ಅಶ್ವಿನಿ ಪುನೀತ್ ವಿರುದ್ಧ ಅವಹೇಳನಕಾರಿ ಪೋಸ್ಟ್; ಇಬ್ಬರು ಸ್ಟಾರ್ ನಟರ ಹೆಸರಲ್ಲಿ ಅಸಲಿಗೆ ನಡೆದಿದ್ದೇನು?

author-image
admin
Updated On
VIDEO: ಪುನೀತ್ ರಾಜ್‌ ಕುಮಾರ್ 20 ವರ್ಷದ ಕನಸು ಈಗ ನನಸು; ಖುಷಿ ಸುದ್ದಿ ಹಂಚಿಕೊಂಡ ಅಶ್ವಿನಿ!
Advertisment
  • RCB ಸೋಲಿಗೆ ಅಶ್ವಿನಿ ಪುನೀತ್ ವಿರುದ್ಧ ಅವಹೇಳನಕಾರಿ ಪೋಸ್ಟ್
  • ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮಕ್ಕೆ ಪುನೀತ್ ಅಭಿಮಾನಿಗಳ ಆಗ್ರಹ
  • ಪೋಸ್ಟ್ ಮಾಡಿದ ಮೇಲೆ ಗಜಪಡೆ ಅನ್ನೋ ಪೇಜ್‌ ಬದಲಾಗಿದ್ದು ಯಾಕೆ?

ಬೆಂಗಳೂರು: ಈ ಬಾರಿಯ ಐಪಿಎಲ್‌ನಲ್ಲಿ ಈವರೆಗೂ RCB ಆಡಿರೋ 4 ಪಂದ್ಯಗಳಲ್ಲಿ 3ರಲ್ಲಿ ಹೀನಾಯವಾಗಿ ಸೋತಿದೆ. ಈ ಸೋಲಿಗೆ ಅಶ್ವಿನಿ ಪುನೀತ್ ರಾಜ್‌ಕುಮಾರ್‌ ವಿರುದ್ಧ ಅವಹೇಳನಕಾರಿ ಪೋಸ್ಟ್ ಮಾಡಿರೋದು ಭಾರೀ ಚರ್ಚೆಗೆ ಗ್ರಾಸವಾಗಿದೆ. ಸ್ಟಾರ್‌ ನಟರ ಹೆಸರಲ್ಲಿ ಅವಹೇಳನಕಾರಿ ಪೋಸ್ಟ್ ಮಾಡಿರೋದು ಪುನೀತ್ ರಾಜ್‌ಕುಮಾರ್ ಅವರ ಅಪ್ಪಟ ಅಭಿಮಾನಿಗಳ ಕೋಪಕ್ಕೆ ಕಾರಣವಾಗಿದೆ.

ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರ ವಿರುದ್ಧ ಅವಹೇಳನಕಾರಿ ಪೋಸ್ಟ್ ಹಾಕಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಅಪ್ಪು ಅಭಿಮಾನಿಗಳು ಒತ್ತಾಯಿಸಿದ್ದಾರೆ. ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಲಾಗಿದ್ದು, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹಿಸಲಾಗಿದೆ.

publive-image

ಅಸಲಿ ನಡೆದಿದ್ದೇನು?
ಕಳೆದ ಮಾರ್ಚ್ 19ರಂದು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್‌ಸಿಬಿ ತಂಡದ ಜೆರ್ಸಿ ಬಿಡುಗಡೆ ಮಾಡುವ ಅನ್‌ಬಾಕ್ಸ್ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಇವೆಂಟ್‌ಗೆ ಅಶ್ವಿನಿ ಪುನೀತ್ ಅವರನ್ನು ಕರೆಸಿದ್ದು RCB ಜೆರ್ಸಿ ಅನಾವರಣಗೊಳಿಸಲಾಗಿತ್ತು. ಅಶ್ವಿನಿ ಅವರು ಜೆರ್ಸಿ ಅನಾವರಣಗೊಳಿಸಿದ್ದಕ್ಕೆ RCB ಸೋಲುತ್ತಿದೆ ಎನ್ನುವ ರೀತಿಯಲ್ಲಿ ಗಜಪಡೆ ಹೆಸರಿನ ಫೇಸ್​ಬುಕ್ ಪೇಜ್​ನಲ್ಲಿ ನಿಂದನಾತ್ಮಕ ಪೋಸ್ಟ್ ಮಾಡಲಾಗಿದೆ. ಈ ಪೋಸ್ಟ್​ನಿಂದ ಸಿಡಿದೆದ್ದ ಪುನೀತ್ ರಾಜ್​ಕುಮಾರ್ ಫ್ಯಾನ್ಸ್ ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಇದನ್ನೂ ಓದಿ: ಅಶ್ವಿನಿ ಪುನೀತ್ ರಾಜ್‌ಕುಮಾರ್ ವಿರುದ್ಧ ಅವಹೇಳನಕಾರಿ ಪೋಸ್ಟ್‌; ಸಿಡಿದೆದ್ದ ಅಪ್ಪು ಫ್ಯಾನ್ಸ್‌ ಮಾಡಿದ್ದೇನು?

publive-image

ಸ್ಟಾರ್ ನಟರ ಹೆಸರಲ್ಲಿ ಅಕೌಂಟ್‌!
RCB ಇನ್‌ಬಾಕ್ಸ್ ಇವೆಂಟ್‌ಗೆ ಅಶ್ವಿನಿ ಪುನೀತ್‌ ರಾಜ್‌ಕುಮಾರ್ ಅವರನ್ನು ಕರೆಯಿಸಿದ್ದಕ್ಕೆ ಮೊದಲು ಗಜಪಡೆ ಅನ್ನೋ ಪೇಜ್‌ನಲ್ಲಿ ಅವಹೇಳನಕಾರಿ ಪೋಸ್ಟ್ ಮಾಡಲಾಗಿತ್ತು. ಇದು ನಟ ದರ್ಶನ್ ಅವರ ಅಭಿಮಾನಿಗಳು ಮಾಡಿದ್ದಾರೆ ಅನ್ನೋ ಆರೋಪ ಸೋಷಿಯಲ್ ಮೀಡಿಯಾದಲ್ಲಿ ಕೇಳಿ ಬಂತು. ಇದಾದ ಬಳಿಕ ಅದೇ ಫೇಸ್‌ಬುಕ್ ಪೇಜ್‌ ಅನ್ನು ಸುದೀಪ್ ಅಭಿಮಾನಿ ಎಂದು ಬದಲಾಯಿಸಲಾಗಿದೆ ಎನ್ನಲಾಗಿದೆ.

publive-image

ದರ್ಶನ್, ಸುದೀಪ್ ಹೆಸರಲ್ಲಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರ ವಿರುದ್ಧ ಯಾರೋ ಪೋಸ್ಟ್ ಮಾಡಿದ್ದು ವಿವಾದಕ್ಕೆ ಕಾರಣವಾಗಿದೆ. ಕನ್ನಡದ ಸ್ಟಾರ್ ನಟರಿಗೂ ಇದಕ್ಕೂ ಯಾವುದೇ ಸಂಬಂಧವಿಲ್ಲ. ಆದರೆ ಯಾರೋ ಮಾಡಿದ ತಪ್ಪಿಗೆ ಅಭಿಮಾನಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ನಿಜವಾದ ತಪ್ಪಿತಸ್ಥರನ್ನು ಕಂಡು ಹಿಡಿದು ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಲಾಗುತ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment