/newsfirstlive-kannada/media/post_attachments/wp-content/uploads/2024/11/DEVADATTA_PADIKAL.jpg)
ಸೌದಿ ಅರೇಬಿಯಾದ ಜೆಡ್ಡಾದಲ್ಲಿ ನಡೆಯುತ್ತಿರುವ ಎರಡು ದಿನಗಳ ಐಪಿಎಲ್ ಮೆಗಾ ಹರಾಜಿನಲ್ಲಿ ಆಟಗಾರರು ಸೇಲ್ ಆಗಿದ್ದಾರೆ. ರಿಷಬ್ ಪಂತ್ ಹಾಗೂ ಶ್ರೇಯಸ್ ಅಯ್ಯರ್ ಇಬ್ಬರು ಐಪಿಎಲ್ ಆಕ್ಷನ್ನಲ್ಲಿ ಭಾರೀ ಹಣವನ್ನು ಕೊಳ್ಳೆ ಹೊಡೆದಿದ್ದಾರೆ. ಫ್ರಾಂಚೈಸಿಗಳು ಕೂಡ ಒಳ್ಳೆಯ ಮಟ್ಟದಲ್ಲೇ ಹೂಡಿಕೆ ಮಾಡುತ್ತಿವೆ. ಸದ್ಯ ಮೆಗಾ ಆಕ್ಷನ್ನಲ್ಲಿ ಕನ್ನಡಿಗ ದೇವದತ್ತ ಪಡಿಕಲ್ ಅವರು ಅನ್ಸೋಲ್ಡ್ ಆಗಿದ್ದಾರೆ.
ಈ ಐಪಿಎಲ್ನ ಮೆಗಾ ಆಕ್ಷನ್ನಲ್ಲಿ ದೇವದತ್ತ ಪಡಿಕಲ್ ಅವರು ಬೇಸ್ ಬೆಲೆ 2 ಕೋಟಿ ರೂಪಾಯಿಗಳನ್ನು ಪಡೆದಿದ್ದರು. ಆದರೆ ಹರಾಜಿನಲ್ಲಿ ಯಾವ ಫ್ರಾಂಚೈಸಿಯು ಪಡಿಕಲ್ ಅವರನ್ನು ಖರೀದಿ ಮಾಡಲು ಮುಂದೆ ಬರಲಿಲ್ಲ. ಹೀಗಾಗಿ ಹರಾಜು ಕೂಗಿದ ಕೆಲವೇ ಕ್ಷಣದಲ್ಲಿ ಅನ್ಸೋಲ್ಡ್ ಪ್ಲೇಯರ್ ಎಂದು ಘೋಷಣೆ ಮಾಡಲಾಯಿತು.
ಇದನ್ನೂ ಓದಿ:IPL 2025 Auction; ಚಹಾಲ್ಗಿಂತ ಅತ್ಯಂತ ಕಡಿಮೆ ದುಡ್ಡು ಪಡೆದ KL ರಾಹುಲ್.. ಎಷ್ಟು ಕೋಟಿಗೆ ಸೇಲ್ ಆದ್ರು?
ದೇವದತ್ ಪಡಿಕ್ಕಲ್ ಅವರು ಟೀಮ್ ಇಂಡಿಯಾವನ್ನು ಪ್ರತಿನಿಧಿಸಿದ್ದಾರೆ. ಪಡಿಕಲ್ ದೇಶೀಯ ಕ್ರಿಕೆಟ್‌ನಲ್ಲಿ ಕರ್ನಾಟಕ ಹಾಗೂ ಐಪಿಎಲ್ನಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಪರ ಆಡಿದ್ದರು. 2021ರ ಜುಲೈನಲ್ಲಿ ಶ್ರೀಲಂಕಾ ವಿರುದ್ಧ T20I ಮ್ಯಾಚ್ ವೇಳೆ ಪಡಿಕಲ್ ಅವರು ಭಾರತ ತಂಡಕ್ಕೆ ಪಾದಾರ್ಪಣೆ ಮಾಡಿದ್ದರು. ಆದರೆ ಸದ್ಯ ನಡೆಯುತ್ತಿರುವ ಮೆಗಾ ಆಕ್ಷನ್ನಲ್ಲಿ ಅನ್ಸೋಲ್ಡ್ ಆಗಿದ್ದಾರೆ. ಇದು ಅವರಿಗೆ ತುಂಬಾ ಬೇಸರ ತರಿಸಿದೆ ಎಂದು ಹೇಳಬಹುದು.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ