/newsfirstlive-kannada/media/post_attachments/wp-content/uploads/2024/12/Devdutt-Padikkal-RCB-News.jpg)
ಟೀಮ್ ಇಂಡಿಯಾ, ಆಸ್ಟ್ರೇಲಿಯಾ ನಡುವಿನ ಬಾರ್ಡರ್ ಗವಾಸ್ಕರ್ ಸರಣಿ ನಡೆಯುತ್ತಿದೆ. ಹೇಗಾದ್ರೂ ಮಾಡಿ 4ನೇ ಟೆಸ್ಟ್ ಗೆಲ್ಲಲೇಬೇಕು ಎಂದು ಟೀಮ್ ಇಂಡಿಯಾ ಮುಂದಾಗಿದೆ. ಇದು ಬಾಕ್ಸಿಂಗ್ ಡೇ ಟೆಸ್ಟ್ ಆಗಿದ್ದು, ಉಭಯ ತಂಡಗಳು ಭರ್ಜರಿ ತಯಾರಿ ನಡೆಸಿವೆ. 3ನೇ ಟೆಸ್ಟ್ ಡ್ರಾ ಆಗಿದ್ದು, ಎರಡು ತಂಡಗಳು ತಲಾ 1 ಪಂದ್ಯ ಗೆದ್ದು ಸಮಬಲ ಸಾಧಿಸಿವೆ.
ಮೆಲ್ಬರ್ನ್ ಟೆಸ್ಟ್ ಆರಂಭಕ್ಕೂ ಮುನ್ನ ಟೀಮ್ ಇಂಡಿಯಾ ಅಭ್ಯಾಸ ಆರಂಭಿಸಿದೆ. ಕ್ಯಾಂಪ್ನಲ್ಲಿ ಆರಂಭಿಕ ಆಟಗಾರ ಕರ್ನಾಟಕದ ಕೆಎಲ್ ರಾಹುಲ್ ಕೂಡ ಕಾಣಿಸಿಕೊಂಡಿದ್ದರು. ಪ್ರಾಕ್ಟೀಸ್ ವೇಳೆ ರಾಹುಲ್ ಬಲಗೈಗೆ ಚೆಂಡು ಬಡಿದಿದೆ. ಇವರ ಗಾಯದ ಗಂಭೀರತೆ ಬಗ್ಗೆ ಬಿಸಿಸಿಐ ಯಾವುದೇ ಸ್ಪಷ್ಟ ಮಾಹಿತಿ ನೀಡಿಲ್ಲ.
ಭರ್ಜರಿ ಫಾರ್ಮ್‌ನಲ್ಲಿರೋ ರಾಹುಲ್
4ನೇ ಟೆಸ್ಟ್ ಪಂದ್ಯಕ್ಕೆ ಕೆಎಲ್ ರಾಹುಲ್ ತುಂಬ ಮುಖ್ಯ. ಇವರು ಸಂಪೂರ್ಣ ಫಿಟ್ ಆಗಿರಲಿ ಎಂಬುದು ಎಲ್ಲರ ಆಸೆ. ಆಸ್ಟ್ರೇಲಿಯಾ ವಿರುದ್ಧ ಸರಣಿಯಲ್ಲೇ ಟೀಮ್ ಇಂಡಿಯಾ ಪರ ಅತೀ ಹೆಚ್ಚು ರನ್ ಸಿಡಿಸಿದ ಆಟಗಾರ ಕೆ.ಎಲ್ ರಾಹುಲ್. ಇವರ ಉಪಸ್ಥಿತಿ ತಂಡಕ್ಕೆ ಅನಿವಾರ್ಯ. ಕೆ.ಎಲ್ ರಾಹುಲ್ ಗಾಯಗೊಂಡಿರುವುದು ಟೀಮ್ ಇಂಡಿಯಾಗೆ ತಲೆನೋವಾಗಿದೆ.
ಕೆಎಲ್ ರಾಹುಲ್ ಅಮೋಘ ಫಾರ್ಮ್‌ನಲ್ಲಿದ್ದಾರೆ. ಇವರು ಆಡಿದ 6 ಇನಿಂಗ್ಸ್‌ಗಳಲ್ಲಿ 47 ಸರಾಸರಿಯಲ್ಲಿ 235 ರನ್ ಗಳಿಸಿದ್ದು, 2 ಅರ್ಧಶತಕಗಳು ಸೇರಿವೆ. ಟೀಮ್ ಇಂಡಿಯಾ 3ನೇ ಟೆಸ್ಟ್ ಡ್ರಾ ಆಗಲು ರಾಹುಲ್ ಅವರೇ ಕಾರಣ. ಈ ಟೆಸ್ಟ್ನಲ್ಲಿ 84 ರನ್ ಸಿಡಿಸಿದ ರಾಹುಲ್ ಶತಕ ವಂಚಿತರಾದ್ರು.
ಕೆ.ಎಲ್ ರಾಹುಲ್ ಬದಲಿಗೆ ಪಡಿಕ್ಕಲ್ಗೆ ಚಾನ್ಸ್
ಮುಂದಿನ ಸೀಸನ್ಗೆ ಕೆ.ಎಲ್ ರಾಹುಲ್ ಬದಲಿಗೆ ಕನ್ನಡಿಗ ಪಡಿಕ್ಕಲ್ ಅವರಿಗೆ ಅವಕಾಶ ಸಾಧ್ಯತೆ ಇದೆ. ದೇವದತ್ ಪಡಿಕ್ಕಲ್ ಒಳ್ಳೆಯ ಓಪನರ್. ಕರ್ನಾಟಕ ರಣಜಿ ತಂಡದ ಪರ ಓಪನಿಂಗ್ ಮಾಡಿ ಅನುಭವ ಇದೆ. ಓಪನಿಂಗ್ನಲ್ಲಿ ಇವರಿಗೆ ಒಳ್ಳೆಯ ರೆಕಾರ್ಡ್ ಕೂಡ ಇದೆ. ಹೀಗಾಗಿ ಇವರು ಟೀಮ್ ಇಂಡಿಯಾ ಪರ ಓಪನಿಂಗ್ ಮಾಡಬಹುದು. ಇತ್ತೀಚೆಗೆ ನಡೆದ ಐಪಿಎಲ್ ಮೆಗಾ ಹರಾಜಿನಲ್ಲಿ ಆರ್ಸಿಬಿ ತಂಡ 2 ಕೋಟಿ ನೀಡಿ ಪಡಿಕ್ಕಲ್ ಅವರನ್ನು ಖರೀದಿ ಮಾಡಿತ್ತು. ಆರ್ಸಿಬಿ ಸೇರಿದ ಬೆನ್ನಲ್ಲೇ ಇವರಿಗೆ ಜಾಕ್ಪಾಟ್ ಹೊಡೆದಿದೆ.
ಇದನ್ನೂ ಓದಿ:ನಾಳೆಯಿಂದ ಕರ್ನಾಟಕದ ಈ ಜಿಲ್ಲೆಗಳಲ್ಲಿ ಜೋರು ಮಳೆ; ಹಲವೆಡೆ ಹೈ ಅಲರ್ಟ್ ಘೋಷಣೆ
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ