6, 6, 6; ಕೊಹ್ಲಿ ಬೆನ್ನಲ್ಲೇ ಪಡಿಕ್ಕಲ್ ಹಾಫ್​ಸೆಂಚುರಿ​.. ಕನ್ನಡಿಗನ ಬ್ಯಾಟ್​ನಿಂದ ಸತತ 2ನೇ ಅರ್ಧಶತಕ

author-image
Bheemappa
Updated On
RCB ಅಭಿಮಾನಿಗಳಿಗೆ ಬಿಗ್ ಶಾಕ್.. ಪ್ಲೇ ಆಫ್ ಹಂತದಲ್ಲಿ ಸ್ಟಾರ್ ಬ್ಯಾಟರ್ ಔಟ್‌; ಕಾರಣವೇನು?
Advertisment
  • ಪಂದ್ಯದಲ್ಲಿ ಮತ್ತೊಂದು ಅರ್ಧಶತಕ ಸಿಡಿಸಿದ ವಿರಾಟ್ ಕೊಹ್ಲಿ
  • ಟಾಸ್ ಸೋತು ಮೊದಲ ಬ್ಯಾಟಿಂಗ್ ಮಾಡುತ್ತಿರುವ ಆರ್​ಸಿಬಿ
  • ಗೆಲ್ಲಲೇಬೇಕಾದ ಪಂದ್ಯದಲ್ಲಿ ಕೈಕೊಟ್ಟಿರುವ ಸ್ಫೋಟಕ ಬ್ಯಾಟರ್​

2025ರ ಐಪಿಎಲ್ ಟೂರ್ನಿಯಲ್ಲಿ ರಾಯಲ್​ ಚಾಲೆಂಜರ್ಸ್​ ಬೆಂಗಳೂರಿನ ಬ್ಯಾಟರ್​ ದೇವದತ್ ಪಡಿಕ್ಕಲ್ ಅವರು ಸತತ 2ನೇ ಅರ್ಧಶತಕ ಬಾರಿಸಿದ್ದಾರೆ. ಪಂಜಾಬ್​ ಕಿಂಗ್ಸ್​ ವಿರುದ್ಧ ಹಾಫ್​ಸೆಂಚುರಿ ಬಾರಿಸಿದ್ದ ಪಡಿಕ್ಕಲ್​ ಈಗ ಮತ್ತೊಮ್ಮೆ 50 ರನ್ ಗಳಿಸಿದ್ದಾರೆ. ​

​ಬೆಂಗಳೂರಿನ ಎಂ.ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಐಪಿಎಲ್​ನ 42ನೇ ಪಂದ್ಯದಲ್ಲಿ ಟಾಸ್ ಗೆದ್ದ ರಾಜಸ್ಥಾನ್ ರಾಯಲ್ಸ್​ ಫೀಲ್ಡಿಂಗ್ ಆಯ್ಕೆ ಮಾಡಿದೆ. ಆರ್​ಸಿಬಿ ಮೊದಲ ಬ್ಯಾಟಿಂಗ್​ ಮಾಡುತ್ತಿದೆ. ಬೆಂಗಳೂರು ತಂಡದ ಪರ ಓಪನರ್ಸ್​ ಆಗಿ ಕಣಕ್ಕೆ ಇಳಿದ ಸಾಲ್ಟ್ ಹಾಗೂ ವಿರಾಟ್ ಕೊಹ್ಲಿ ಉತ್ತಮ ಆರಂಭ ಪಡೆಯುವಲ್ಲಿ ವಿಫಲರಾದರು. ಏಕೆಂದರೆ ಸಾಲ್ಟ್​ ಬೇಗನೇ ಔಟ್ ಆದರು.

ಇದನ್ನೂ ಓದಿ:4, 4, 4, 4, 4, 4, 4, 4, ಕೊಹ್ಲಿ ಭರ್ಜರಿ ಅರ್ಧಶತಕ​.. ರಾಯಲ್ಸ್​ ಬೌಲರ್ಸ್​ಗೆ ಸ್ಟಾರ್ ಬ್ಯಾಟರ್ ಟಕ್ಕರ್ ​

publive-image

ಇದರಿಂದ ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲು ಮೈದಾನಕ್ಕೆ ಬಂದ ಕನ್ನಡಿಗ ದೇವದತ್ ಪಡಿಕ್ಕಲ್ ಅವರು ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ. ರಾಜಸ್ಥಾನ್ ಬೌಲರ್​ಗಳನ್ನ ಹೇಗೆಂದರೆ ಹಾಗೇ ಬಾರಿಸಿದ ಪಡಿಕ್ಕಲ್ ಕೇವಲ 26 ಎಸೆತಗಳಲ್ಲಿ 4 ಫೋರ್ ಹಾಗೂ 3 ಅಮೋಘವಾದ ಸಿಕ್ಸರ್​​ಗಳಿಂದ​ 50 ರನ್​ ಚಚ್ಚಿ ಬ್ಯಾಟ್​ ಎತ್ತಿ ಸಂಭ್ರಮಿಸಿದರು. ಆರ್​ಸಿಬಿ ತಂಡದ ಮೊತ್ತ 161 ಆಗಿದ್ದಾಗ ಪಡಿಕ್ಕಲರ್ ವಿಕೆಟ್​ ಒಪ್ಪಿಸಿದರು.

ಇನ್ನು ಇದೇ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಕೂಡ ಅಬ್ಬರದ ಹಾಫ್​​ಸೆಂಚುರಿ ಬಾರಿಸಿದ್ದಾರೆ. 32 ಎಸೆತಗಳಲ್ಲಿ ಒಂದೂ ಸಿಕ್ಸ್​ ಬಾರಿಸದೇ ಕೇವಲ 8 ಬೌಂಡರಿಗಳನ್ನು ಬಾರಿಸುವ ಮೂಲಕ ಕೊಹ್ಲಿ 51 ರನ್​ ಗಳಿಸಿದರು. ಬೌಂಡರಿ ಬಾರಿಸುವ ಮೂಲಕ ವಿರಾಟ್ ಕೊಹ್ಲಿ ಈ ಪಂದ್ಯದಲ್ಲಿ 51 ರನ್​ ಗಳಿಸಿರುವುದು ವಿಶೇಷ ಎನಿಸಿತು. ಅಲ್ಲದೇ ಪಡಿಕ್ಕಲ್ ಹಾಗೂ ಕೊಹ್ಲಿ ಬ್ಯಾಟಿಂಗ್​ ಅಭಿಮಾನಿಗಳನ್ನ ರಂಜಿಸಿತು ಎಂದು ಹೇಳಬಹುದು.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment