/newsfirstlive-kannada/media/post_attachments/wp-content/uploads/2025/04/PADIKKAL-1.jpg)
ಐಪಿಎಲ್ ಸೀಸನ್ 18ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಅದ್ಭುತ ಪ್ರದರ್ಶನ ನೀಡುತ್ತಿದೆ. ಪಾಯಿಂಟ್ಸ್ ಟೇಬಲ್‌ನಲ್ಲಿ ಆರ್ಸಿಬಿ 2ನೇ ಸ್ಥಾನದಲ್ಲಿದ್ದು, ಪ್ಲೇ ಆಫ್ ಹಂತಕ್ಕೆ ದಾಪುಗಾಲಿಡೋ ತವಕದಲ್ಲಿದೆ. ಇದರ ನಡುವೆ ಮೇ 17 ರಂದು ನಡೆಯುವ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ ಕನ್ನಡಿಗ ದೇವದತ್ ಪಡಿಕ್ಕಲ್ ಆಡುತ್ತಾರಾ, ಇಲ್ವಾ ಎನ್ನುವ ಪ್ರಶ್ನೆಗೆ ಉತ್ತರ ಇಲ್ಲಿದೆ.
ದೇವದತ್ ಪಡಿಕ್ಕಲ್ ಅವರು ಈ ಸೀಸನ್ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದರು. ತಂಡದಲ್ಲಿ 3ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ಗೆ ಆಗಮಿಸುತ್ತಿದ್ದ ಪಡಿಕ್ಕಲ್ ಅಬ್ಬರಿಸುತ್ತಿದ್ದರು. ಹೀಗಾಗಿಯೇ 10 ಪಂದ್ಯಗಳಲ್ಲಿ 247 ರನ್ಗಳನ್ನು ಕಲೆ ಹಾಕಿದ್ದಾರೆ. ಇದರಲ್ಲಿ ಎರಡು ಅರ್ಧಶತಕಗಳಿವೆ. ಸ್ಟ್ರೈಕ್ರೇಟ್ 150.61 ಇದೆ. ಐಪಿಎಲ್ನಲ್ಲಿ ಇದು ಅವರ ಉತ್ತಮ ರನ್ಗಳು ಆಗಿವೆ.
ಇದನ್ನೂ ಓದಿ:ಪ್ಲೇ ಆಫ್ಗಾಗಿ 6 ತಂಡಗಳ ನಡುವೆ ಮಹಾಯುದ್ಧ.. RCB, ಗುಜರಾತ್ಗೆ ಬಿಗ್ ಟೆನ್ಷನ್ ಶುರು..!
ಆರ್ಸಿಬಿಯಲ್ಲಿ ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡುತ್ತಿದ್ದ ದೇವದತ್ ಪಡಿಕ್ಕಲ್ ಗಾಯಕ್ಕೆ ಒಳಗಾಗಿದ್ದಾರೆ. ಮಂಡಿನೋವಿನ ಗಾಯಕ್ಕೆ ತುತ್ತಾಗಿದ್ದರಿಂದ ಇಡೀ ಐಪಿಎಲ್ನಿಂದಲೇ ಹೊರಗುಳಿದಿದ್ದಾರೆ. ಆರ್ಸಿಬಿಯ ಉಳಿದ ಪಂದ್ಯಗಳಲ್ಲಿ ಪಡಿಕ್ಕಲ್ ಆಡುವುದಿಲ್ಲ. ಇದರಿಂದ ತಂಡಕ್ಕೆ ಮತ್ತೊಬ್ಬ ಕನ್ನಡಿಗ ಮಯಾಂಕ್ ಅಗರ್ವಾಲ್ ಅವರನ್ನು ಕರೆದುಕೊಂಡು ಬರಲಾಗಿದೆ.
ಕನ್ನಡಿಗ ಮಯಾಂಕ್ ಅಗರ್ವಾಲ್ ಅವರು ಐಪಿಎಲ್ನಲ್ಲಿ ಒಳ್ಳೆಯ ಪರ್ಫಾಮೆನ್ಸ್ ಹೊಂದಿದ್ದಾರೆ. ಒಟ್ಟು 127 ಪಂದ್ಯ ಆಡಿರುವ ಮಯಾಂಕ್, ಒಂದು ಶತಕ ಸಿಡಿಸಿದ್ದು 13 ಹಾಫ್ಸೆಂಚುರಿ ಬಾರಿಸಿದ್ದಾರೆ. ಐಪಿಎಲ್ನಲ್ಲಿ ಆರ್ಸಿಬಿ ತಂಡದಲ್ಲೇ ಮಯಾಂಕ್ ಮೊದಲು ಆಡಿದ್ದು, ನಂತರ ಬೇರೆ ಬೇರೆ ತಂಡಗಳಲ್ಲಿ ಬ್ಯಾಟ್ ಬೀಸಿದ್ದಾರೆ. ಕಳೆದ ಬಾರಿ ಸನ್ರೈಸರ್ಸ್ ಹೈದ್ರಾಬಾದ್ ತಂಡದಲ್ಲಿ ಆಡಿದ್ದರು. ಆದರೆ ಈ ಬಾರಿಯ ಆಕ್ಷನ್ನಲ್ಲಿ ಅನ್ಸೋಲ್ಡ್ ಆಗಿದ್ದರು. ಈಗ ಆರ್ಸಿಬಿಗೆ ಅವಶ್ಯಕತೆ ಇದ್ದಿದ್ದರಿಂದ 1 ಕೋಟಿ ರೂಪಾಯಿಗೆ ಸಹಿ ಹಾಕಿದ್ದಾರೆ ಎಂದು ಹೇಳಲಾಗಿದೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ