ಇಂಜಿನಿಯರಿಂಗ್ ಮಾಡುವ ಕನಸು ಹೊತ್ತುಕೊಂಡಿದ್ದ ವಿದ್ಯಾರ್ಥಿನಿ ಡೆಂಘೀ ಜ್ವರಕ್ಕೆ ಬಲಿ

author-image
AS Harshith
Updated On
ಇಂಜಿನಿಯರಿಂಗ್ ಮಾಡುವ ಕನಸು ಹೊತ್ತುಕೊಂಡಿದ್ದ ವಿದ್ಯಾರ್ಥಿನಿ ಡೆಂಘೀ ಜ್ವರಕ್ಕೆ ಬಲಿ
Advertisment
  • ಜ್ವರದಿಂದ ಬಳಲುತ್ತಿದ್ದ 18 ವರ್ಷದ ಯುವತಿ
  • ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಳು
  • ಡೆಂಘೀಗೆ ಮಗಳನ್ನು ಕಳೆದುಕೊಂಡ ಪೋಷಕರು ಕಣ್ಣೀರು

ದಾವಣಗೆರೆ: ಡೆಂಘೀ ಜ್ವರಕ್ಕೆ ವಿದ್ಯಾರ್ಥಿನಿ ಬಲಿಯಾದ ಘಟನೆ ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಹನುಮನಹಳ್ಳಿಯಲ್ಲಿ ನಡೆದಿದೆ. ಅನುಷಾ (18) ಸಾವನ್ನಪ್ಪಿದ ಯುವತಿ.

ಅನುಷಾ ಜ್ವರದಿಂದ ಬಳಲುತ್ತಿದ್ದಳು. ಕಳೆದ ಶನಿವಾರ ಮಣಿಪಾಲ್ ಆಸ್ಪತ್ರೆಗೆ ದಾಖಲು ಆಗಿದ್ದಳು. ಆದರೆ ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ಯುವತಿ ಸಾವನ್ನಪ್ಪಿದ್ದಾಳೆ.

ಇದನ್ನೂ ಓದಿ: ಹಾವೇರಿ: ಅಪಘಾತದಲ್ಲಿ ಸತ್ತವರಿಗೆ 15-20 ಲಕ್ಷ ಹಣ ಘೋಷಣೆ ಮಾಡಿ.. ಇಲ್ಲವಾದ್ರೆ ಅಂತ್ಯಕ್ರಿಯೆ ಮಾಡೊಲ್ಲ

ಪಿಯುಸಿ ಮುಗಿಸಿದ ಯುವತಿ ಅನುಷಾ ಇಂಜಿನಿಯರಿಂಗ್ ಮಾಡುವ ಕನಸು ಹೊಂದಿದ್ದಳು. ಆದರಿಂದು ಚಿಕಿತ್ಸೆ ಫಲಿಸದೆ ಅನುಷಾ ಸಾವನ್ನಪ್ಪಿದ್ದಾಳೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment