newsfirstkannada.com

ರೇಣುಕಾಸ್ವಾಮಿ ಕೊಲೆ ಕೇಸ್‌ಗೆ ಹೊಸ ಟ್ವಿಸ್ಟ್‌.. ಶೆಡ್‌ನಲ್ಲಿ ಆರೋಪಿಗಳು ಶವ ಎಳೆದೊಯ್ಯೋ ದೃಶ್ಯ ಸೆರೆ!

Share :

Published July 20, 2024 at 6:00pm

    ದಿನ ಕಳೆದಂತೆ ಹೊಸ ಟ್ವಿಸ್ಟ್​ ಪಡೆದುಕೊಳ್ಳುತ್ತಿದೆ ರೇಣುಕಾಸ್ವಾಮಿ ಕೊಲೆ ಕೇಸ್ ​

    ರೇಣುಕಾಸ್ವಾಮಿ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದ ಆರೋಪಿಗಳು

    ರೇಣುಕಾಸ್ವಾಮಿ ಮೃತದೇಹ ಎಳೆದು ತರೋ ವಿಡಿಯೋ ಸಿಸಿಟಿವಿಯಲ್ಲಿ ಸೆರೆ

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸ್ ದಿನ ಕಳೆದಂತೆ ಹೊಸ, ಹೊಸ ಟ್ವಿಸ್ಟ್​ ಪಡೆದುಕೊಳ್ಳುತ್ತಿದೆ. ​ಪವಿತ್ರಾ ಗೌಡ ಅವರಿಗೆ ಅಶ್ಲೀಲ ಸಂದೇಶ ಕಳುಹಿಸಿದ್ದ ಎಂಬ ಕಾರಣಕ್ಕೆ ದರ್ಶನ್​ ಅಂಡ್​ ಗ್ಯಾಂಗ್​​ ಪ್ಲಾನ್​ ಮಾಡಿ ರೇಣುಕಾಸ್ವಾಮಿಯನ್ನು ಬೆಂಗಳೂರಿಗೆ ಕರೆಸಿಕೊಂಡಿದ್ದರು.

ಇದನ್ನೂ ಓದಿ: 40 ದಿನಕ್ಕೆ 31 ಹತ್ಯೆ, 300 ಜನರ ಮೇಲೆ ಹಲ್ಲೆ.. ಆಂಧ್ರದಲ್ಲಿ ಮತ್ತೆ ರಕ್ತ ರಾಜಕೀಯ? ಸ್ಫೋಟಕ ಮಾಹಿತಿ ಇಲ್ಲಿದೆ

ಆರ್​ ಆರ್​ ನಗರದ ಪಟ್ಟಣಗೆರೆ ಶೆಡ್ ರೇಣುಕಾಸ್ವಾಮಿಯನ್ನು ಕರೆಸಿಕೊಂಡು ಅತಿ ಕ್ರೂರವಾಗಿ ಕೊಲೆ ಮಾಡಿ ಆತನ ದೇಹವನ್ನು ಬಿಸಾಡಿ ಹೋಗಿದ್ದರು. ಹೀಗಾಗಿ ಈ ಕೇಸ್ ​ಬಗ್ಗೆ ಅನ್ನಪೂರ್ಣೇಶ್ವರಿ ಪೊಲೀಸ್ ಅಧಿಕಾರಿಗಳು ತೀವ್ರ ವಿಚಾರಣೆ ನಡೆಸಿ ಒಟ್ಟು 17 ಆರೋಪಿಗಳನ್ನು ಜೈಲಿಗಟ್ಟಿದ್ದರು. ಸದ್ಯ 13 ಆರೋಪಿಗಳು ಪರಪ್ಪನ ಅಗ್ರಾಹಾರ ಜೈಲಿನಲ್ಲಿದ್ದಾರೆ. ಈಗಾಗಲೇ ಉಳಿದ 4 ಆರೋಪಿಗಳನ್ನು ತುಮಕೂರು ಜೈಲಿಗೆ ಶಿಫ್ಟ್​ ಮಾಡಿದ್ದಾರೆ.

ಇದೀಗ ಪಟ್ಟಣಗೆರೆ ಶೆಡ್​ಗೆ ರೇಣುಕಾಸ್ವಾಮಿಯನ್ನು ತಂದು ಕೊಲೆ ಮಾಡಿದ್ದ ಸಿಸಿಟಿವಿ ದೃಶ್ಯಗಳನ್ನು ರಿಟ್ರೀವ್ ಮಾಡಲು ಪೊಲೀಸರು ಪ್ರಯತ್ನಿಸುತ್ತಿದ್ದಾರೆ. ಹೌದು, ಪಟ್ಟಣಗೆರೆ ಶೆಡ್​ನ ಸಿಸಿಟಿಯವಲ್ಲಿ ಶವ ಎಳೆದೊಯ್ಯೋ ದೃಶ್ಯ ಇತ್ತು. ಆದರೆ, ಸಿಸಿಟಿವಿ ವಿಡಿಯೋನ ಆರೋಪಿಗಳು ಡಿಲೀಟ್ ಮಾಡಿದ್ದಾರೆ. ಪ್ರಕರಣದಲ್ಲಿ ಮಹತ್ವದ ಸಾಕ್ಷ್ಯವನ್ನೇ ಪ್ಲಾನ್ ಮಾಡಿ ಆರೋಪಿಗಳು ನಾಶ ಮಾಡಿದ್ದಾರೆ. ಸದ್ಯ ಪೊಲೀಸರು ಸಿಸಿಟಿವಿ ದೃಶ್ಯಗಳನ್ನು ರಿಟ್ರೀವ್ ಮಾಡಲು ಪ್ರಯತ್ನಿಸುತ್ತಿದ್ದಾರೆ.

ರೇಣುಕಾಸ್ವಾಮಿ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ ಆರೋಪಿಗಳು ನಂತರ ಶೆಡ್​ನಿಂದ ಎಳೆದುಕೊಂಡು ಹೋಗಿದ್ದರು. ಈ ವೇಳೆ ನಿತ್ರಾಣಾಗಿದ್ದ ರೇಣುಕಾಸ್ವಾಮಿ ಮೇಲೆ ನಿಖಿಲ್, ಪವನ್, ರಾಘವೇಂದ್ರ ಮತ್ತೆ ಹಲ್ಲೆ ಮಾಡಿದ್ದರು. ಬಳಿಕ ಶೆಡ್​ನಲ್ಲೇ ರೇಣುಕಾಸ್ವಾಮಿ ಕೊನೆಯುಸಿರೆಳೆದಿದ್ದ. ನಂತರ ಶವವನ್ನ ನಿಖಿಲ್, ಪವನ್ ಹಾಗೂ ಇನ್ನಿತರ ಆರೋಪಿಗಳು ಸಾಗಿಸಿದ್ದರು. ಶೆಡ್​ನ ಒಂದು ರೂಮ್​ನಿಂದ ಮತ್ತೊಂದು ರೂಮ್​ಗೆ ಮೃತದೇಹವನ್ನು ಸಾಗಾಟ ಮಾಡಿದ್ದಾರೆ. ಅದೇ ರೂಮ್​ನಲ್ಲಿದ್ದ ಸಿಸಿಟಿವಿಯಲ್ಲಿ ಆರೋಪಿಗಳ ಚಲನವಲನ ಸೆರೆಯಾಗಿದೆ. ರೇಣುಕಾಸ್ವಾಮಿ ಮೃತದೇಹ ಎಳೆದು ತರೋ ವಿಡಿಯೋ ಕ್ಲಿಯರ್ ಆಗಿ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇದನ್ನ ಗಮನಿಸಿದ್ದ ಆರೋಪಿ ವಿನಯ್ ಸಿಸಿಟಿವಿ ಫುಟೇಜ್ ಡಿಲೀಟ್ ಮಾಡಿದ್ದ. ಸದ್ಯ ಪೊಲೀಸ್ ಅಧಿಕಾರಿಗಳು ಸಿಸಿಟಿವಿ ಡಿವಿಆರ್ ಕೂಡ ರಿಟ್ರಿವ್​ಗೆ ರವಾನೆ ಮಾಡಿದ್ದಾರೆ. ವಿಡಿಯೋ ರಿಟ್ರೀವ್ ಆದ್ರೆ ಪ್ರಕರಣಕ್ಕೆ ಮತ್ತೊಂದು ಪ್ರಬಲ ಸಾಕ್ಷ್ಯ ಸಿಕ್ಕಂತೆ ಆಗುತ್ತದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ರೇಣುಕಾಸ್ವಾಮಿ ಕೊಲೆ ಕೇಸ್‌ಗೆ ಹೊಸ ಟ್ವಿಸ್ಟ್‌.. ಶೆಡ್‌ನಲ್ಲಿ ಆರೋಪಿಗಳು ಶವ ಎಳೆದೊಯ್ಯೋ ದೃಶ್ಯ ಸೆರೆ!

https://newsfirstlive.com/wp-content/uploads/2024/06/Darshan-19-1.jpg

Load More