗುತ್ತಾ ಬರುತ್ತದೆ. ಇಂತಹಸಮಯದಲ್ಲಿ ವೈದ್ಯರು ಕಿವಿ ಹಣ್ಣು ತಿನ್ನಲು ಸಲಹೆ ನೀಡುತ್ತಾರೆ. ಕಾರಣ ಇದರಲ್ಲಿ ಟಮಿನ್ ಸಿ ಇದೆ, ಇದು ದೇಹದ ಸೋಂಕಿನ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ಮಾತ್ರವಲ್ಲದೆ, ಪೋಷಕಾಂಶಗಳನ್ನು ಹೊಂದಿರುವ ಹಣ್ಣು ಇದಾಗಿದ್ದು, ಇದರಲ್ಲಿ ನಾರಿನಾಂಶವಿದೆ. ಹೀಗಾಗಿ ಜೀರ್ಣಕ್ರಿಯೆಯನ್ನು ಸುಲಭಗೊಳಿಸುತ್ತದೆ.

ದಾಳಿಂಬೆ

ಡೆಂಗ್ಯೂ ರೋಗಿಗಳು ದಾಳಿಂಬೆಯನ್ನು ಕೂಡ ಸವಿಯಬಹುದಾಗಿದೆ. ಇದನ್ನು ಸೇವಿಸುವುದರಿಂದ ವಿಟಮಿನ್ ಸಿ ಸಿಗುತ್ತದೆ. ಮಾತ್ರವಲ್ಲದೆ, ದೇಹದಲ್ಲಿ ಕೆಂಪು ರಕ್ತ ಕಣಗಳು ಹೆಚ್ಚುತ್ತವೆ. ದಾಳಿಂಬೆ ದೇಹದಲ್ಲಿ ರಕ್ತ ಮತ್ತು ಹಿಮೋಗ್ಲೋಬಿನ್ ಅನ್ನು ಹೆಚ್ಚಿಸಲು ಪ್ರಯೋಜನಕಾರಿಯಾಗಿದೆ.ಆಯಾಸ ಮತ್ತು ದೌರ್ಬಲ್ಯವನ್ನು ನಿವಾರಿಸುವ ಶಕ್ತಿ ದಾಳಿಂಬೆಗಿದೆ.

ಪಪ್ಪಾಯಿ

ಪಪ್ಪಾಯಿ ಹಣ್ಣನ್ನು ಡೆಂಗ್ಯೂ ರೋಗಿಗಳು ಸೇವಿಸಿದರೆ ಉತ್ತಮ. ಏಕೆಂದರೆ ಇದರಲ್ಲಿ ವಿಟಮಿನ್ ಸಿ ಮತ್ತು ವಿಟಮಿನ್ ಎ ಇದೆ. ಕೆಲವರು ಪಪ್ಪಾಯಿ ಎಲೆಯ ರಸವನ್ನು ಡೆಂಗ್ಯೂ ರೋಗಿಗಳು ಸೇವಿಸಿ ಎಂದು ಸಲಹೆ ನೀಡುತ್ತಾರೆ. ಈ ಹಣ್ಣಿನಲ್ಲಿ ನಾರಿನಂಶ ಹೇರಳವಾಗಿರುವ ಕಾರಣ ಡೆಂಗ್ಯೂ ರೋಗಿಗಳು ವೇಗವಾಗಿ ಚೇತರಿಸಿಕೊಳ್ಳಲು ಪಪ್ಪಾಯಿ ತಿನ್ನಲು ಸಲಹೆ ನೀಡುತ್ತಾರೆ.

ಇದನ್ನೂ ಓದಿ: ಒಂದೊಂದು ಪ್ರೀತಿಗೆ ಒಂದೊಂದು ಬೆಳಗು.. ಮೆದುಳಲ್ಲಿ ಮಿನುಗುತ್ತೆ ಪ್ರೀತಿಯ ಪ್ರಭೆ; ಏನಿದು ಹೊಸ ಅಧ್ಯಯನ?

ಸೇಬು

ಸೇಬು ಎಲ್ಲಾ ದೃಷ್ಟಿಯಲ್ಲೂ ದೇಹಕ್ಕೆ ಉತ್ತಮ. ಇದು ಜೀವಸತ್ವಗಳು ಮತ್ತು ಖನಿಜಗಳನ್ನು ಹೊಂದಿರುವ ಕಾರಣ ವೇಗವಾಗಿ ಜ್ವರದಿಂದ ಚೇತರಿಸಿಕೊಳ್ಳಲು ಸಹಾಯ ಮಾಡುತ್ತದೆ.

ಕಿತ್ತಳೆ ಮತ್ತು ಸೀಬೆ

ವೈದ್ಯರು ಡೆಂಗ್ಯೂ ರೋಗಿಗಳಿಗೆ ಕಿತ್ತಳೆ ಮತ್ತು ಪೇರಲ ಸವಿಯಲು ಹೇಳುತ್ತಾರೆ. ಕಾರಣ ಇದರಲ್ಲಿ ವಿಟಮಿನ್ ಸಿ ಸಮೃದ್ಧವಾಗಿದೆ. ಹಾಗಾಗಿ ಆರೋಗ್ಯ ದೃಷ್ಟಿಯಲ್ಲಿ ಈ ಎರಡು ಹಣ್ಣಗಳು ಬೆಸ್ಟ್​.

ಇದನ್ನೂ ಓದಿ: ಮೆಡಿಕಲ್​ ಫೀಲ್ಡ್​​ಗೂ ಲಗ್ಗೆ ಇಟ್ಟ AI ಮ್ಯಾಜಿಕ್ ಏನು? ಸಿಲಿಕಾನ್‌ ಸಿಟಿಯಲ್ಲೊಂದು ವಿಶೇಷ ಕಾರ್ಯಕ್ರಮ

ಇನ್ನು ಕಿತ್ತಳೆ ಮತ್ತು ಪೇರಲದಲ್ಲಿ ಫೈಬರ್ ಮತ್ತು ವಿಟಮಿನ್ ಸಿ ಯಿಂದ ಸಮೃದ್ಧವಾಗಿದೆ. ಈ ಹಣ್ಣುಗಳು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ. ಪ್ಲೇಟ್ಲೆಟ್​ ಹೆಚ್ಚಿಸಲು ಈ ಹಣ್ಣುಗಳು ಸಹಾಯ ಮಾಡುತ್ತವೆ. ಆದರೆ ಸರಿಯಾದ ಪ್ರಮಾಣದಲ್ಲಿ ಸೇವಿಸುವ ಮೂಲಕ ಆರೋಗ್ಯ ಸುಧಾರಿಸಿಕೊಳ್ಳಬಹುದಾಗಿದೆ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Dengue Fever: ಪ್ಲೇಟ್ಲೆಟ್​​ ​ವೇಗವಾಗಿ ಹೆಚ್ಚಿಸಲು 5 ಹಣ್ಣುಗಳನ್ನು ಸೇವಿಸಿ.. ಆಮೇಲೆ ಮ್ಯಾಜಿಕ್​​ ನೋಡಿ

https://newsfirstlive.com/wp-content/uploads/2024/08/dengue.jpg

Load More