Advertisment

ದೇವೇಂದ್ರಗೆ ಇಂದು ಪಟ್ಟಾಭಿಷೇಕ.. ಮಹಾರಾಷ್ಟ್ರದ ನೂತನ ಸಿಎಂ ಆಗಿ ಅಧಿಕಾರ

author-image
Ganesh
Updated On
ದೇವೇಂದ್ರಗೆ ಇಂದು ಪಟ್ಟಾಭಿಷೇಕ.. ಮಹಾರಾಷ್ಟ್ರದ ನೂತನ ಸಿಎಂ ಆಗಿ ಅಧಿಕಾರ
Advertisment
  • 3ನೇ ಬಾರಿಗೆ ಸಿಎಂ ಆಗಿ ಫಡ್ನವೀಸ್ ಪದಗ್ರಹಣ
  • ಶಿಂಧೆ, ಪವಾರ್ ಡಿಸಿಎಂ ಆಗಿ ಅಧಿಕಾರ ಸ್ವೀಕಾರ
  • 21-22 ಸಚಿವ ಸ್ಥಾನಗಳು ಬಿಜೆಪಿಗೆ ಸಿಗುವ ನಿರೀಕ್ಷೆ

ಮಹಾರಾಷ್ಟ್ರಕ್ಕೆ ನೂತನ ಸಿಎಂ ಯಾರಾಗ್ತಾರೆ ಎಂಬ ಕುತೂಹಲಕ್ಕೆ ಕೊನೆಗೂ ತೆರೆ ಬಿದ್ದಿದೆ. ಮಹಾಯುತಿ ಮೈತ್ರಿಕೂಟದ ಭಾಗವಾಗಿದ್ದ ಬಿಜೆಪಿಗೆ ಮುಖ್ಯಮಂತ್ರಿ ಪಟ್ಟ ಒಲಿದಿದೆ. ದೇವೇಂದ್ರ ಫಡ್ನವೀಸ್ ನೂತನ ಸಿಎಂ ಆಗಿ ಆಯ್ಕೆಯಾಗಿದ್ದಾರೆ. ಇಂದು ಮುಂಬೈನಲ್ಲಿ ಅದ್ಧೂರಿ ಪಟ್ಟಾಭಿಷೇಕ ನಡೆಯಲಿದೆ.

Advertisment

ದೇವೇಂದ್ರಗೆ ಪಟ್ಟಾಧಿಕಾರ..
ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆ ಕಸರತ್ತಿನ ನಡುವೆ ಎಂಟ್ರಿ ಕೊಟ್ಟಿದ್ದ ಕೇಂದ್ರದ ವೀಕ್ಷಕರು ಶಾಸಕಾಂಗ ಪಕ್ಷದ ಸಭೆ ನಡೆಸಿ ಮಹಾಯುತಿ ಮೈತ್ರಿಕೂಟದ ಮುಖ್ಯಮಂತ್ರಿಯಾಗಿ 54 ವರ್ಷದ ದೇವೇಂದ್ರ ಫಡ್ನವೀಸ್​​ರನ್ನು ಫೈನಲ್ ಮಾಡಿದ್ದಾರೆ. ಕೊನೆಗೂ ಬಿಜೆಪಿ ಶಾಸಕಾಂಗ ಪಕ್ಷದ ನಾಯಕನಿಗೆ ಮಹಾ ಸಿಎಂ ಪಟ್ಟ ಒಲಿದಿದೆ. ಫಡ್ನವೀಸ್​​ಗೆ ಬೆಂಬಲ ನೀಡುವುದಾಗಿ ಶಿಂಧೆ ಶಿವಸೇನೆ ಬಣ ಹಾಗೂ ಅಜಿತ್ ಪವಾರ್ ಎನ್​ಸಿಪಿ ಬೆಂಬಲ ನೀಡುವುದಾಗಿ ನಿರ್ಣಯ ಅಂಗೀಕಾರಿಸಲಾಗಿದೆ.

ಇದನ್ನೂ ಓದಿ:ದೇವೇಂದ್ರ ಫಡ್ನವಿಸ್ ರಿಟರ್ನ್.. ಮಹಾರಾಷ್ಟ್ರ ಸಿಎಂ ಆಯ್ಕೆ ಬಿಕ್ಕಟ್ಟು ಬಗೆಹರಿದಿದ್ದು ಹೇಗೆ?

publive-image

3ನೇ ಬಾರಿಗೆ ಸಿಎಂ ಆಗಿ ಫಡ್ನವೀಸ್ ಪದಗ್ರಹಣ
ಶಾಸಕಾಂಗ ಪಕ್ಷದ ನಾಯಕನಾಗಿ ಆಯ್ಕೆಯಾಗಿರೋ ದೇವೇಂದ್ರ ಫಡ್ನವೀಸ್​ ಇಂದು ಮಹಾರಾಷ್ಟ್ರದ ನೂತನ ಸಿಎಂ ಆಗಿ ಅಧಿಕ್ಕಾರಕ್ಕೇರಲಿದ್ದಾರೆ. ಮುಂಬೈನ ಆಜಾದ್ ಮೈದಾನದಲ್ಲಿ ಸಂಜೆ 5 ಗಂಟೆಗೆ ಪ್ರಮಾಣವಚನ ಸಮಾರಂಭ ಏರ್ಪಡಿಸಲಾಗಿದೆ. 2014ರಲ್ಲಿ ಮೊದಲ ಬಾರಿಗೆ ಸಿಎಂ ಆಗಿದ್ದ ಫಡ್ನವೀಸ್ 44ನೇ ವಯಸ್ಸಿಗೆ ಸಿಎಂ ಪಟ್ಟಕ್ಕೇರಿದ ಅತಿ ಕಿರಿಯ ಎನಿಸಿದ್ದರು. ಸದ್ಯ ಮಹಾರಾಷ್ಟ್ರದ 21ನೇ ಹಾಗೂ ವೈಯಕ್ತಿಕವಾಗಿ 3ನೇ ಬಾರಿಗೆ ಮುಖ್ಯಮಂತ್ರಿಯಾಗಿ ಪಟ್ಟಾಭಿಷಿಕ್ತರಾಗಲಿದ್ದಾರೆ. ಪ್ರಧಾನಿ ಮೋದಿ ಸಮ್ಮುಖದಲ್ಲಿ ಪ್ರಮಾಣವಚನ ಸಮಾರಂಭ ನಡೆಯಲಿದೆ. ಏಕನಾಥ್ ಶಿಂಧೆ, ಹಾಗೂ ಅಜಿತ್ ಪವಾರ್ ಇಬ್ಬರೂ ಡಿಸಿಎಂ ಆಗಲಿದ್ದಾರೆ.

Advertisment

ಇದನ್ನೂ ಓದಿ:ಕಾಂಗ್ರೆಸ್​ನಲ್ಲಿ ಸಿಎಂ ಸ್ಥಾನಕ್ಕೆ ಬಿಗ್​ ಫೈಟ್​​; ನಾನು ಆಕಾಂಕ್ಷಿ ಎಂದ ಸತೀಶ್​ ಜಾರಕಿಹೊಳಿ

ಗೃಹ, ಕಂದಾಯ ಸೇರಿ 21-22 ಸಚಿವ ಸ್ಥಾನಗಳು ಬಿಜೆಪಿಗೆ ಸಿಗುವ ನಿರೀಕ್ಷೆ ಇದೆ. ಸ್ಪೀಕರ್ ಮತ್ತು ವಿಧಾನ ಪರಿಷತ್ ಸಭಾಪತಿ ಸ್ಥಾನಗಳನ್ನು ಉಳಿಸಿಕೊಳ್ಳುವ ನಿರೀಕ್ಷೆ ಇದೆ. ಶಿಂಧೆ ಬಣ 16 ಖಾತೆಗಳಿಗೆ ಬೇಡಿಕೆ ಇಟ್ಟಿದೆ ಎನ್ನಲಾಗಿದೆ. 10-12 ಖಾತೆಗಳು ಎನ್​​ಸಿಪಿ ನಾಯಕರಿಗೆ ಸಿಗಲಿದೆ ಎನ್ನಲಾಗ್ತಿದೆ. ಫಲಿತಾಂಶ ಬಂದಾಗಿನಿಂದಲೂ ನೂತನ ಸಿಎಂ ಯಾರಾಗ್ತಾರೆ ಎಂಬ ಕುತೂಹಲ ಗರಿಗೆದರಿತ್ತು. ಮತ್ತೊಮ್ಮೆ ಏಕನಾಥ ಶಿಂಧೆ ಸಿಎಂ ಆಗಬೇಕು ಅನ್ನೋ ಕೂಗು ಬಲವಾಗಿ ಕೇಳಿಬಂದಿತ್ತು. ಅಜಿತ್​ ಪವಾರ್​ ಬಣ ಕೂಡ ಸಿಎಂ ಕುರ್ಚಿ ಹಕ್ಕೊತ್ತಾಯ ಮಂಡಿಸಿತ್ತು. ಒಟ್ಟಾರೆ, ಪಕ್ಷವನ್ನು ಅಧಿಕಾರಕ್ಕೆ ತರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ದೇವೇಂದ್ರ ಫಡ್ನವೀಸ್​ಗೆ ಮುಖ್ಯಮಂತ್ರಿ ಗಾದಿ ಒಲಿದಿದೆ.

ಇದನ್ನೂ ಓದಿ:ಮಾತು ಬಾರದ, ಕಿವಿ ಕೇಳದ ವೆಂಕಿಯಿಂದ ಗುಡ್​ನ್ಯೂಸ್​​; ನಟ ಚಂದ್ರಶೇಖರ್​ ಶಾಸ್ತ್ರಿ ಪ್ಲಾನ್ ಏನು?

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment