/newsfirstlive-kannada/media/post_attachments/wp-content/uploads/2025/04/PADIKKAL-2.jpg)
ಪಂಜಾಬ್ ವಿರುದ್ಧ ಕೊನೆಗೂ ಆರ್ಸಿಬಿ ತನ್ನ ಸೇಡು ತೀರಿಸಿಕೊಂಡಿದೆ. ನಿನ್ನೆ ಮಧ್ಯಾಹ್ನ ಚಂಡಿಗಡದಲ್ಲಿ ನಡೆದ ಪಂದ್ಯದಲ್ಲಿ 7 ವಿಕೆಟ್ಗಳ ಭರ್ಜರಿ ಗೆಲುವಿನೊಂದಿಗೆ ಹೊಸ ದಾಖಲೆ ಬರೆದಿದೆ.
ಆರ್ಸಿಬಿ ಗೆಲುವಿಗೆ ಕನ್ನಡಿಗ ದೇವದತ್ತ ಪಡಿಕ್ಕಲ್ ಕೊಡುಗೆ ತುಂಬಾನೇ ಇದೆ. 35 ಬಾಲ್ ಎದುರಿಸಿದ ಪಡಿಕ್ಕಲ್, 174.29 ಸ್ಟ್ರೈಕ್ ರೇಟ್ನಲ್ಲಿ ಬ್ಯಾಟ್ ಬೀಸಿದರು. ಬರೋಬ್ಬರಿ 4 ಸಿಕ್ಸರ್, ಐದು ಬೌಂಡರಿಯೊಂದಿಗೆ 61 ರನ್ಗಳಿಸಿ ಹರ್ಪ್ರಿತ್ ಬ್ರಾರ್ಗೆ ವಿಕೆಟ್ ಒಪ್ಪಿಸಿದರು.
ಇದನ್ನೂ ಓದಿ: ‘ಆತ್ಮರಕ್ಷಣೆಗಾಗಿ ಕೊಲೆ..’ ಒಪ್ಪಿಕೊಂಡ್ರಾ ಓಂಪ್ರಕಾಶ್ ಪತ್ನಿ..? ಭಯಾನಕ ಸತ್ಯ ರಿವೀಲ್..!
ಗೆದ್ದ ಖುಷಿಯಲ್ಲಿ ಮಾತನಾಡಿರುವ ಬ್ಯಾಟಿಂಗ್ಗೆ ಬಂದಾಗ ಕೊಹ್ಲಿ ಜೊತೆ ಉತ್ತಮ ಪಾರ್ಟ್ನರ್ಶಿಪ್ ಕೊಡೋದು ಮುಖ್ಯವಾಗಿತ್ತು. ಸಣ್ಣ ಸ್ಕೋರ್ಗಳು ಕಷ್ಟಕರವಾಗಬಹುದು, ಅದಕ್ಕಾಗಿ ಉತ್ತಮ ಆರಂಭ ನೀಡಬೇಕು ಅಂದ್ಕೊಂಡಿದ್ದೆ. ಕಳೆದ ಕೆಲವು ತಿಂಗಳುಗಳಿಂದ ಕಠಿಣ ಪರಿಶ್ರಮದಲ್ಲಿದ್ದೇನೆ. ಮೆಂಟರ್ ದಿನೇಶ್ ಕಾರ್ತಿಕ್ ಮತ್ತು ಕೋಚ್ ಆಂಡಿ ಫ್ಲವರ್ ಜೊತೆ ಸಮಯ ನೀಡಿದೆ. ಅದು ಈಗ ಹೊರಗೆ ಬಂದಿದೆ.
ಇದನ್ನೂ ಓದಿ: ‘ಗೆಲುವಿನ ಕ್ರೆಡಿಟ್ ಯಾರಿಗೆ ಅಂದರೆ..’ ಗೆದ್ದ ಖುಷಿಯಲ್ಲಿ RCB ಕ್ಯಾಪ್ಟನ್ ಹೊಗಳಿದ್ದು ಯಾರನ್ನ..?
ಇನ್ನೊಂದು ಬದಿಯಲ್ಲಿ ಆತ್ಮವಿಶ್ವಾಸ ಮತ್ತು ಶಾಂತತೆ ಹೊಂದಿರೋರು ಇದ್ದಾಗ ನಮ್ಮ ಕೆಲಸ ಮತ್ತಷ್ಟು ಸುಲಭ. ನನ್ನ ತವರು ರಾಜ್ಯ ಮತ್ತು ನಗರಕ್ಕಾಗಿ ಆಡುವುದು ತುಂಬಾ ವಿಶೇಷವಾಗಿದೆ. ಚಿನ್ನಸ್ವಾಮಿಯಲ್ಲಿ ಆಡುವಾಗ ಹೆಚ್ಚು ವಿಶೇಷ ಎನಿಸುತ್ತದೆ. ತಂಡದಲ್ಲಿ ಸಾಕಷ್ಟು ವಿಶ್ವಾಸವಿದೆ. ಎಲ್ಲರೂ ಚೆನ್ನಾಗಿ ಬ್ಯಾಟಿಂಗ್ ಮಾಡುತ್ತಿದ್ದಾರೆ, ರನ್ ಗಳಿಸುತ್ತಿದ್ದಾರೆ. ತವರಿನ ಅಂಗಳದಲ್ಲಿ ಚೆನ್ನಾಗಿ ಬ್ಯಾಟಿಂಗ್ ಮಾಡಿಲ್ಲ. ಇದನ್ನು ನಾವು ಒಪ್ಪಿಕೊಳ್ಳಬೇಕು, ಅದಕ್ಕಾಗಿ ಜವಾಬ್ದಾರಿ ತೆಗೆದುಕೊಳ್ಳಬೇಕು ಎಂದಿದ್ದಾರೆ.
ಇದನ್ನೂ ಓದಿ: ‘ಮನೆಗೆ ಬರ್ಲಾ ಎಂದೆ, ಬೇಡ ಮೇಡಂ ಇದ್ದಾರೆ ಅಂದ್ರು..’ ಹತ್ಯೆ ಆಗುವ ಮೊದಲು ಓಂ ಪ್ರಕಾಶ್ ಮಾತಾಡಿದ್ದೇನು..?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ