ಕರ್ನಾಟಕದ ಸ್ಟಾರ್​ ಕ್ರಿಕೆಟರ್​ಗೆ ಬಿಗ್​ ಶಾಕ್​​; ಟೀಮ್​ ಇಂಡಿಯಾದಿಂದಲೇ ಔಟ್​​

author-image
Ganesh Nachikethu
Updated On
ಭಾರತದ ಗೆಲುವಿಗೆ KL ರಾಹುಲ್​​​​ ಕಾರಣ ಎಂದ ಕ್ಯಾಪ್ಟನ್​ ರೋಹಿತ್​​.. ಅಸಲಿ ಸತ್ಯ ಬಿಚ್ಚಿಟ್ರು!
Advertisment
  • ಟೀಮ್​ ಇಂಡಿಯಾ, ಆಸ್ಟ್ರೇಲಿಯಾ ಮಧ್ಯೆ 2ನೇ ಟೆಸ್ಟ್​
  • 2ನೇ ಟೆಸ್ಟ್​ ಪಂದ್ಯದಿಂದ ಸ್ಟಾರ್​ ಕನ್ನಡಿಗನಿಗೆ ಕೊಕ್​​!
  • ಸಿಕ್ಕ ಅವಕಾಶವನ್ನು ಕೈ ಬಿಟ್ಟಿದ್ದ ದೇವದತ್​​ ಪಡಿಕ್ಕಲ್​​

ನಾಳೆಯಿಂದಲೇ ಅಡಿಲೇಡ್​​ನಲ್ಲಿ ಟೀಮ್​ ಇಂಡಿಯಾ, ಆಸ್ಟ್ರೇಲಿಯಾ ಮಧ್ಯೆ 2ನೇ ಟೆಸ್ಟ್​ ಪಂದ್ಯ ನಡೆಯಲಿದೆ. ಮೊದಲ ಟೆಸ್ಟ್​ ಪಂದ್ಯದಲ್ಲಿ ಬರೋಬ್ಬರಿ 290 ರನ್​​ಗಳಿಂದ ಗೆದ್ದು ಬೀಗಿರೋ ಟೀಮ್​ ಇಂಡಿಯಾ ಹ್ಯಾಟ್ರಿಕ್​ ಗೆಲುವಿನ ನಿರೀಕ್ಷೆಯಲ್ಲಿದೆ. ಈ ನಡುವೆ ಟೀಮ್​ ಇಂಡಿಯಾಗೆ ಶಾಕಿಂಗ್​ ನ್ಯೂಸ್​ ಒಂದಿದೆ.

ವೈಯಕ್ತಿಕ ಕಾರಣದಿಂದಾಗಿ ಮೊದಲ ಟೆಸ್ಟ್​​ನಿಂದ ಟೀಮ್​ ಇಂಡಿಯಾ ಕ್ಯಾಪ್ಟನ್​ ರೋಹಿತ್​ ಶರ್ಮಾ ಅವರು ಹೊರಗುಳಿದಿದ್ರು. ಹಾಗಾಗಿ ಇವರ ಅನುಪಸ್ಥಿತಿಯಲ್ಲಿ ಜಸ್ಪ್ರಿತ್ ಬುಮ್ರಾ ಟೀಮ್​ ಇಂಡಿಯಾವನ್ನು ಲೀಡ್​ ಮಾಡಿದ್ರು. ಮಿಡಲ್​ ಆರ್ಡರ್​ ಬ್ಯಾಟರ್​​​ ಶುಭ್ಮನ್​​ ಗಿಲ್​​ ಬೆರಳಿಗೆ ಬಲವಾದ ಪೆಟ್ಟು ಬಿದ್ದ ಕಾರಣ ಇವರು ಮೊದಲ ಟೆಸ್ಟ್​ನಿಂದ ದೂರ ಉಳಿದಿದ್ರು. ಇವರ ಸ್ಥಾನದಲ್ಲಿ ಆಡಲು ಸ್ಟಾರ್​ ಕನ್ನಡಿಗ ದೇವದತ್​ ಪಡಿಕ್ಕಲ್​ಗೆ ಅವಕಾಶ ನೀಡಲಾಗಿತ್ತು.

ಪಡಿಕ್ಕಲ್​​ ಕಳಪೆ ಪ್ರದರ್ಶನ

ಕನ್ನಡಿಗ ದೇವದತ್​ ಪಡಿಕ್ಕಲ್​​ ಇಂಗ್ಲೆಂಡ್​​ ವಿರುದ್ಧ ಟೆಸ್ಟ್​ ಸರಣಿಯಲ್ಲಿ ಟೀಮ್​​ ಇಂಡಿಯಾ ಪರ ಡೆಬ್ಯೂ ಮಾಡಿದ್ರು. ಆದ್ರೆ, ಇಂಗ್ಲೆಂಡ್​ ವಿರುದ್ಧ ಟೆಸ್ಟ್​ ಸರಣಿಯಲ್ಲಿ ಕಳಪೆ ಪ್ರದರ್ಶನ ನೀಡಿದ್ದ ಕಾರಣ ಇವರಿಗೆ ಟೀಮ್​ ಇಂಡಿಯಾದಲ್ಲಿ ಸ್ಥಾನ ಸಿಕ್ಕಿರಲಿಲ್ಲ. ಇತ್ತೀಚಿಗೆ ಭಾರತ ಎ ತಂಡದ ಪರ ಅನಧಿಕೃತ ಟೆಸ್ಟ್‌ನಲ್ಲಿ ಭರ್ಜರಿ ಪ್ರದರ್ಶನ ನೀಡಿದ್ರು. ಹಾಗಾಗಿ ದೇವದತ್​ ಪಡಿಕ್ಕಲ್​​ ಅವರಿಗೆ ಸ್ಥಾನ ಸಿಕ್ಕಿತ್ತು. ಪಡಿಕ್ಕಲ್​​ ಪರ್ತ್​ ಟೆಸ್ಟ್​​ನಲ್ಲಿ ಕಳಪೆ ಪ್ರದರ್ಶನ ನೀಡಿದ್ದು, ಮೊದಲ ಇನ್ನಿಂಗ್ಸ್​ ಸೊನ್ನೆ ಸುತ್ತಿದ್ರು. 2ನೇ ಇನ್ನಿಂಗ್ಸ್​ನಲ್ಲಿ ಕೇವಲ 25 ರನ್​ ಸಿಡಿಸಿದ್ದ ಕಾರಣ ಇವರನ್ನು ಟೀಮ್​ನಿಂದ ಕೈ ಬಿಡಲಾಗುತ್ತಿದೆ. ಇವರ ಜಾಗದಲ್ಲಿ ಗಿಲ್​ ಆಡಲಿದ್ದಾರೆ.

ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಮ್​ ಇಂಡಿಯಾ 295 ರನ್​ಗಳ ಭರ್ಜರಿ ಜಯ ಸಾಧಿಸಿದೆ. ಇದರೊಂದಿಗೆ ಟೀಮ್​​ ಇಂಡಿಯಾ ಐಸಿಸಿ ವಿಶ್ವಟೆಸ್ಟ್ ಚಾಂಪಿಯನ್ಶಿಪ್ ಪಾಯಿಂಟ್ಸ್ ಟೇಬಲ್​​ನಲ್ಲಿ ಮೊದಲ ಸ್ಥಾನಕ್ಕೇರಿದೆ. ಒಂದೆಡೆ ಟೀಮ್​ ಇಂಡಿಯಾ ಮೊದಲ ಸ್ಥಾನಕ್ಕೇರಿದ್ರೆ, ಇನ್ನೊಂದೆಡೆ ಆಸ್ಟ್ರೇಲಿಯಾಗೆ ಭಾರೀ ಹಿನ್ನಡೆ ಆಗಿದೆ. ಪ್ಯಾಟ್ ಕಮ್ಮಿನ್ಸ್ ನೇತೃತ್ವದ ಕಾಂಗರೂ ಪಡೆ 2ನೇ ಸ್ಥಾನಕ್ಕೆ ಕುಸಿದಿದೆ. ಪರ್ತ್ ಟೆಸ್ಟ್ ಪಂದ್ಯದ ನಂತರ ಡಬ್ಲ್ಯುಟಿಸಿ ಫೈನಲ್ ತಲುಪುವ ಸನ್ನಿವೇಶ ಬದಲಾಗಿದೆ.

ರೋಹಿತ್ ಶರ್ಮಾ ನಾಯಕತ್ವದ ಟೀಮ್​ ಇಂಡಿಯಾಗೆ ಆಸ್ಟ್ರೇಲಿಯಾ ವಿರುದ್ಧ ಇನ್ನೂ 4 ಟೆಸ್ಟ್ ಪಂದ್ಯಗಳು ಮಾತ್ರ ಬಾಕಿ ಉಳಿದಿವೆ. ಇದಲ್ಲದೆ, ಆಸ್ಟ್ರೇಲಿಯಾ ತವರಿನಲ್ಲಿ ಭಾರತದ ವಿರುದ್ಧ ನಾಲ್ಕು ಟೆಸ್ಟ್ ಮತ್ತು ಶ್ರೀಲಂಕಾದಲ್ಲಿ ಎರಡು ಟೆಸ್ಟ್ ಪಂದ್ಯಗಳನ್ನು ಆಡಬೇಕಾಗಿದೆ. ಟೀಮ್ ಇಂಡಿಯಾದ ಗೆಲುವಿನ ಶೇಕಡಾವಾರು ಪ್ರಸ್ತುತ 61.11 ರಷ್ಟಿದ್ದರೆ, ಆಸ್ಟ್ರೇಲಿಯಾದ ಗೆಲುವಿನ ಶೇಕಡಾವಾರು 57.69 ಕ್ಕೆ ಇಳಿದಿದೆ. ಟೀಮ್​ ಇಂಡಿಯಾ ಒಂದು ಪಂದ್ಯ ಸೋತ್ರೂ ಬಹಳ ತೊಂದರೆಯಾಗಲಿದೆ.

ಇದನ್ನೂ ಓದಿ:ಆಸ್ಟ್ರೇಲಿಯಾ ವಿರುದ್ಧ 2ನೇ ಟೆಸ್ಟ್​​ಗೆ ಸ್ಟಾರ್​ ಕ್ರಿಕೆಟರ್​ ಎಂಟ್ರಿ; ಟೀಮ್​ ಇಂಡಿಯಾಗೆ ಬಂತು ಆನೆಬಲ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment