newsfirstkannada.com

ಸಿಗ್ನಲ್ ಕೈಕೊಟ್ಟಿದ್ದಕ್ಕೆ ಹಳಿ ತಪ್ಪಿದ ರೈಲಿನ 4 ಬೋಗಿಗಳು.. ತಪ್ಪಿದ ದೊಡ್ಡ ಅನಾಹುತ

Share :

Published March 15, 2024 at 8:54am

  ಮಾಹಿತಿ ತಿಳಿದು ಸ್ಥಳಕ್ಕೆ ದೌಡಾಯಿಸಿದ ರೈಲ್ವೆ ಹಿರಿಯ ಇಂಜಿನೀಯರ್ಸ್

  ಹಳಿ ತಪ್ಪಿದ ಗೂಡ್ಸ್ ಬೋಗಿಗಳನ್ನ ಮೇಲೆತ್ತುವ ಕಾರ್ಯಾಚರಣೆ ಪ್ರಾರಂಭ

  ಗೂಡ್ಸ್​ ರೈಲು ವಸ್ತುಗಳನ್ನ ಹೊತ್ತುಕೊಂಡು ಎಲ್ಲಿಂದ ಎಲ್ಲಿಗೆ ಹೋಗುತ್ತಿತ್ತು.?

ಕಲಬುರಗಿ: ರಾತ್ರಿ ವೇಳೆ ಸಿಗ್ನಲ್ ಕೈಕೊಟ್ಟಿದ್ದರಿಂದ ಗೂಡ್ಸ್ ರೈಲಿನ 4 ಬೋಗಿಗಳು ಹಳಿ ತಪ್ಪಿದ್ದು ಭಾರೀ ಅನಾಹುತವೊಂದು ತಪ್ಪಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಈ ಘಟನೆಯು ಚಿತ್ತಾಪುರ ತಾಲೂಕಿನ ವಾಡಿ ರೈಲ್ವೆ ಜಂಕ್ಷನ್‌ನಲ್ಲಿ ನಡೆದಿದೆ.

ಹೈದರಾಬಾದ್​ನಿಂದ ಮುಂಬಯಿಗೆ ಗೂಡ್ಸ್​ ರೈಲು ಕಾಂಕ್ರೀಟ್‌ ಕಲ್ಲುಗಳನ್ನು ಸಾಗಿಸುತ್ತಿತ್ತು. ಈ ವೇಳೆ ವಾಡಿ ಬಳಿ ಬರುತ್ತಿದ್ದಂತೆ ಜಂಕ್ಷನ್​ನಲ್ಲಿ ಸಿಗ್ನಲ್ ಕೈಕೊಟ್ಟಿದ್ದರಿಂದ ರೈಲಿನ 4 ಬೋಗಿಗಳು ಹಳಿ ತಪ್ಪಿದೆ. ಅದೃಷ್ಟವಶಾತ್ ಯಾವುದೇ ರೈಲು ಬಾರದ ಕಾರಣ, ಸ್ಥಳದಲ್ಲಿ ಯಾರು ಇಲ್ಲದಿದ್ದರಿಂದ ದೊಡ್ಡ ಅನಾಹುತವೊಂದು ತಪ್ಪಿದೆ. ಇನ್ನು ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ರೈಲ್ವೆಯ ಹಿರಿಯ ಇಂಜಿನೀಯರ್‌ಗಳು ದೌಡಾಯಿಸಿ ಪರಿಶೀಲನೆ ನಡೆಸಿದರು. ಹಳಿ ತಪ್ಪಿರುವ ಬೋಗಿಗಳನ್ನು ಮೇಲೆತ್ತುವ ಕಾರ್ಯಾಚರಣೆ ಮಾಡಲಾಗುತ್ತಿದೆ. ವಾಡಿ ರೈಲ್ವೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸಿಗ್ನಲ್ ಕೈಕೊಟ್ಟಿದ್ದಕ್ಕೆ ಹಳಿ ತಪ್ಪಿದ ರೈಲಿನ 4 ಬೋಗಿಗಳು.. ತಪ್ಪಿದ ದೊಡ್ಡ ಅನಾಹುತ

https://newsfirstlive.com/wp-content/uploads/2024/03/KLB_TRAIN.jpg

Load More