newsfirstkannada.com

ಕೆ.ಎಲ್.ರಾಹುಲ್​ ಔಟ್​, ಪಡಿಕ್ಕಲ್ ಇನ್; ಕ್ರಿಕೆಟ್ ಲೋಕದ ಸೂಪರ್ ಸಿಕ್ಸ್ ಇಲ್ಲಿವೆ

Share :

Published February 13, 2024 at 1:49pm

    ‘ಶತಮಾನದ ಎಸೆತ’ ಎಸೆದ ಕುವೈತ್​ ಸ್ಪಿನ್ನರ್​

    ಅಭ್ಯಾಸ ಆರಂಭಿಸಿದ ರಿಷಬ್ ಪಂತ್​

    ನಿವೃತ್ತಿ ಘೋಷಿಸಿದ ಸೌರಭ್​ ತಿವಾರಿ

3ನೇ ಟೆಸ್ಟ್​ನಿಂದ ಕೆ.ಎಲ್​ ರಾಹುಲ್​ ಔಟ್​
ಇಂಗ್ಲೆಂಡ್​ ವಿರುದ್ಧದ 3ನೇ ಟೆಸ್ಟ್​ ಪಂದ್ಯಕ್ಕೂ ಮುನ್ನ ಟೀಮ್​ ಇಂಡಿಯಾಗೆ ಆಘಾತ ಎದುರಾಗಿದೆ. ಇಂಜುರಿಯಿಂದ ಬಳಲುತ್ತಿರುವ ಕೆ.ಎಲ್​ ರಾಹುಲ್​​ ಸಂಪೂರ್ಣ ಫಿಟ್ನೆಸ್​ ಸಾಧಿಸುವಲ್ಲಿ ವಿಫಲರಾಗಿದ್ದಾರೆ. ಹೀಗಾಗಿ 3ನೇ ಟೆಸ್ಟ್​ ಪಂದ್ಯದಿಂದ ಹೊರಬಿದ್ದಿದ್ದಾರೆ. ಸರಣಿಯ ಮೊದಲ ಟೆಸ್ಟ್​ ಪಂದ್ಯದಲ್ಲಿ ಆಡಿದ್ದ ರಾಹುಲ್​, ಇಂಜುರಿಯ ಕಾರಣದಿಂದ 2ನೇ ಟೆಸ್ಟ್​ನಿಂದ ಹೊರ ಬಿದ್ದಿದ್ರು. ಇದೀಗ 3ನೇ ಪಂದ್ಯಕ್ಕೂ ಅಲಭ್ಯರಾಗಿದ್ದಾರೆ.

ಕನ್ನಡಿಗ ದೇವದತ್ತ್​ ಪಡಿಕ್ಕಲ್​ಗೆ ಜಾಕ್​ಪಾಟ್​
ಕೆ.ಎಲ್.ರಾಹುಲ್​ ಇಂಜುರಿಯಿಂದ ಹೊರಬಿದ್ದ ಬೆನ್ನಲ್ಲೇ ಕರ್ನಾಟಕ ತಂಡದ ಬ್ಯಾಟ್ಸ್​​ಮನ್​ ದೇವದತ್ತ್ ಪಡಿಕ್ಕಲ್​ಗೆ ಅವಕಾಶದ ಬಾಗಿಲು ತೆರೆದಿದೆ. ರಾಹುಲ್​ ಬದಲಿಯಾಗಿ ದೇವದತ್ತ್​ ಪಡಿಕ್ಕಲ್​ ಟೀಮ್​ ಇಂಡಿಯಾದಲ್ಲಿ ಸ್ಥಾನ ಪಡೆದಿದ್ದಾರೆ. ಇತ್ತೀಚೆಗಷ್ಟೇ ಚೆನ್ನೈನಲ್ಲಿ ನಡೆದ ತಮಿಳುನಾಡು ವಿರುದ್ಧದ ರಣಜಿ ಪಂದ್ಯದಲ್ಲಿ ಪಡಿಕ್ಕಲ್​, ಶತಕ ಸಿಡಿಸಿ ಮಿಂಚಿದ್ರು. ಈ ಸೀಸನ್​ನ ರಣಜಿಯಲ್ಲಿ 6 ಇನ್ನಿಂಗ್ಸ್​ಗಳನ್ನಾಡಿರೋ ಪಡಿಕ್ಕಲ್​, 92.66ರ ಸರಾಸರಿಯಲ್ಲಿ 556 ರನ್​ಗಳಿಸಿದ್ದಾರೆ.

ಸರ್ಫರಾಜ್​ ಖಾನ್​ ಪದಾರ್ಪಣೆ ಸಾಧ್ಯತೆ
ಇಂಗ್ಲೆಂಡ್​ ವಿರುದ್ಧದ 3ನೇ ಟೆಸ್ಟ್​ ಪಂದ್ಯದಲ್ಲಿ ಯುವ ಆಟಗಾರ ಸರ್ಫರಾಜ್​ ಖಾನ್​ ಡೆಬ್ಯೂ ಮಾಡಲು ಸಜ್ಜಾಗಿದ್ದಾರೆ. ಕೆ.ಎಲ್​ ರಾಹುಲ್​ ಪಂದ್ಯದಿಂದ ಹೊರ ಬಿದ್ದಿದ್ರೆ, ಶ್ರೇಯಸ್​ ಅಯ್ಯರ್​ರನ್ನ ತಂಡದಿಂದ ಡ್ರಾಪ್​ ಮಾಡಲಾಗಿದೆ. ಹೀಗಾಗಿ ಮಿಡಲ್​ ಆರ್ಡರ್​ನಲ್ಲಿ ಸರ್ಫರಾಜ್​ ಖಾನ್​ರನ್ನ ಆಡಿಸಲು ಟೀಮ್​ ಮ್ಯಾನೇಜ್​ಮೆಂಟ್​ ನಿರ್ಧರಿಸಿದೆ ಎನ್ನಲಾಗಿದೆ. ಡೊಮೆಸ್ಟಿಕ್​ ಕ್ರಿಕೆಟ್​ನಲ್ಲಿ ಕಳೆದು 3 ಸೀಸನ್​ನಿಂದ​ ಸರ್ಫರಾಜ್​ ಸ್ಥಿರ ಪ್ರದರ್ಶನ ನೀಡಿದ್ದಾರೆ.

ಅಭ್ಯಾಸ ಆರಂಭಿಸಿದ ರಿಷಬ್ ಪಂತ್
ಇಂಡಿಯನ್​ ಪ್ರೀಮಿಯರ್​ ಲೀಗ್​ ಸೀಸನ್​ 17ಕ್ಕೆ ಕೌಂಟ್​​ಡೌನ್​ ಶುರುವಾಗಿದ್ದು, ರಿಷಬ್​ ಪಂತ್​ ಸಿದ್ಧತೆಯನ್ನ ಆರಂಭಿಸಿದ್ದಾರೆ. ಬೆಂಗಳೂರಿನ ಎನ್​ಸಿಎನಲ್ಲಿ ಪಂತ್ ಅಭ್ಯಾಸ ಆರಂಭಿಸಿದ್ದು, ನೆಟ್ಸ್​ನಲ್ಲಿ ಕೆಲಕಾಲ ಬ್ಯಾಟಿಂಗ್​ ನಡೆಸಿದ್ದಾರೆ. ಈ ಬಾರಿ ಐಪಿಎಲ್​ ಟೂರ್ನಿಯಲ್ಲಿ ಪಂತ್​ ಕಮ್​ಬ್ಯಾಕ್​ ಮಾಡಲಿದ್ದಾರೆ. ಇಂಪ್ಯಾಕ್ಟ್​ ಪ್ಲೇಯರ್ ಆಗಿ ಡೆಲ್ಲಿ ಕ್ಯಾಪಿಟಲ್ಸ್​ ಪರ ಆಡಲಿದ್ದಾರೆ ಎನ್ನಲಾಗಿದೆ.

‘ಶತಮಾನದ ಎಸೆತ’ ಎಸೆದ ಕುವೈತ್​ ಸ್ಪಿನ್ನರ್​
ಕುವೈತ್​ನ​ ಕ್ರಿಕೆಟಿಗ ಅಬ್ದುಲ್ಲಾ ರೆಹಮಾನ್​ ತನ್ನ ಸ್ಪಿನ್​ ಮೋಡಿಯಿಂದ ಕ್ರಿಕೆಟ್​ ಲೋಕದ ಗಮನ ಸೆಳೆದಿದ್ದಾನೆ. ವಿಚಿತ್ರ ಬೌಲಿಂಗ್​ ಆ್ಯಕ್ಷನ್​ ಹೊಂದಿರುವ ಸ್ಪಿನ್ನರ್​ ಅಬ್ದುಲ್ಲಾ ಸ್ಥಳೀಯ ಪಂದ್ಯವೊಂದರ ವೇಳೆ ಹಾಕಿದ ಎಸೆತವೊಂದು ಔಟ್​ಸೈಡ್​ದ ಆಫ್​ ಸ್ಟಂಪ್​ ಪಿಚ್​ ಆಗಿ ತೀವ್ರ ತಿರುವು ಪಡೆದುಕೊಂಡು ಲೆಗ್​ ಸ್ಟಂಪ್​ಗೆ ಬಡಿದಿದೆ. ಇದನ್ನು ನೋಡಿದ ಬ್ಯಾಟ್ಸ್​ಮನ್​ ಕಕ್ಕಾಬಿಕ್ಕಿಯಾಗಿದ್ರೆ ಕ್ರಿಕೆಟ್​ ಲೋಕ ಶತಮಾನದ ಎಸೆತ ಎನ್ನುತ್ತಿದೆ.

ನಿವೃತ್ತಿ ಘೋಷಿಸಿದ ಸೌರಭ್​ ತಿವಾರಿ
ಟೀಮ್​ ಇಂಡಿಯಾ ಹಾಗೂ ಜಾರ್ಖಂಡ್​ ತಂಡ​ದ ಬ್ಯಾಟ್ಸ್​ಮನ್ ಸೌರಭ್​ ತಿವಾರಿ ಎಲ್ಲಾ ಮಾದರಿಯ ಕ್ರಿಕೆಟ್​​ಗೆ ನಿವೃತ್ತಿ ಘೋಷಿಸಿದ್ದಾರೆ. ಫೆಬ್ರವರಿ 15ರಿಂದ ಜಮ್​ಶೆಡ್​​ಪುರದಲ್ಲಿ ನಡೆಯಲಿರುವ ರಣಜಿ ಪಂದ್ಯದಲ್ಲಿ ಕೊನೆಯದಾಗಿ ಆಡಲು ತಿವಾರಿ ನಿರ್ಧರಿಸಿದ್ದಾರೆ. ಯುವ ಕ್ರಿಕೆಟಿಗರಿಗೆ ಅವಕಾಶ ಕಲ್ಪಿಸಿಕೊಡುವ ನಿಟ್ಟಿನಲ್ಲಿ ಈ ನಿರ್ಧಾರ ಮಾಡಿರೋದಾಗಿ ಸೌರಭ್​ ತಿವಾರಿ ತಿಳಿಸಿದ್ದಾರೆ. ಟೀಮ್​ ಇಂಡಿಯಾವನ್ನ 3 ಏಕದಿನ ಪಂದ್ಯಗಳಲ್ಲಿ ಪ್ರತಿನಿಧಿಸಿದ್ದ ಸೌರಭ್, 93 ಐಪಿಎಲ್​ ಪಂದ್ಯಗಳನ್ನ ಆಡಿದ್ರು.

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಕೆ.ಎಲ್.ರಾಹುಲ್​ ಔಟ್​, ಪಡಿಕ್ಕಲ್ ಇನ್; ಕ್ರಿಕೆಟ್ ಲೋಕದ ಸೂಪರ್ ಸಿಕ್ಸ್ ಇಲ್ಲಿವೆ

https://newsfirstlive.com/wp-content/uploads/2023/11/PADIKKAL.jpg

Load More