newsfirstkannada.com

0, 9, 6, 7, 3 ! ನಂಬಿಕೆ ಉಳಿಸಿಕೊಳ್ಳದ ಕನ್ನಡಿಗ; ಚಿನ್ನದಂಥ ಅವಕಾಶ ಕೈಚೆಲ್ಲಿದ 7.75 ಕೋಟಿ ವೀರ..!

Share :

Published April 14, 2024 at 2:28pm

Update April 14, 2024 at 2:29pm

  ಪ್ರಸಕ್ತ ಸೀಸನ್​​ನಲ್ಲಿ ಈ ಆಟಗಾರ​ ಅಟ್ಟರ್​​ ಫ್ಲಾಪ್​​​​​​​​​ಶೋ

  7.75 ಕೋಟಿ ವೀರನ ಅಸಲಿ ಖದರ್​​ ಮಾಯ ಆಗಿದ್ದೇಕೆ

  ಐದು ಪಂದ್ಯ.. ಎರಡಂಕಿ ದಾಟದೇ ಭಾರಿ ನಿರಾಸೆ..!

ದೇಶಿ ಕ್ರಿಕೆಟ್​​ನ ರನ್​ ಮಷೀನ್​​​. ಮೊದಲ ನಾಲ್ಕು ಐಪಿಎಲ್ ಸೀಸನ್​​ನಲ್ಲಿ ವಂಡರ್​​​ ಅನ್ನೆ ಸೃಷ್ಟಿಸಿದ್ರು. ಕೇಳಿದವರ ಬಾಯಲ್ಲೆಲ್ಲ ಈತನದ್ದೆ ಗುಣಗಾನ. ಆದ್ರೀಗ ಇದೇ ಕನ್ನಡಿಗ ಫ್ಲಾಪ್ ಶೋ ನೀಡಿ ಟೀಕಾಕಾರರಿಗೆ ಆಹಾರವಾಗಿದ್ದಾರೆ. ಅಷ್ಟಕ್ಕೂ ಯಾರಪ್ಪಾ ಆ ಕನ್ನಡಿಗ ಅಂತೀರಾ?

0,9,6,7,3 ಇದು ಯಾವುದೋ ಫೋನ್ ನಂಬರ್​ ಅಂತ ಕನ್​​ಫ್ಯೂಸ್ ಆಗ್ಬೇಡಿ. ಯಾಕಂದ್ರೆ ಇದು ಫೋನ್ ನಂಬರ್ ಅಲ್ಲವೇ ಅಲ್ಲ. ಕನ್ನಡಿಗ ದೇವದತ್ ಪಡಿಕ್ಕಲ್​ ಪ್ರಸಕ್ತ ಐಪಿಎಲ್​​ನಲ್ಲಿ ಗಳಿಸಿದ ಸಿಂಗಲ್ ಡಿಜಿಟ್ ರನ್​​​​ ಕಹಾನಿ. ಡೊಮೆಸ್ಟಿಕ್ ಕ್ರಿಕೆಟ್​​​​​ನಲ್ಲಿ ಸಾಲಿಡ್​ ಟಚ್​​​ನಲ್ಲಿದ್ದ ಪಡಿಕ್ಕಲ್​​​​ ಭಾರತ ತಂಡ ಟೆಸ್ಟ್​​ ತಂಡಕ್ಕೆ ಸೆಲೆಕ್ಟ್ ಆಗಿದ್ರು. ಆದ್ರೀಗ ಇದೇ ಡೊಮೆಸ್ಟಿಕ್ ರನ್​​ ಮಷೀನ್​​​​​​ ಸೀಸನ್​​​​​​​​ 17ನೇ ಐಪಿಎಲ್​​​​​​ನಲ್ಲಿ ಅಟ್ಟರ್​ ಫ್ಲಾಪ್ ಶೋ ನೀಡ್ತಿದ್ದಾರೆ. ಆ ಮೂಲಕ ಕನ್ನಡಿಗರು ತಮ್ಮ ಮೇಲಿದ್ದ ನಿರೀಕ್ಷೆಯನ್ನ ಹುಸಿಯಾಗಿಸಿದ್ದಾರೆ.

ಇದನ್ನೂ ಓದಿ: ಉಚಿತ, ಉಚಿತ, ಉಚಿತ..! ಮೋದಿ ಪ್ರಣಾಳಿಕೆಯಲ್ಲಿ ಏನೆಲ್ಲ ಉಚಿತ ಘೋಷಣೆ..?

7.75 ಕೋಟಿ ವೀರ ಪಡಿಕ್ಕಲ್ ಅಸಲಿ ಖದರ್​​ ಮಾಯ
ಕಳೆದ ಸೀಸನ್​​ನಲ್ಲಿ 261 ರನ್ ಗಳಿಸಿದ್ದ ಪಡಿಕ್ಕಲ್​​​​ ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ಫೇಲಾಗಿದ್ರು. ಇದರಿಂದ ರಾಜಸ್ಥಾನ ಮ್ಯಾನೇಜ್​​ಮೆಂಟ್​​ನ ಕಣ್ಣು ಕೆಂಪಾಗಿಸಿದ್ರು. ಪಡಿಕ್ಕಲ್ ಆಟಕ್ಕೆ ತೃಪ್ತಿಯಾಗದ ರಾಜಸ್ಥಾನ, ವೇಗಿ ಆವೇಶ್ ಖಾನ್​ರನ್ನ ಟ್ರೇಡ್ ಮಾಡಿ ಪಡಿಕ್ಕಲ್​​ರನ್ನ ಲಕ್ನೋ ತಂಡಕ್ಕೆ ಬಿಟ್ಟು ಕೊಡ್ತು. ಆವೇಶ್ ಖಾನ್ ಬರೋಬ್ಬರಿ 10 ಕೋಟಿಗೆ ರಾಜಸ್ಥಾನ ರಾಯಲ್ಸ್​​ ಪಾಲಾದ್ರೆ, ಕನ್ನಡಿಗ ಪಡಿಕ್ಕಲ್​ 7.75 ಕೋಟಿಗೆ ಲಕ್ನೋ ಸೇರಿಕೊಂಡ್ರು.

ಇದನ್ನೂ ಓದಿ:ತಂಪೆರೆದ ಮಳೆರಾಯ.. ರಾಜ್ಯದ ಯಾವ್ಯಾವ ಜಿಲ್ಲೆಯಲ್ಲಿ ಭಾರೀ ಮಳೆ..?

ದೊಡ್ಡ ಮೊತ್ತಕ್ಕೆ ಸೇಲಾದ ಪಡಿಕ್ಕಲ್ ಮೇಲೆ ಬೆಟ್ಟದಷ್ಟು ನಿರೀಕ್ಷೆಗಳಿತ್ತು. ಭರವಸೆಯನ್ನು ಲೆಫ್ಟಿಬ್ಯಾಟರ್​ ಆರಂಭಿಕ ಪಂದ್ಯಗಳಲ್ಲಿ ಹುಸಿಯಾಗಿಸಿದ್ದಾರೆ. ರನ್​ ಜಾತ್ರೆ ನಡೆಸಿ ಲಕ್ನೋ ಪಾಲಿಗೆ ಹೀರೋ ಆಗ್ತಾರೆ ಅಂದುಕೊಂಡ್ರೆ, ಒಂದೊಂದು ರನ್ ಗಳಿಸಲು ಪಡಬಾರದ ಕಷ್ಟಪಡ್ತಿದ್ದಾರೆ. ಇಲ್ಲಿಯ ತನಕ ಆಡಿದ ಐದು ಪಂದ್ಯಗಳಲ್ಲಿ ಪಡಿಕ್ಕಲ್​​​ ಡಬಲ್ ಡಿಜಿಟ್​ ನಂಬರ್ ದಾಟಿಯೇ ಇಲ್ಲ. ಕಂಪ್ಲೀಟ್​ ಅಟ್ಟರ್ ಫ್ಲಾಪ್ ಶೋ ನೀಡಿ ಟೀಕಾಕಾರರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಪ್ರಸಕ್ತ ಐಪಿಎಲ್​ನಲ್ಲಿ ಪಡಿಕ್ಕಲ್​​​​​​..!
17ನೇ ಐಪಿಎಲ್ ಸೀಸನ್​ನಲ್ಲಿ ದೇವದತ್ ಪಡಿಕ್ಕಲ್​​ ಲಕ್ನೋ ಸೂಪರ್​ ಜೈಂಟ್ಸ್ ಪರ ಐದು ಪಂದ್ಯಗಳನ್ನ ಆಡಿದ್ದಾರೆ. ಆ ಪೈಕಿ ಅತಿಕೆಟ್ಟ 5 ರ ಎವರೇಜ್​​ನಲ್ಲಿ ಬರೀ 25 ರನ್ ಗಳಿಸಿದ್ದಾರೆ. ಇವರ ಬ್ಯಾಟ್​​​​​​ನಿಂದ ಮೂಡಿಬಂದ ಬೆಸ್ಟ್​ ಸ್ಕೋರ್​​​​ 9 ಆಗಿದೆ.

ಇನ್ನಾದ್ರು ಬದಲಾಗುತ್ತಾ ಪಡಿಕ್ಕಲ್​​​​ ಆಟದ ವೈಖರಿ..?
ದೇವದತ್​ ಪಡಿಕ್ಕಲ್​​​ ಕಳಪೆ ಆಟವಾಡ್ತಿದ್ರೂ ಬ್ಯಾಕ್ ಟು ಬ್ಯಾಕ್ ಅವಕಾಶ ನೀಡ್ತಿದೆ. ಅದಕ್ಕೆ ಕಾರಣ ಕ್ಯಾಪ್ಟನ್​ ರಾಹುಲ್​​​​. ಹೌದು, ಪಡಿಕ್ಕಲ್​ ಕೂಡ ಕರ್ನಾಟಕದವರೇ ಆಗಿದ್ದರಿಂದ ರಾಹುಲ್​​, ಪಡಿಕ್ಕಲ್​ಗೆ ಬ್ಯಾಕ್​​ಅಪ್​ ಮಾಡ್ತಿದ್ದಾರೆ. ಆದ್ರೆ ನಾಯಕನ ನಂಬಿಕೆ ಉಳಿಸಿಕೊಳ್ಳುವಲ್ಲಿ ಪಡಿಕ್ಕಲ್​​​​​​ ಮೊದಲೈದು ಪಂದ್ಯಗಳಲ್ಲಿ ವಿಫಲರಾಗಿದ್ದಾರೆ.

ಇದನ್ನೂ ಓದಿ7 ಅಂತಸ್ತಿನ ಕಟ್ಟಡದಿಂದ ಜಿಗಿದು ಪ್ರಾಣಬಿಟ್ಟ ಯುಟ್ಯೂಬ್ ಸ್ಟಾರ್​ ಜೋಡಿ

ಮೊದಲಾರ್ಧದ ಪಂದ್ಯಗಳು ಮುಕ್ತಾಯದ ಹಂತ ತಲುಪಿವೆ. ದ್ವಿತೀಯ ಆರಂಭಕ್ಕೂ ಮುನ್ನ ಪಡಿಕ್ಕಲ್​​ ತಪ್ಪನ್ನ ತಿದ್ದಿಕೊಂಡ್ರೆ ರನ್ ಭರಾಟೆ ನಡೆಸಲು ಉತ್ತಮ ಅವಕಾಶವಿದೆ. ಆ ಕೆಲಸವನ್ನ ಕನ್ನಡಿಗ ಪಡಿಕ್ಕಲ್​ ಮಾಡ್ತಾರಾ ? ಇಲ್ಲ ಹಳೇ ಚಾಳಿ ಮುಂದುವರಿಸಿ ಬೆಂಚ್​ಗೆ ಸೀಮಿತವಾಗ್ತಾರಾ ಅನ್ನೋದನ್ನ ಕಾದು ನೋಡಬೇಕಿದೆ.

ವಿಶೇಷ ವರದಿ: ಮಾಗುಂಡಯ್ಯ ಪಟ್ಟೇದ್

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

0, 9, 6, 7, 3 ! ನಂಬಿಕೆ ಉಳಿಸಿಕೊಳ್ಳದ ಕನ್ನಡಿಗ; ಚಿನ್ನದಂಥ ಅವಕಾಶ ಕೈಚೆಲ್ಲಿದ 7.75 ಕೋಟಿ ವೀರ..!

https://newsfirstlive.com/wp-content/uploads/2024/04/PADIKKAL.jpg

Load More