2 ವರ್ಷ ದೊಡ್ಡ ಹುಡುಗಿಯನ್ನ ಪ್ರೀತಿ ಮಾಡಿದ್ದೇ ತಪ್ಪಾ? ದೇವನಹಳ್ಳಿಯಲ್ಲಿ ಪ್ರೇಮಿ ದುರಂತ ಅಂತ್ಯ!

author-image
admin
Updated On
2 ವರ್ಷ ದೊಡ್ಡ ಹುಡುಗಿಯನ್ನ ಪ್ರೀತಿ ಮಾಡಿದ್ದೇ ತಪ್ಪಾ? ದೇವನಹಳ್ಳಿಯಲ್ಲಿ ಪ್ರೇಮಿ ದುರಂತ ಅಂತ್ಯ!
Advertisment
  • ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದ ಪ್ರೀತಂ ಲವ್ ಸ್ಟೋರಿ!
  • MBBS ವ್ಯಾಸಂಗ ಮಾಡುತ್ತಿದ್ದ ಹುಡುಗಿಯ ಜೊತೆ ಪ್ರೀತಿಯಲ್ಲಿದ್ದ
  • ವಾರ್ನಿಂಗ್ ಮಾಡಿದ್ರು ಪ್ರೀತಿ ಮುಂದುವರೆಸಿದ್ದ ಯುವಕನ ದುರಂತ

ಬೆಂಗಳೂರು: ತನಗಿಂತ 2 ವರ್ಷ ದೊಡ್ಡವಳಾದ ಹುಡುಗಿಯನ್ನ ಪ್ರೀತಿ ಮಾಡಿದ್ದಕ್ಕೆ ಯುವಕನ ಕೊಲೆ ಮಾಡಿರೋ ಪ್ರಕರಣ ದೇವನಹಳ್ಳಿ ಹೊರವಲಯದ ನೀರುಗುಂಟೆಪಾಳ್ಯದಲ್ಲಿ ನಡೆದಿದೆ. ಪ್ರೀತಂ (19) ಪ್ರೀತಿಗಾಗಿ ಪ್ರಾಣ ಕಳೆದುಕೊಂಡ ಯುವಕ.

ನೀರುಗುಂಟೆಪಾಳ್ಯದಲ್ಲಿ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದ ಪ್ರೀತಂ MBBS ವ್ಯಾಸಂಗ ಮಾಡುತ್ತಿದ್ದ ಹುಡುಗಿಯ ಜೊತೆ ಪ್ರೀತಿಯಲ್ಲಿದ್ದ. ಹುಡುಗಿಯನ್ನ ಪ್ರೀತಿ ಮಾಡಿದಕ್ಕೆ ಯುವತಿಯ ಸಂಬಂಧಿಕರು ಕಾರಿನಲ್ಲಿ ಕಿಡ್ನಾಪ್ ಮಾಡಿಕೊಂಡು ಹೋಗಿ ಹಲ್ಲೆ ಮಾಡಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ.

ಪ್ರೀತಂ ಹಾಗೂ ವಿದ್ಯಾರ್ಥಿನಿಯ ಪ್ರೀತಿ ವಿಚಾರ ತಿಳಿದ ಯುವತಿಯ ಸಂಬಂಧಿಕರು ಎರಡು, ಮೂರು ಬಾರಿ ವಾರ್ನಿಂಗ್ ನೀಡಿದ್ದರಂತೆ. ವಾರ್ನಿಂಗ್ ಮಾಡಿದ್ರು ಪ್ರೀತಿ ಮುಂದುವರೆಸಿದ್ದ ಹಿನ್ನೆಲೆಯಲ್ಲಿ ಕಳೆದ ಶುಕ್ರವಾರ ರಾತ್ರಿ ಯುವಕನ ಕಿಡ್ನಾಪ್ ಮಾಡಿದ್ದಾರೆ.

publive-image

ಯುವತಿಯ ಚಿಕ್ಕಮ್ಮನ ಮಗ ಶ್ರೀಕಾಂತ್ ಮತ್ತು ಸಹಚರರಿಂದ ಯುವಕನ ಕಿಡ್ನಾಪ್‌ ಮಾಡಿರೋ ಆರೋಪ ಇದೆ. ಯುವಕನನ್ನು ಕಿಡ್ನಾಪ್ ಮಾಡಿಕೊಂಡು ಹೋದ ನಾಲ್ಕೈದು ಜನರು ಕಂಠಪೂರ್ತಿ ಕುಡಿದು ಹಲ್ಲೆ ಮಾಡಿದ್ದಾರೆ. ಹಲ್ಲೆ ವೇಳೆ‌ ಯುವಕ‌ ಸಾವನ್ನಪ್ಪಿದ್ದಾನೆ. ಆಗ ಮೃತದೇಹವನ್ನು ಬಿಸಾಕಿ ಎಸ್ಕೇಪ್ ಆಗಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: ಕಾಜಲ್, ಸೀಮಾ, ಸ್ವೀಟಿ.. 21 ವಯಸ್ಸಿಗೆ 12 ಮದುವೆ; ಕಿಲಾಡಿ ಯುವತಿ ಸಿಕ್ಕಿಬಿದ್ದಿದ್ದೇ ರೋಚಕ! 

ಪ್ರೀತಂ ತನಗಿಂತ 2 ವರ್ಷ ದೊಡ್ಡವಳಾದ ಯುವತಿಯನ್ನ ಪ್ರೀತಿ ಮಾಡಿದ್ದೇ ತಪ್ಪಾಗಿದೆ. ಬೆಳೆದು ನಿಂತಿದ್ದ ಮಗನನ್ನ ಕಳೆದುಕೊಂಡ ಪ್ರೀತಂ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಪೊಲೀಸ್ ಠಾಣೆ ಮುಂದೆ ತಾಯಿ ಮತ್ತು ಸಂಬಂಧಿಕರು ಈ ಸಾವಿಗೆ ನ್ಯಾಯ ಕೊಡಿಸುವಂತೆ ಗೋಳಾಡುತ್ತಿದ್ದಾರೆ. ದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment