RRR ಬಳಿಕ ದೇವರದಲ್ಲಿ ಜೂನಿಯರ್ NTR ಅಬ್ಬರ.. ಸಿನಿಮಾ ರಿವ್ಯೂ ಏನ್ ಹೇಳುತ್ತೆ?

author-image
Bheemappa
Updated On
RRR ಬಳಿಕ ದೇವರದಲ್ಲಿ ಜೂನಿಯರ್ NTR ಅಬ್ಬರ.. ಸಿನಿಮಾ ರಿವ್ಯೂ ಏನ್ ಹೇಳುತ್ತೆ?
Advertisment
  • ಆರ್​ಆರ್​ಆರ್​ ಸಿನಿಮಾ ನಂತರ ಜೂ.NTR ದೇವರದಲ್ಲಿ ನಟನೆ
  • ಟಾಲಿವುಡ್​ಗೆ ಬಿಗ್ ಎಂಟ್ರಿ ಕೊಟ್ಟ ಹೀರೋ ಸೈಫ್ ಅಲಿಖಾನ್
  • ಅನಿರುದ್ಧ್ ಮ್ಯೂಸಿಕ್​ಗೆ ಜೂ.ಎನ್​ಟಿಆರ್ ಫ್ಯಾನ್ಸ್ ಫುಲ್ ಫಿದಾ

ಆಸ್ಕರ್ ಪ್ರಶಸ್ತಿ ವಿಜೇತ ಆರ್​ಆರ್​ಆರ್​ ಮೂವಿಯಲ್ಲಿ ಅಭಿನಯದ ನಂತರ ಜೂನಿಯರ್ ಎನ್​ಟಿಆರ್ ಎರಡು ವರ್ಷದ ಬಳಿಕ ಮತ್ತೆ ಬೆಳ್ಳಿ ತೆರೆಯಲ್ಲಿ ಅಬ್ಬರಿಸುತ್ತಿದ್ದಾರೆ. ಕೊರಟಲಾ ಶಿವ ಡೈರೆಕ್ಟ್​ ಮಾಡಿರುವ ದೇವರ- 1 ಇಂದು ವಿಶ್ವದ್ಯಾಂತ ತೆರೆಗೆ ಅಪ್ಪಳಿಸಿದೆ. ಮೂವಿಯಲ್ಲಿ ಜೂನಿಯರ್ ಎನ್​ಟಿಆರ್ ಆ್ಯಕ್ಟಿಂಗ್​ಗೆ ಅಭಿಮಾನಿಗಳು ಫುಲ್ ಹರ್ಷ ವ್ಯಕ್ತಪಡಿಸುತ್ತಿದ್ದಾರೆ. ಇನ್ನು ಸಿನಿಮಾದ ಹೇಗೆದೆ ಎನ್ನುವುದಕ್ಕಿಂತ ಇನ್ನೊಮ್ಮೆ ನೋಡಬಹುದು ಎಂದು ಫ್ಯಾನ್ಸ್​ ಆಶಯ ವ್ಯಕ್ತಪಡಿಸುತ್ತಿದ್ದಾರೆ.

publive-image

ಇದನ್ನೂ ಓದಿ:ಅಬ್ಬಾ.. ದೇವರ ಅಬ್ಬರ ಹೀಗೂ ಉಂಟಾ; ಥಿಯೇಟರ್ ಮುಂದೆ JrNTR ಕಟೌಟ್‌ಗೆ ಬೆಂಕಿ! VIDEO

ದೇವರ ಸಿನಿಮಾದಲ್ಲಿ ಜೂನಿಯರ್ ಎನ್​​ಟಿಆರ್ ಡಬಲ್ ಆ್ಯಕ್ಟಿಂಗ್ ಇದ್ದು​ ಬಾಲಿವುಡ್​ ಬೆಡಗಿ ಜಾನ್ವಿ ಕಪೂರ್ ತಂಗಂ ಎನ್ನುವ ಪಾತ್ರದಲ್ಲಿ ಅಭಿನಯ ಮಾಡಿದ್ದಾರೆ. ಇಬ್ಬರ ನಟನೆಗೆ ಸಿನಿಮಾದಲ್ಲಿ ಚೆನ್ನಾಗಿ ಮೂಡಿ ಬಂದಿದೆ. ಬಾಲಿವುಡ್ ಹೀರೋ ಸೈಫ್ ಅಲಿಖಾನ್ ಈ ಸಿನಿಮಾದಲ್ಲಿ ಪ್ರಮುಖ ಪಾತ್ರ ವಹಿಸಿದ್ದು ವಿಲನ್ ರೋಲ್​ನಲ್ಲಿ ಟಾಲಿವುಡ್​ಗೆ ಬಿಗ್ ಎಂಟ್ರಿ ಕೊಟ್ಟಿದ್ದಾರೆ. ಇನ್ನು ಬಹುಭಾಷಾ ನಟ ಪ್ರಕಾಶ್ ರಾಜ್ ಕೂಡ ದೇವರದಲ್ಲಿದ್ದು ಶ್ರುತಿ ಮರಾಠೆ, ಶ್ರೀಕಾಂತ್, ನರೈನ್, ಅಜಯ್ ಸೇರಿದಂತೆ ಇತರರು ತಮಗೆ ಸಿಕ್ಕ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ ಎಂದು ತಿಳಿದು ಬಂದಿದೆ.

ಸಮುದ್ರದ ತೀರದ ಹಳ್ಳಿಗಳಲ್ಲಿ ನಡೆಯುವ ಒಂದು ಕಥೆಯೇ ದೇವರ ಸಿನಿಮಾ. ರತ್ನಗಿರಿಯ ಕರಾಳ ರಹಸ್ಯಗಳು, ಹಲವು ಘಟನೆಗಳು ಒಂದೊಂದೆ ಬಯಲಿಗೆ ಬರುತ್ತವೆ. ಇಡೀ ಸಿನಿಮಾವೆಲ್ಲ ದೇವರ (ಜೂನಿಯರ್ ಎನ್​​ಟಿಆರ್), ದೇವರನ ಮಗ ವರ, ಭೈರಾ (ಸೈಫ್ ಅಲಿಖಾನ್) ಹಾಗೂ ಆ ಪ್ರದೇಶಗಳ ವ್ಯಕ್ತಿಗಳಿಂದ ನಡೆಯುವ ಸ್ಮಗ್ಲಿಂಗ್ ಸುತ್ತ ಹೆಣೆಯಲಾಗಿದೆ. ದೇವರ ಕೋಪ, ಬಲಿಷ್ಠನಾಗಿ ಕಾಣಿಸಿದರೆ, ಮಗ ವರ ಮುಗ್ಧತೆಯಿಂದ ಕಾಣಿಸುತ್ತಾನೆ. ನಟಿ ಜಾನ್ವಿ- ವರನ ನಡುವೆ ಪ್ರೀತಿ, ತಮಾಷೆ ಸೇರಿ ಇಂಟ್ರೆಸ್ಟಿಂಗ್ ಲವ್ ಟ್ರ್ಯಾಕ್ ನಡೆಯುತ್ತದೆ.

ಈ ವೇಳೆ ತಾವು ಮಾಡುತ್ತಿರುವ ಕೆಲಸ ಸರಿಯಿಲ್ಲವೆಂದು ತಿಳಿದ ದೇವರ ಭೈರಾ ವಿರುದ್ಧ ಘರ್ಷಣೆಗೆ ಇಳಿಯುತ್ತಾನೆ. ಆದರೆ ಇಬ್ಬರ ಮಧ್ಯೆ ಶತ್ರುತ್ವ ಬೆಳೆದು ಇದ್ದಕ್ಕಿದ್ದಾಗೆ ದೇವರ ಕಾಣೆಯಾಗುತ್ತಾನೆ. ಇದರಿಂದ ಭೈರಾ ಇಡೀ ರತ್ನಗಿರಿಯನ್ನ ಸಾಮ್ರಾಜ್ಯವನ್ನಾಗಿ ಮಾಡಿಕೊಂಡು ದೇವರನನ್ನ ಮುಗಿಸಲು ಪ್ರಯತ್ನದಲ್ಲಿರುತ್ತಾನೆ. ಒಳ ಸಂಚು ಕೂಡ ನಡೆಯುತ್ತವೆ. ಇದೆ ಸಿನಿಮಾವನ್ನ ಮುಂದೆ ತೆಗೆದುಕೊಂಡು ಹೋಗುತ್ತದೆ.

ಇದನ್ನೂ ಓದಿ: Devara: 75 ಕೋಟಿಗೂ ಮುಂಗಡ ಬುಕ್ಕಿಂಗ್.. ಬಾಕ್ಸ್​ ಆಫೀಸಿನಲ್ಲಿ ಧೂಳೆಬ್ಬಿಸುತ್ತಿರುವ ದೇವರ

publive-image

ಇನ್ನು ಕಾಲಿವುಡ್​ನ ಟಾಪ್ ಮ್ಯೂಸಿಕ್ ಡೈರೆಕ್ಟರ್ ಅನಿರುದ್ಧ್ ರವಿಚಂದರ್ ದೇವರಗೆ ಸಂಗೀತ ಸಂಯೋಜನೆ ಮಾಡಿದ್ದು ಸಾಂಗ್ಸ್ ಎಲ್ಲ ಉತ್ತಮವಾಗಿವೆ. ಆರ್.ರತ್ನವೇಲು ಅವರ ಸಿನಿಮಾಟೋಗ್ರಾಫಿ ಇದ್ದು ಎ ಶ್ರೀಕರ್ ಪ್ರಸಾದ್ ಅವರ ಎಡಿಟಿಂಗ್ ಇದೆ. ಕೊರಟಲಾ ಶಿವ ಮೂವಿ ಡೈರೆಕ್ಟ್ ಮಾಡಿದ್ರೆ, ಜೂನಿಯರ್ ಎನ್​ಟಿಆರ್​ ಸಹೋದರ ನಂದಮೂರಿ ಕಲ್ಯಾಣ್ ರಾಮ್ ಬಂಡವಾಳ ಹೂಡಿದ್ದಾರೆ.​


">September 27, 2024

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment