/newsfirstlive-kannada/media/post_attachments/wp-content/uploads/2025/07/CM_SIDDARAMAIAH.jpg)
ಬೆಂಗಳೂರು: ದೇವನಹಳ್ಳಿ ಭೂಸ್ವಾಧೀನ ಸಂಬಂಧ ಸಿಎಂ ಸಿದ್ದರಾಮಯ್ಯ ಅವರು ರೈತರ ಮನವೊಲಿಸಲು ಮಹತ್ವದ ಸಭೆ ನಡೆಸುತ್ತಿದ್ದಾರೆ. ವಿಧಾನಸೌಧದಲ್ಲಿ ಈ ಸಭೆಗೂ ಮೊದಲು ತಾವು ಬೆಳೆದಂತ ಮಾವು, ಹೂವು, ಬಾಳೆ, ದ್ರಾಕ್ಷಿ, ತರಕಾರಿಗಳನ್ನು ರೈತರು ತಮ್ಮ ಕೈಯಾರೆ ಸಿಎಂ ಸಿದ್ದರಾಮಯ್ಯರಿಗೆ ನೀಡಿದ್ದಾರೆ.
ದೇವನಹಳ್ಳಿ ತಾಲೂಕಿನ ಚನ್ನರಾಯಪಟ್ಟಣ ಹೋಬಳಿ ವ್ಯಾಪ್ತಿಯ 13 ಗ್ರಾಮಗಳಲ್ಲಿ ಭೂಸ್ವಾಧೀನ ಮಾಡಬಾರದು ಎಂದು ದೇವನಹಳ್ಳಿ ರೈತರು ವಿರೋಧ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಭೂಸ್ವಾಧೀನ ಸಂಬಂಧ ರೈತರ ಮನವೊಲಿಕೆ ಮಾಡಲು ಸಿಎಂ ಮುಂದಾಗಿದ್ದು ಸಭೆ ಕರೆದಿದ್ದಾರೆ. ಈ ಸಭೆಗೆ ನಟ ಪ್ರಕಾಶ್ ರಾಜ್, ಎಸ್.ಆರ್ ಹಿರೇಮಠ್, ಮಾವಳ್ಳಿ ಶಂಕರ್ ಸೇರಿದಂತೆ ಹಲವರ ಆಗಮಿಸಿದ್ದಾರೆ. ಸಭೆಗೂ ಮೊದಲು ಹೂವು, ಹಣ್ಣು, ತರಕಾರಿಗಳನ್ನು ಸಿಎಂಗೆ ನೀಡಲಾಯಿತು. ಇದರಿಂದ ಬಂಗಾರದಂತ ಫಲ ಕೊಡುವ ಭೂಮಿನ, ಏರೋಸ್ಪೇಸ್ ಪಾರ್ಕ್‌ಗೆ ನೀಡುತ್ತಿರುವುದು ಎಷ್ಟು ಸರಿ ಎನ್ನುವಂತೆ ರೈತರು ಈ ಮೂಲಕ ಆಕ್ರೋಶ ವ್ಯಕ್ತಪಡಿಸಿದಂತೆ ಇತ್ತು.
ಏರೋಸ್ಪೇಸ್ ಪಾರ್ಕ್‌ಗೆ 1777 ಎಕರೆ ಭೂಸ್ವಾಧೀನಕ್ಕೆ ದೇವನಹಳ್ಳಿ ರೈತರಿಂದ ಭಾರೀ ವಿರೋಧ ಹಿನ್ನೆಲೆಯಲ್ಲಿ ಸಭೆ ನಡೆಸಲಾಗುತ್ತಿದೆ. ಉದ್ದೇಶಿತ ಹೈಟೆಕ್ ಡಿಫೆನ್ ಮತ್ತು ವಿರೋಸ್ಪೇಸ್ ಪಾರ್ಕ್ ಅಭಿವೃದ್ಧಿಗಾಗಿ ದೇವನಹಳ್ಳಿ ತಾಲೂಕಿನ ಚನ್ನರಾಯಪಟ್ಟಣ ಹೋಬಳಿ ವ್ಯಾಪ್ತಿಯ 13 ಗ್ರಾಮಗಳಲ್ಲಿ ಭೂಸ್ವಾಧೀನ ಪ್ರಕ್ರಿಯೆಗೆ ಸರ್ಕಾರ ಮುಂದಾಗಿದೆ.
ಇದನ್ನೂ ಓದಿ:ಮೈಸೂರು ದಸರಾ ಉದ್ಘಾಟಿಸೋರು ಯಾರು..? HD ದೇವೇಗೌಡ, ದ್ರಾವಿಡ್, ಅನಿಲ್ ಕುಂಬ್ಳೆ ಹೆಸರು
ಇದನ್ನ ಖಂಡಿಸಿ ಪ್ರತಿಭಟಿಸುತ್ತಿರುವ ರೈತರ ಮನವೊಲಿಸಲು ಸಿಎಂ ಸಿದ್ದರಾಮಯ್ಯ ಇಂದು ಮುಂದಾಗಿದ್ದಾರೆ. ನಿನ್ನೆಯಷ್ಟೇ ರೈತರೊಂದಿಗಿನ ಸಭೆಗೆ ಸಂಬಂಧಿಸಿದಂತೆ ಡಿಸಿಎಂ ಡಿ.ಕೆ ಶಿವಕುಮಾರ್, ಸಚಿವ ಹೆಚ್.ಕೆ.ಪಾಟೇಲ್, ಎಂ.ಬಿ. ಪಾಟೀಲ್, ಕೆ.ಎಚ್ ಮುನಿಯಪ್ಪ, ಬಿ.ಎಸ್ ಸುರೇಶ್, ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ಅವರೊಂದಿಗೆ ಸಿಎಂ ಸಿದ್ದರಾಮಯ್ಯ ಅವರು ಸಭೆ ನಡೆಸಿದ್ದಾರೆ. ಅಧಿಕಾರಿಗಳಿಂದ ಯೋಜನೆ ಮತ್ತು ರೈತರ ಮನವೊಲಿಕೆಗೆ ಯಾವೆಲ್ಲ ಕ್ರಮ ಕೈಗೊಳ್ಳಬಹುದು ಎಂಬ ಬಗ್ಗೆ ಸಿಎಂ ಮಾಹಿತಿ ಪಡೆದಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ