/newsfirstlive-kannada/media/post_attachments/wp-content/uploads/2024/12/DEVENDRA-FADNAVIS-MET-SHINDHE.jpg)
ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯ ಫಲಿತಾಂಶ ಬಂದು 11 ದಿನಗಳಾದರೂ ಕೂಡ ಭರ್ಜರಿ ಬಹುಮತ ಪಡೆದ ಮಹಾಯುತಿ ಪಡೆಯ ಸರ್ಕಾರ ರಚನೆ ಆಗಿಲ್ಲ. ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆ ಗಜಪ್ರಸವದಂತಾಗುತ್ತಿದೆಯಾ ಎಂಬ ಅನುಮಾನಗಳ ನಡುವೆಯೇ ಡಿಸೆಂಬರ್ 5 ರಂದು ಸಿಎಂ ಸೇರಿ ಹಲವು ಮಂತ್ರಿಗಳು ಪದಗ್ರಹಣ ಕಾರ್ಯಕ್ರಮಕ್ಕೆ ಸಾಕ್ಷಿಯಾಗಲಿದ್ದಾರೆ ಎಂಬ ಮಾಹಿತಿ ದೊರೆಯುತ್ತಿದೆ.
ಈಗಾಗಲೇ ಮೈತ್ರಿಪಡೆ ಡಿಸೆಂಬರ್ 5ಕ್ಕೆ ಪ್ರಮಾಣ ವಚನ ಕಾರ್ಯಕ್ರಮ ಫಿಕ್ಸ್ ಎಂದೇ ಹೇಳಿಕೊಂಡು ಬಂದಿದ್ದರೂ ಕೂಡ ಸಿಎಂ ಯಾರು ಎಂಬ ಬಗ್ಗೆ ಗುಟ್ಟು ಬಿಟ್ಟುಕೊಟ್ಟಿರಲಿಲ್ಲ. ಇದರ ನಡುವೆ ಅಜಿತ್ ಪವಾರ್ ಅವರ ದೆಹಲಿ ಪ್ರವಾಸ ಹಾಗೂ ಏಕನಾಥ್ ಶಿಂಧೆಯವರ ಆರೋಗ್ಯದಲ್ಲಿ ದಿಢೀರ್ ಏರುಪೇರು ಇವೆಲ್ಲವೂ ಕೂಡ ಹಲವು ಅನುಮಾನಗಳನ್ನು ಹುಟ್ಟಿಸಿದ್ದವು. ಸದ್ಯ ಮಹಾರಾಷ್ಟ್ರದ ಹಂಗಾಮಿ ಸಿಎಂ ಏಕನಾಥ್ ಶಿಂಧೆ ಬಿಜೆಪಿ ನಾಯಕ ದೇವೇಂದ್ರ ಫಡ್ನವಿಸ್​ರನ್ನು ಭೇಟಿ ಮಾಡಿದ್ದು ನಾಳೆ ಅಂದ್ರೆ ಡಿಸೆಂಬರ್ 5 ರಂದು ಪ್ರಮಾಣ ವಚನ ತೆಗೆದುಕೊಳ್ಳುವುದು ಪಕ್ಕಾ ಎಂದಾಗಿದೆ.
ಇದನ್ನೂ ಓದಿ: CM ಆಯ್ಕೆ ಬಿಕ್ಕಟ್ಟು ಮಧ್ಯೆ ದಿಢೀರ್ ಆಸ್ಪತ್ರೆಗೆ ದಾಖಲಾದ ಏಕನಾಥ್ ಶಿಂಧೆ
ಚುನಾವಣೆ ಫಲಿತಾಂಶ ಬಂದ ಬಳಿಕ ಇದೇ ಮೊದಲ ಬಾರಿಗೆ ಉಭಯ ನಾಯಕರು ಭೇಟಿಯಾಗಿದ್ದು, ಬಲ್ಲ ಮೂಲಗಳ ಮಾಹಿತಿ ಪ್ರಕಾರ ಏಕನಾಥ್ ಶಿಂಧೆ ಉಪ ಮುಖ್ಯಮಂತ್ರಿಯಾಗಲು ಒಪ್ಪಿಕೊಂಡಿದ್ದು ಅಧಿಕಾರ ಹಂಚಿಕೆಯ ಬಗ್ಗೆ ಸಮ್ಮತಿ ವ್ಯಕ್ತಪಡಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಬಿಜೆಪಿ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್​ ಮತ್ತೊಮ್ಮೆ ಸಿಎಂ ಗದ್ದುಗೆ ಏರುವುದು ಫಿಕ್ಸ್ ಆಗಿದ್ದು. ಶಿಂಧೆ ಹಾಗೂ ಅಜಿತ್ ಪವಾರ್ ಡೆಪ್ಯೂಟಿ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸುವುದಕ್ಕೆ ಡಿಸೆಂಬರ್ 5ಕ್ಕೆ ವೇದಿಕೆ ಸಿದ್ಧವಾಗಲಿದೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ: ಹೊಸ ಮುಖ್ಯಮಂತ್ರಿ ಆಯ್ಕೆ BJPಗೆ ಚಾಲೆಂಜ್ ಆಯ್ತಾ.. ಮಹಾರಾಷ್ಟ್ರದಲ್ಲಿ ಶಿಂಧೆ ಹಿಡಿದ ಪಟ್ಟು ಏನು?
ಬಲ್ಲ ಮೂಲಗಳ ಮಾಹಿತಿ ಪ್ರಕಾರ ಮೂರು ಪಕ್ಷಗಳು ಅಧಿಕಾರ ಹಂಚಿಕೆಗೆ ಸಂಪೂರ್ಣ ಸಮ್ಮತಿ ನೀಡಿವೆ. ಬಿಜೆಪಿಯಲ್ಲಿ ಸಿಎಂ, ಗೃಹ ಸಚಿವಾಲಯ ಹಾಗೂ ಕಂದಾಯ ಇಲಾಖೆ ಸೇರಿ ಒಟ್ಟು 21 ರಿಂದ 22 ಮಂತ್ರಿಗಳು ಇರಲಿದ್ದಾರೆ. ಶಿವಸೇನೆಯಲ್ಲಿ 16 ಮಂತ್ರಿಗಳು ಪ್ರಮಾಣವಚನ ಸ್ವೀಕರಿಸಲಿದ್ದು, ಇದರಲ್ಲಿ ಒಂದು ಉಪಮುಖ್ಯಮಂತ್ರಿ ಸ್ಥಾನವೂ ಇರಲಿದೆ. ಇನ್ನು ಎನ್​ಸಿಪಿಯಿಂದ 9 ರಿಂದ 10 ಜನ ಶಾಸಕರಿಗೆ ಸಚಿವ ಸ್ಥಾನ ದೊರೆಯಲಿದೆ ಡೆಪ್ಯೂಟಿ ಸ್ಪೀಕರ್ ಹಾಗೂ ಹಣಕಾಸು ಸಚಿವ ಸ್ಥಾನ ಈ ಬಣಕ್ಕೆ ಸಿಗಲಿದೆ ಎಂದು ಹೇಳಲಾಗುತ್ತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us