/newsfirstlive-kannada/media/post_attachments/wp-content/uploads/2024/11/DEVADAT_PADIKAL.jpg)
- ಯಾರಿಗೂ ಬೇಡವಾದ ಕನ್ನಡಿಗ ದೇವದತ್ ಪಡಿಕ್ಕಲ್ RCBಗೆ ಬಂದ್ರು
- ಬೆಂಗಳೂರು ಫ್ರಾಂಚೈಸಿ ದೇವದತ್ ಪಡಿಕ್ಕಲ್ರನ್ನ ಹೇಗೆ ಖರೀದಿಸಿತು?
- ಕರ್ನಾಟಕದ ಯುವ ಆಟಗಾರನನ್ನ ಬಿಟ್ಟುಕೊಡದ ಬೆಂಗಳೂರು ತಂಡ
ಸೌದಿ ಅರೇಬಿಯಾದ ಜೆಡ್ಡಾ ನಗರದಲ್ಲಿ ನಡೆದ ಐಪಿಎಲ್ ಮೆಗಾ ಹರಾಜಿನ ಕೊನೆ ದಿನದಲ್ಲಿ ಯಂಗ್ ಪ್ಲೇಯರ್ಸ್​ ಅನ್ನು ಫ್ರಾಂಚೈಸಿಗಳು ಖರೀದಿ ಮಾಡಿವೆ. ಮೊದಲ ಹಂತದಲ್ಲಿ ಅನ್​ಸೋಲ್ಡ್ ಆಗಿದ್ದ ಕೆಲ ಆಟಗಾರರ ಹೆಸರನ್ನು ಮತ್ತೆ ಹರಾಜಿನಲ್ಲಿ ಕರೆಯಲಾಗಿತ್ತು. ಈ ವೇಳೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮತ್ತೊಬ್ಬ ಕನ್ನಡಿಗ ದೇವದತ್ ಪಡಿಕ್ಕಲ್​ರನ್ನ ಖರೀದಿ ಮಾಡಿದೆ.
ದೇವದತ್ ಪಡಿಕ್ಕಲ್ ಅವರನ್ನು ಆರ್​ಸಿಬಿ ಫ್ರಾಂಚೈಸಿಯು ಹರಾಜಿನಲ್ಲಿ ತಂಡಕ್ಕೆ ಸೇರಿಸಿಕೊಂಡಿದೆ. 2 ಕೋಟಿ ರೂಪಾಯಿಗಳ ಮೂಲ ಬೆಲೆಯನ್ನು ಹೊಂದಿದ್ದ ದೇವದತ್ ಪಡಿಕ್ಕಲ್​ರನ್ನ ಅದೇ ರೇಟ್​ಗೆ ಆರ್​​ಸಿಬಿ, ತಂಡಕ್ಕೆ ತುಂಬಿಕೊಂಡಿದೆ. ಇದರಿಂದ ಆರ್​ಸಿಬಿ ತಂಡಕ್ಕೆ ಮತ್ತೊಬ್ಬ ಕನ್ನಡದ ಆಟಗಾರ ಬಂದಂತೆ ಆಗಿದೆ. ಮೊದಲ ಹಂತ ಹರಾಜಿನಲ್ಲಿ ದೇವದತ್ ಪಡಿಕ್ಕಲ್ ಅವರನ್ನು ಯಾರು ಖರೀದಿ ಮಾಡಿರಲಿಲ್ಲ. ಆದರೆ 2 ನೇ ಬಾರಿ ದೇವದತ್ ಪಡಿಕ್ಕಲ್ ಹೆಸರನ್ನು ಕರೆದಾಗ ಆರ್​ಸಿಬಿ ಪಿಕ್ ಮಾಡಿದೆ.
ಈ ಐಪಿಎಲ್​​ನ ಮೆಗಾ ಆಕ್ಷನ್​​ನಲ್ಲಿ ದೇವದತ್ ಪಡಿಕ್ಕಲ್ ಅವರು ಬೇಸ್ ಬೆಲೆ 2 ಕೋಟಿ ರೂಪಾಯಿಗಳನ್ನು ಹೊಂದಿದ್ದರು. ಅದರಂತೆ ಅದೇ ಮೊತ್ತಕ್ಕೆ ಬೆಂಗಳೂರು ಪಾಲಾಗಿದ್ದಾರೆ. ಪಡಿಕ್ಕಲ್ ಈಗಾಗಲೇ ಟೀಮ್ ಇಂಡಿಯಾವನ್ನು ಪ್ರತಿನಿಧಿಸಿದ್ದಾರೆ. ಪಡಿಕಲ್ ದೇಶೀಯ ಕ್ರಿಕೆಟ್‌ನಲ್ಲಿ ಕರ್ನಾಟಕ ಹಾಗೂ ಐಪಿಎಲ್​ನಲ್ಲಿ ಆರ್​ಸಿಬಿ ಹಾಗೂ ಲಕ್ನೋ ಸೂಪರ್ ಜೈಂಟ್ಸ್ ಪರ ಬ್ಯಾಟ್ ಬೀಸಿದ್ದಾರೆ. ಈಗ ಮತ್ತೆ ಆರ್​ಸಿಬಿ ಕ್ಯಾಂಪ್ ಸೇರಿದ್ದಾರೆ.
2021ರ ಜುಲೈನಲ್ಲಿ ಶ್ರೀಲಂಕಾ ವಿರುದ್ಧದ T20I ಮ್ಯಾಚ್​ ವೇಳೆ ಪಡಿಕಲ್ ಅವರು ಭಾರತ ತಂಡಕ್ಕೆ ಪದಾರ್ಪಣೆ ಮಾಡಿದ್ದರು. ಆದರೆ ಸದ್ಯ ನಡೆಯುತ್ತಿರುವ ಮೆಗಾ ಆಕ್ಷನ್​ನಲ್ಲಿ ಅನ್​ಸೋಲ್ಡ್ ಆಗಿದ್ದ ದೇವದತ್ ಪಡಿಕ್ಕಲ್ ಈಗ ಸೋಲ್ಡ್​ ಆಗಿದ್ದಾರೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ