6, 6, 6; ಕನ್ನಡಿಗನ ವಿಸ್ಫೋಟಕ ಬ್ಯಾಟಿಂಗ್​​.. ಪಂಜಾಬ್ ವಿರುದ್ಧ ಪಡಿಕ್ಕಲ್ ಭರ್ಜರಿ ಅರ್ಧಶತಕ

author-image
Bheemappa
Updated On
ಹೃದಯಗೆದ್ದ ಕನ್ನಡಿಗರು.. ಐಪಿಎಲ್​​ನಲ್ಲಿ ಕರ್ನಾಟಕ ಪ್ಲೇಯರ್​​ಗಳದ್ದೇ ಪರಾಕ್ರಮ..!
Advertisment
  • ಪಂಜಾಬ್ ಬೌಲರ್​ಗಳನ್ನ ಮನ ಬಂದಂತೆ ಚಚ್ಚಿದ ಕನ್ನಡಿಗ
  • ಅರ್ಧಶತಕದಲ್ಲಿ ಭರ್ಜರಿಯಾದ 4 ಬೌಂಡರಿ, 3 ಸಿಕ್ಸರ್​ಗಳಿವೆ
  • ಕೇವಲ ಒಂದೇ 1 ರನ್​ಗೆ ಔಟ್ ಆಗಿ ನಡೆದ ಫಿಲಿಪ್ ಸಾಲ್ಟ್

ಪಂಜಾಬ್ ಕಿಂಗ್ಸ್​ ವಿರುದ್ಧ ನಡೆಯುತ್ತಿರುವ ಐಪಿಎಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್​ ಬ್ಯಾಟರ್​ ಕನ್ನಡಿಗ ದೇವದತ್ ಪಡಿಕ್ಕಲ್ ಅವರು ಭರ್ಜರಿ ಅರ್ಧಶತಕ ಸಿಡಿಸಿದ್ದಾರೆ.

ಆರ್​ಸಿಬಿಯ ಸ್ಫೋಟಕ ಬ್ಯಾಟರ್​ ಫಿಲಿಪ್ ಸಾಲ್ಟ್ ಕೇವಲ 1 ರನ್​ಗೆ ಔಟ್​ ಆಗಿ ಹೊರ ನಡೆದರು. ಇವರ ಬಳಿಕ ಕ್ರೀಸ್​ಗೆ ಆಗಮಿಸಿದ ಕನ್ನಡಿಗ ದೇವದತ್ ಪಡಿಕ್ಕಲ್​ ಬ್ಯಾಟಿಂಗ್​ನಲ್ಲಿ ಆರ್ಭಟಿಸಿದರು. ಪಂಜಾಬ್​ ಬೌಲರ್​ಗಳ ಮೇಲೆ ಸವಾರಿ ಮಾಡಿದ ಪಡಿಕ್ಕಲ್​ ಮೈದಾನದ ಮೂಲೆ ಮೂಲೆಗೂ ಚೆಂಡನ್ನು ಕಳುಹಿಸಿ ಹಾಫ್​ ಸೆಂಚುರಿ ಬಾರಿಸಿದರು.

ಇದನ್ನೂ ಓದಿ: RCBಗೆ ಮತ್ತೆ ಕೈಕೊಟ್ಟ ವಿಸ್ಫೋಟಕ ಬ್ಯಾಟರ್.. ಸಾಲ್ಟ್​ ವಿರುದ್ಧ ಭಾರೀ ಆಕ್ರೋಶ​!

publive-image

ಈ ಪಂದ್ಯದಲ್ಲಿ ಕೇವಲ 30 ಬಾಲ್​ಗಳನ್ನು ಎದುರಿಸಿದ ದೇವದತ್ ಪಡಿಕ್ಕಲ್ 4 ಬೌಂಡರಿ ಹಾಗೂ ಆಕಾಶದೆತ್ತರದ 3 ಸಿಕ್ಸರ್​ಗಳಿಂದ ಅರ್ಧಶತಕ ಪೂರೈಸಿದರು. ಈ ಐಪಿಎಲ್​ನಲ್ಲಿ ಇದು ಪಡಿಕ್ಕಲ್ ಅವರ ಮೊದಲ ಹಾಫ್​ಸೆಂಚುರಿ ಆಗಿರುವುದು ವಿಶೇಷ. ಕಳೆದ ಪಂದ್ಯಗಳಿಂದ ದೇವದತ್ ಪಡಿಕ್ಕಲ್ ಅವರು ಇಂಪ್ಯಾಕ್ಟ್​ ಪ್ಲೇಯರ್ ಆಗಿ ಅಖಾಡಕ್ಕೆ ಇಳಿಯುತ್ತಿದ್ದಾರೆ. ಈ ಪಂದ್ಯದಲ್ಲೂ ಕನ್ನಡಿಗ ಇಂಪ್ಯಾಕ್ಟ್​ ಪ್ಲೇಯರ್ ಆಗಿದ್ದಾರೆ.

ಮುಲ್ಲನ್ಪುರ್​​ನ ಮಹಾರಾಜ ಯಾದವೀಂದ್ರ ಸಿಂಗ್ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಆರ್​ಸಿಬಿ ನಾಯಕ ರಜತ್ ಪಾಟಿದಾರ್ ಟಾಸ್ ಗೆದ್ದು ಫೀಲ್ಡಿಂಗ್ ತೆಗೆದುಕೊಂಡಿದ್ದರು. ಇದರಿಂದ ಮೊದಲ ಬ್ಯಾಟಿಂಗ್ ಮಾಡಿದ್ದ ಪಂಜಾಬ್ ಕಿಂಗ್ಸ್​ 20 ಓವರ್​ಗಳಲ್ಲಿ 158 ರನ್​ಗಳ ಗುರಿ ನೀಡಿತ್ತು. ಸದ್ಯ ಈ ರನ್​ಗಳನ್ನು ಆರ್​ಸಿಬಿ ಬ್ಯಾಟರ್ಸ್​ ಚೇಸ್ ಮಾಡುತ್ತಿದ್ದಾರೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment