newsfirstkannada.com

ಬಿಜೆಪಿ ಮೊದಲ ವಿಕೆಟ್​ ಪತನ; ಡಿಸಿಎಂ ಪೋಸ್ಟ್​ಗೆ ದೇವೇಂದ್ರ ಫಡ್ನವೀಸ್​​​ ರಾಜೀನಾಮೆ

Share :

Published June 5, 2024 at 4:19pm

Update June 5, 2024 at 4:32pm

    ಬಹುನಿರೀಕ್ಷಿತ 2024ರ ಭಾರತೀಯ ಸಾರ್ವತ್ರಿಕ ಚುನಾವಣೆ

    ಪ್ರಧಾನಿ ಮೋದಿ ನೇತೃತ್ವದ ಬಿಜೆಪಿಗೆ ಸಿಗದ ಸ್ಪಷ್ಟ ಬಹುಮತ

    ಮಹಾರಾಷ್ಟ್ರ ಮತ್ತು ಉತ್ತರ ಪ್ರದೇಶದಲ್ಲಿ ಬಿಜೆಪಿಗೆ ಹಿನ್ನಡೆ!

ಮುಂಬೈ: ಬಹುನಿರೀಕ್ಷಿತ 2024ರ ಭಾರತೀಯ ಸಾರ್ವತ್ರಿಕ ಚುನಾವಣೆ ಫಲಿತಾಂಶ ಹೊರಬಿದ್ದಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್​ಡಿಎಗೆ 293 ಸೀಟು ಬಂದಿವೆ. ಕಾಂಗ್ರೆಸ್​​ ನೇತೃತ್ವದ ಇಂಡಿಯಾ ಅಲಿಯನ್ಸ್​ ಮತ್ತಿತರಿಗೆ 250ಕ್ಕೂ ಹೆಚ್ಚು ಸೀಟುಗಳು ಬಂದಿವೆ. ಅದರಲ್ಲೂ ಬಿಜೆಪಿಗೆ 240 ಸೀಟು ಬಂದಿದ್ದು, ಮಹಾರಾಷ್ಟ್ರ ಮತ್ತು ಉತ್ತರ ಪ್ರದೇಶದಲ್ಲಿ ಭಾರೀ ಹಿನ್ನಡೆ ಆಗಿದೆ.

ಯೆಸ್​​, ಮಹಾರಾಷ್ಟ್ರದ 48 ಲೋಕಸಭಾ ಕ್ಷೇತ್ರಗಳ ಪೈಕಿ ಕೇವಲ 17ರಲ್ಲಿ ಎನ್​ಡಿಎ ಮೈತ್ರಿ ಗೆಲುವು ಸಾಧಿಸಿದೆ. ಇಂಡಿಯಾ ಮೈತ್ರಿಕೂಟ 31 ಕ್ಷೇತ್ರಗಳಲ್ಲಿ ಮೇಲುಗೈ ಸಾಧಿಸಿದ್ದು, ಸೋಲಿನ ಹೊಣೆ ಹೊತ್ತು ಡಿಸಿಎಂ ಸ್ಥಾನಕ್ಕೆ ದೇವೇಂದ್ರ ಫಡ್ನವೀಸ್​​​ ರಾಜೀನಾಮೆ ನೀಡಿದ್ದಾರೆ.

ಇನ್ನು, ಕೇಂದ್ರದಲ್ಲಿ ಎನ್​ಡಿಎ ಸರ್ಕಾರ ರಚನೆ ಮಾಡಬೇಕಾದ ಹೊತ್ತಲ್ಲೇ ಇದು ಬಿಜೆಪಿಗೆ ಬಿಗ್​ ಶಾಕ್​ ಆಗಿದೆ. ಮಹಾರಾಷ್ಟ್ರ ದೇಶದಲ್ಲೇ ಅತೀ ದೊಡ್ಡ 2ನೇ ರಾಜ್ಯ. ಕಳೆದ ಬಾರಿ ಎನ್​ಡಿಎ 41 ಕ್ಷೇತ್ರಗಳಲ್ಲಿ ಗೆದ್ದಿತ್ತು.

ಇದನ್ನೂ ಓದಿ: NDA ಸಭೆಗೂ ಮುನ್ನವೇ ದೊಡ್ಡ ಬೇಡಿಕೆ ಇಟ್ಟ ನಿತೀಶ್ ಕುಮಾರ್.. ಮೋದಿಗೆ ಟೆನ್ಷನ್ ಹೆಚ್ಚಿಸಿದ ಜೆಡಿಯು

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬಿಜೆಪಿ ಮೊದಲ ವಿಕೆಟ್​ ಪತನ; ಡಿಸಿಎಂ ಪೋಸ್ಟ್​ಗೆ ದೇವೇಂದ್ರ ಫಡ್ನವೀಸ್​​​ ರಾಜೀನಾಮೆ

https://newsfirstlive.com/wp-content/uploads/2023/07/devendra.jpg

Load More